ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದಲ್ಲಿ ಮದುವೆಯ ಹವಾ ಜೋರಾಗಿದೆ. ಇತ್ತೀಚೆಗೆ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul) ಅವರು ಬಾಲಿವುಡ್ ನಟಿ ಅಥಿಯಾ ಶೆಟ್ಟಿ (Athiya Shetty) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಾದ ಬಳಿಕ ಆಲ್ ರೌಂಡರ್ ಅಕ್ಷರ್ ಪಟೇಲ್ (Axar Patel) ಗೆಳತಿ ಮೇಹಾ ಪಟೇಲ್ ಅವರನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಂಡರು. ಇದೀಗ ಟೀಂ ಇಂಡಿಯಾದ ಶಾರ್ದೂಲ್ ಠಾಕೂರ್ (Shardul Thakur) ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಶಾರ್ದೂಲ್ ಠಾಕೂರ್ ಮತ್ತು ಮಿಥಾಲಿ ಪಾರುಲ್ಕರ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕೆಲವು ತಿಂಗಳ ಹಿಂದೆ, ಸಂದರ್ಶನವೊಂದರಲ್ಲಿ, ವಧು ಮಿಥಾಲಿ ಪಾರುಲ್ಕರ್ ಅವರೇ ತಮ್ಮ ಮದುವೆಯನ್ನು ಅಧಿಕೃತವಾಗಿ ಘೋಷಿಸಿದ್ದರು.
ಭರ್ಜರಿ ವಿವಾಹ ಕಾರ್ಯಕ್ರಮ:
ಶಾರ್ದೂಲ್ ಠಾಕೂರ್ ಮದುವೆಗೆ ಸಿದ್ಧತೆಗಳು, ವಿಧಿವಿಧಾನಗಳು ಆರಂಭವಾಗಿದೆ. ಅರಿಶಿನ, ಸಂಗೀತ ಮತ್ತು ಗೋರಂಟಿ ಆಚರಣೆಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಶಾರ್ದೂಲ್ ಠಾಕೂರ್ ಪ್ರತಿ ಸಮಾರಂಭದಲ್ಲಿ ವಿಭಿನ್ನ ಕುರ್ತಾ ಧರಿಸಿ ಸುಂದರವಾಗಿ ಕಾಣುತ್ತಿದ್ದಾರೆ. ಮತ್ತೊಂದೆಡೆ ಮಿಥಾಲಿ ಕೂಡ ತುಂಬಾ ಸುಂದರವಾಗಿ ಮಿಂಚಿದ್ದಾರೆ.
View this post on Instagram
View this post on Instagram
ಶಾರ್ದೂಲ್ ಠಾಕೂರ್ ಮತ್ತು ಮಿಥಾಲಿ ಪಾರುಲ್ಕರ್ ಇಬ್ಬರೂ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಬ್ಬರೂ ಬಹಳ ದಿನಗಳಿಂದ ಒಬ್ಬರಿಗೊಬ್ಬರು ಡೇಟಿಂಗ್ ನಡೆಸುತ್ತಿದ್ದರು. ಶಾರ್ದೂಲ್ ಮತ್ತು ಮಿಥಾಲಿ ನವೆಂಬರ್ 2021ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶಾರ್ದೂಲ್ ಮತ್ತು ಮಿಥಾಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮದುವೆಯಾಗಬೇಕಿತ್ತು, ಆದರೆ ಕಾರಣಾಂತರದಿಂದ ಅದು ಸಾಧ್ಯವಾಗಲಿಲ್ಲ. ಇದಾದ ನಂತರ ಮದುವೆಯ ದಿನಾಂಕವನ್ನು ಮುಂದೆ ಹಾಕಲಾಗಿತ್ತು. ಈಗ ಅಂತಿಮವಾಗಿ 27 ಫೆಬ್ರವರಿ 2023ರಂದು ಅಂದರೆ ಇಂದು ಶಾರ್ದೂಲ್ ಮತ್ತು ಮಿಥಾಲಿ ಪರಸ್ಪರರ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಇದನ್ನೂ ಓದಿ: IPL 2023: ರೋಹಿತ್ ಪಡೆಗೆ ಬಿಗ್ ಶಾಕ್, ಸ್ಟಾರ್ ಬೌಲರ್ ಐಪಿಎಲ್ನಿಂದ ಔಟ್?
ಶಾರ್ದೂಲ್ ವೃತ್ತಿ ಜೀವನ:
ಟೀಂ ಇಂಡಿಯಾ ಪರ ಶಾರ್ದೂಲ್ ಠಾಕೂರ್ 24 ಏಕದಿನ ಪಂದ್ಯಗಳನ್ನು ಆಡಿದ್ದು, 33 ವಿಕೆಟ್ಗಳನ್ನು ಉರುಳಿಸಿದ್ದಾರೆ. 31 ಏಕದಿನ ಪಂದ್ಯಗಳಿಂದ 44 ವಿಕೆಟ್ ಹಾಗೂ 8 ಟೆಸ್ಟ್ ಪಂದ್ಯಗಳಿಂದ 27 ವಿಕೆಟ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 3 ಅರ್ಧ ಶತಕಗಳೊಂದಿಗೆ 254 ರನ್ ಕೂಡ ಗಳಿಸಿದ್ದಾರೆ.
ಇನ್ನು, ಐಪಿಎಲ್ನಲ್ಲಿ ಶಾರ್ದೂಲ್ ಠಾಕೂರ್ ಅವರು ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ಮಿತಾಲಿ ಪಾರುಲ್ಕರ್ ಅವರು ಉದ್ಯಮಿಯಾಗಿದ್ದಾರೆ. ಅವರು ದಿ ಬೇಕ್ಸ್ ಎಂಬ ಸಂಸ್ಥೆಯ ಸ್ಥಾಪಕಿಯಾಗಿದ್ದಾರೆ. ಇದರ ಜೊತೆ ಬೇಕರಿ ತಿನಿಸುಗಳ ಉದ್ಯಮವನ್ನು ಹೊಂದಿದ್ದಾರೆ. ಇವುಗಳೊಂದಿಗೆ ಮಿಥಾಲಿ ಅವರು ತಮ್ಮದೇ ಆದ, ಮಿಥಾಲಿ ಆಲ್ ದಿ ಜಾಝ್ ಎಂಬ ಐಷಾರಾಮಿ ಬೇಕರ್ಸ್ ಸಂಸ್ಥೆ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ