Shikhar Dhawan: ಪಂಜಾಬ್ ಕಿಂಗ್ಸ್ ಪ್ಲೇ ಆಫ್ ಗೆ ಅರ್ಹತೆ ಪಡೆಯದ್ದಕ್ಕೆ ಶಿಖರ್ ಧವನ್ ಸ್ಥಿತಿ ಏನಾಗಿದೆ ನೋಡಿ

ಧವನ್ ಅವರನ್ನು ಅವರ ತಂದೆ ಕಾಲಿನಿಂದ ಒದ್ದು ಮನೆಯಿಂದ ಹೊರಗೆ ಅಟ್ಟುತ್ತಿರುವ ಮತ್ತು ಅವರ ಕುಟುಂಬ ಸದಸ್ಯರು ಅವರ ತಂದೆಯನ್ನು ತಡೆಯಲು ಪ್ರಯತ್ನಿಸುತ್ತಿರುವುದನ್ನು ಈ ಕಾಮಿಡಿ ವೀಡಿಯೋದಲ್ಲಿ ನಾವು ನೋಡಬಹುದು. "ಐಪಿಎಲ್ ನಿಂದ ನಾಕ್ಔಟ್ ಆಗಿದ್ದಕ್ಕೆ, ನನ್ನ ತಂದೆಯಿಂದ ನಾಕ್ಔಟ್ ಸಿಕ್ಕಿತು" ಎಂದು ಧವನ್ ವೀಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

 ಶಿಖರ್ ಧವನ್

ಶಿಖರ್ ಧವನ್

  • Share this:
ನೀವು ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) (ಐಪಿಎಲ್) 2022 ಟೂರ್ನಮೆಂಟ್ ಅನ್ನು (Tournament) ನೋಡುತ್ತಿದ್ದರೆ, ಪಂಜಾಬ್ ಕಿಂಗ್ಸ್ (Panjab Kings) ತಂಡವು ಈಗಾಗಲೇ ಟೂರ್ನಮೆಂಟ್ ನಿಂದ ಹೊರಬಿದ್ದಿರುವ ವಿಚಾರದ ಬಗ್ಗೆ ನಿಮಗೆ ತಿಳಿದಿರುತ್ತದೆ ಅಲ್ಲವೇ? ಹೌದು.. ಪಂಜಾಬ್ ಕಿಂಗ್ಸ್ ತಂಡದ ಓಪನರ್ ಆಗಿರುವ ಶಿಖರ್ ಧವನ್ (Shikhar Dawan) ಅವರ ಬ್ಯಾಟ್ ನಿಂದ (Bat) ತುಂಬಾನೇ ರನ್ ಗಳು (Run) ಹರಿದು ಬಂದರೂ ಸಹ ತಂಡವು ಅನೇಕ ಕಾರಣಗಳಿಂದ ಟೂರ್ನಮೆಂಟ್ ನಲ್ಲಿ ಎಡವಿದ್ದು, ಪ್ಲೇ ಆಫ್ ಗೆ (Play off)  ಅರ್ಹತೆ ಪಡೆಯುವಲ್ಲಿ ಈ ಬಾರಿ ವಿಫಲವಾಗಿರುವುದಂತೂ ನಿಜ.

ಬರೀ ಕ್ರಿಕೆಟ್ ಗೆ ಮಾತ್ರ ಜನಪ್ರಿಯರಲ್ಲ
ಬ್ಯಾಟ್ಸ್ಮನ್ ಶಿಖರ್ ಧವನ್ ಅವರು ಬರೀ ತಮ್ಮ ಕ್ರಿಕೆಟ್ ಆಟದಿಂದ ಜನಪ್ರಿಯರಲ್ಲದೆ, ಇನ್ನೊಂದು ವಿಷಯಕ್ಕೂ ತುಂಬಾನೇ ಜನಪ್ರಿಯತೆಯನ್ನು ಇತ್ತೀಚಿನ ದಿನಗಳಲ್ಲಿ ಪಡೆಯುತ್ತಿದ್ದಾರೆ. ಅದೇನು ಅಂದರೆ ಇವರು ಮಾಡುವ ಚಿಕ್ಕಪುಟ್ಟ ಕಾಮಿಡಿ ವೀಡಿಯೋಗಳಿಂದ ಸಹ ತಮ್ಮ ಅಭಿಮಾನಿಗಳನ್ನು ಕ್ರಿಕೆಟ್ ಆಟದ ಮೈದಾನದ ಹೊರಗೂ ಸಹ ಮನರಂಜಿಸುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಪ್ರೀತಿ ಜಿಂಟಾ ಜೊತೆ ಜಿಮ್ ನಲ್ಲಿ ಕಸರತ್ತು
ಇತ್ತೀಚೆಗೆ ಇವರು ನಟಿ ಪ್ರೀತಿ ಜಿಂಟಾ ಅವರೊಂದಿಗೆ ಜಿಮ್ ನಲ್ಲಿ ಕಸರತ್ತು ಮಾಡುತ್ತಿರುವ ಮತ್ತು ಅಲ್ಲಿ ಕಾಮಿಡಿ ಮಾಡಿರುವ ವೀಡಿಯೋವನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಹಂಚಿ ಕೊಂಡಿದ್ದರು. ಈಗ ಮತ್ತೊಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ, ಆ ವಿಡಿಯೋ ನೋಡಿದ ನಿಮಗೆ ರೆ 'ಐಪಿಎಲ್ ನಲ್ಲಿ ಪ್ಲೇ ಆಫ್ ಗೆ ಅರ್ಹತೆ ಪಡೆಯುವಲ್ಲಿ ಪಂಜಾಬ್ ಕಿಂಗ್ಸ್ ತಂಡವು ವಿಫಲರಾಗಿದ್ದಕ್ಕೆ ಶಿಖರ್ ಧವನ್ ಅವರನ್ನು ಅವರ ತಂದೆ ಮನೆಯಿಂದ ಒದ್ದು ಓಡಿಸುತ್ತಿದ್ದಾರೆಯೇ’ ಎಂದು ಅನ್ನಿಸಬಹುದು.

ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡ ಆಟಗಾರ
ಈ ಐಪಿಎಲ್ ಋತುವಿನ ಆರಂಭಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡ ಅನುಭವಿ ಬ್ಯಾಟ್ಸ್ಮನ್, 14 ಪಂದ್ಯಗಳಲ್ಲಿ 38.3 ಸರಾಸರಿಯಲ್ಲಿ 460 ರನ್ ಗಳಿಸಿದ್ದಾರೆ. ಆದಾಗ್ಯೂ, ಅವರು ತಮ್ಮ ತಂಡವನ್ನು ಪ್ಲೇ ಆಫ್ ಗೆ ಕೊಂಡೊಯ್ಯಲು ಆಶಿಸುತ್ತಿದ್ದರು.

ಇದನ್ನೂ ಓದಿ: Rohit Sharma: ಐಪಿಎಲ್ ನಂತರ ಮಾಲ್ಡೀವ್ಸ್‌ಗೆ ಹಾರಿದ ರೋಹಿತ್, ರಿತಿಕಾ ಜೊತೆಗಿನ ಕ್ಯೂಟ್ ಫೋಟೋ ಹಂಚಿಕೊಂಡ ಹಿಟ್​ಮ್ಯಾನ್

ತಮ್ಮ ತಮಾಷೆಯ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಿಗೆ ಹೆಸರುವಾಸಿಯಾಗಿರುವ ಧವನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಮತ್ತೊಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ, ಅವರು ತಮ್ಮ ಅಭಿಮಾನಿಗಳನ್ನು ನಗಿಸಲು ಪ್ರಯತ್ನಿಸಿದ್ದಾರೆ.

ಮತ್ತೊಂದು ವಿಡಿಯೋ ವೈರಲ್
ಈ ವೀಡಿಯೋದಲ್ಲಿ, ಧವನ್ ಅವರನ್ನು ಅವರ ತಂದೆ ಕಾಲಿನಿಂದ ಒದ್ದು ಮನೆಯಿಂದ ಹೊರಗೆ ಅಟ್ಟುತ್ತಿರುವ ಮತ್ತು ಅವರ ಕುಟುಂಬ ಸದಸ್ಯರು ಅವರ ತಂದೆಯನ್ನು ತಡೆಯಲು ಪ್ರಯತ್ನಿಸುತ್ತಿರುವುದನ್ನು ಈ ಕಾಮಿಡಿ ವೀಡಿಯೋದಲ್ಲಿ ನಾವು ನೋಡಬಹುದು. "ಐಪಿಎಲ್ ನಿಂದ ನಾಕ್ಔಟ್ ಆಗಿದ್ದಕ್ಕೆ, ನನ್ನ ತಂದೆಯಿಂದ ನಾಕ್ಔಟ್ ಸಿಕ್ಕಿತು" ಎಂದು ಧವನ್ ವೀಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
ಈ ವೀಡಿಯೋವನ್ನು ನೋಡಿದ ಇವರ ಅಭಿಮಾನಿಗಳು ಮಾತ್ರ ನಕ್ಕಿದ್ದೆ ನಕ್ಕಿದ್ದು, ವೀಡಿಯೋ ಈಗಾಗಲೇ 10 ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಗಳನ್ನು ಪಡೆದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೀಡಿಯೋಗೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, "ನಿಮ್ಮ ತಂದೆ ನಿಮಗಿಂತಲೂ ಒಳ್ಳೆಯ ನಟ ಎಂದು ತಿಳಿಯಿತು” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಪಂಜಾಬ್ ಕಿಂಗ್ಸ್ ತಂಡದ ಇನ್ನೊಬ್ಬ ಆಟಗಾರ ಹರ್ಪ್ರೀತ್ ಬ್ರಾರ್ ಕೂಡ ಈ ಪೋಸ್ಟ್ ಗೆ ಪ್ರತಿಕ್ರಿಯಿಸಿ, "ಅಂಕಲ್ ತುಂಬಾನೇ ಸಿಟ್ಟಿನಲ್ಲಿದ್ದಾರೆ ಪಾಜಿ" ಎಂದು ಬರೆದಿದ್ದಾರೆ.

ಇದನ್ನೂ ಓದಿ:  Jos Buttler: ಜೋಸ್ ಬಟ್ಲರ್ ನನ್ನ 2ನೇ ಪತಿ, ವೈರಲ್ ಆಯ್ತು ಸ್ಟಾರ್ ಕ್ರಿಕೆಟಿಗನ ಪತ್ನಿ ಹೇಳಿಕೆ

ಪಂಜಾಬ್ ಕಿಂಗ್ಸ್ ತಂಡವು ಆಡಿದ 14 ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಐಪಿಎಲ್ ಪಾಯಿಂಟ್ಸ್ ಟೇಬಲ್ ನಲ್ಲಿ ಆರನೇ ಸ್ಥಾನದಲ್ಲಿದೆ. ಮಯಾಂಕ್ ಅಗರ್ವಾಲ್ ನೇತೃತ್ವದ ತಂಡವು ಈ ಋತುವನ್ನು ಚೆನ್ನಾಗಿಯೇ ಪ್ರಾರಂಭಿಸಿತ್ತು, ಆದರೆ ಒಂದರ ನಂತರ ಇನ್ನೊಂದು ಎಂಬಂತೆ ಕಂಡ ಸೋಲುಗಳಿಂದ ಪ್ಲೇ ಆಫ್ ಗೆ ಅರ್ಹತೆ ಪಡೆದಿಲ್ಲ. ಉತ್ತಮವಾಗಿ ರನ್ ಗಳಿಸಿದರೂ ಸಹ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಮುಂಬರುವ ಟ್ವೆಂಟಿ20 ಸರಣಿಗೆ ಧವನ್ ಅವರನ್ನು ಬಿಸಿಸಿಐ ನಿರ್ಲಕ್ಷಿಸಿದೆ ಎಂದು ಹೇಳಲಾಗುತ್ತಿದೆ.
Published by:Ashwini Prabhu
First published: