ಧವನ್ ಬದಲು ರೋಹಿತ್ ಜೊತೆ ಪಂತ್ ಕಣಕ್ಕಿಳಿದರೆ ಇನ್ನೂ ಉತ್ತಮ: ಇದು ಕ್ರಿಕೆಟ್ ದಿಗ್ಗಜನ ಮಾತು

ರಿಷಭ್ ಪಂತ್ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಬೇಕು ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾರ್ನ್​​ ಹೇಳಿದ್ದಾರೆ. ಇವರ ಈ ಹೇಳಿಕೆಗೆ ಸುನೀಲ್ ಗವಾಸ್ಕರ್​​​ ಕೂಡ ಧ್ವನಿಗೂಡಿಸಿದ್ದಾರೆ.

Vinay Bhat | news18
Updated:February 15, 2019, 9:58 PM IST
ಧವನ್ ಬದಲು ರೋಹಿತ್ ಜೊತೆ ಪಂತ್ ಕಣಕ್ಕಿಳಿದರೆ ಇನ್ನೂ ಉತ್ತಮ: ಇದು ಕ್ರಿಕೆಟ್ ದಿಗ್ಗಜನ ಮಾತು
ರಿಷಭ್ ಪಂತ್
  • News18
  • Last Updated: February 15, 2019, 9:58 PM IST
  • Share this:
ತನ್ನ ಸ್ಪೋಟಕ ಬ್ಯಾಟಿಂಗ್​​ನಿಂದ ಸುದ್ದಿಯಲ್ಲಿರುವ ಟೀಂ ಇಂಡಿಯಾ ಯುವ ಆಟಗಾರ ರಿಷಭ್ ಪಂತ್ ಆಯ್ಕೆದಾರರ ಮನತಟ್ಟಿ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ-20 ಹಾಗೂ ಏಕದಿನ ಸರಣಿಯಲ್ಲಿ ತನ್ನ ಹೆಸರನ್ನು ಭದ್ರ ಪಡಿಸಿಕೊಂಡಿದ್ದಾರೆ. ಈಗಾಗಲೇ ಅನೇಕ ಕ್ರಿಕೆಟ್ ದಿಗ್ಗಜರು ಪಂತ್​ ಬಗ್ಗೆ ಹಾಡಿಹೊಗಳಿದ್ದು, ಈ ಸಾಲಿಗೆ ಮತ್ತೊಬ್ಬ ಕ್ರಿಕೆಟಿಗ ಸೇರಿದ್ದಾರೆ.

ರಿಷಭ್ ಪಂತ್ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಬೇಕು ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾರ್ನ್​​ ಹೇಳಿದ್ದಾರೆ. ಇವರ ಈ ಹೇಳಿಕೆಗೆ ಧ್ವನಿಗೂಡಿಸಿರುವ ಮತ್ತೊಬ್ಬ ಕ್ರಿಕೆಟ್ ದಿಗ್ಗಜ ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ರೋಹಿತ್ ಜೊತೆ ಪಂತ್ ಓಪನರ್ ಆಗಿ ಆಡಿದರೆ ಉತ್ತಮ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಬ್ಬಾ..! ಐಪಿಎಲ್ ಇತಿಹಾಸದಲ್ಲೂ ಇದೆ ಸಿಕ್ಸರ್​​​ಗಳ ಸರದಾರನ​​ ದಾಖಲೆಗಳು

'ಪಂತ್ ಒಬ್ಬ ಅದ್ಭುತ ಆಟಗಾರ. ಅವರನ್ನು ಯಾವ ಕ್ರಮಾಂಕದಲ್ಲಿ ಆಡಲು ಇಳಿಸಿದರು, ತಮ್ಮ ಪಾತ್ರವನ್ನು ಸಂಪೂರ್ಣವಾಗಿ ಪೂರೈಸುತ್ತಾರೆ. ಅಂತೆಯ ಮೂರನೇ ಆಯ್ಕೆಯಾಗಿ ಪಂತ್ ಅವರನ್ನು ಓಪನರ್ ಆಗಿ ಇಟ್ಟುಕೊಳ್ಳಬಹುದು' ಎಂದು ಗವಾಸ್ಕರ್​ ಹೇಳಿದ್ದಾರೆ.

ಇದಕ್ಕೂ ಮೊದಲು ಮಾತನಾಡಿದ ಶೇನ್ ವಾರ್ನ್​​, 'ಭಾರತದ ವಿಶ್ವಕಪ್ ತಂಡದಲ್ಲಿ ಎಂ ಎಸ್ ಧೋನಿ ಹಾಗೂ ರಿಷಭ್ ಪಂತ್ ಇಬ್ಬರು ಆಡಬೇಕು. ಪಂತ್ ಬ್ಯಾಟಿಂಗ್ ಮಾಡುವ ಶೈಲಿ ವಿಭಿನ್ನವಾಗಿದೆ. ಟೀಂ ಇಂಡಿಯಾ ಪರ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಉತ್ತಮ ಜೋಡಿ. ಆದರೆ, ರೋಹಿತ್ ಜೊತೆ ಪಂತ್ ಓಪನರ್ ಆಗಿ ಕಣಕ್ಕಿಳಿದರೆ ಭಾರತಕ್ಕೆ ಮತ್ತಷ್ಟು ಉಪಯೋಗವಾಗಲಿದೆ' ಎಂದು ವಾರ್ನ್​ ಹೇಳಿದ್ದಾರೆ.

First published: February 15, 2019, 9:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading