ಕ್ರಿಕೆಟ್ ಜಗತ್ತಿನಲ್ಲಿ ಸ್ಪಿನ್ ಮಾಂತ್ರಿಕ ಎಂದರೆ ಮೊದಲು ಕ್ರಿಕೆಟ್ ಅಭಿಮಾನಿಗಳಿಗೆ ನೆನಪಾಗುವುದೇ ಆಸ್ಟ್ರೇಲಿಯಾದ ದಿವಂಗತ ಸ್ಪಿನ್ನರ್ ಶೇನ್ ವಾರ್ನ್ (Shane Warne) ಅಂತ ಹೇಳಬಹುದು. ಹೌದು, ತಮ್ಮ ಸ್ಪಿನ್ ಕೈಚಳಕದಿಂದ ಕ್ರಿಕೆಟ್ (Cricket) ಜಗತ್ತಿನಲ್ಲಿಯೇ ಅನೇಕ ಬ್ಯಾಟರ್ ಗಳ ನಿದ್ದೆ ಕೆಡಿಸಿದ್ದ ಬೌಲರ್ ಗಳ ಸಾಲಿನಲ್ಲಿ ಇವರು ಒಬ್ಬರಾಗಿದ್ದರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆಸ್ಟ್ರೇಲಿಯಾ (Australia ) ಕ್ರಿಕೆಟ್ ತಂಡದ ಪರ ಆಡಿದಷ್ಟೂ ವರ್ಷಗಳ ಕಾಲ ಅನೇಕ ದೇಶಗಳ ಪರ ಕ್ರಿಕೆಟ್ ಆಡಿದ ಬ್ಯಾಟರ್ ಗಳ ಮೇಲೆ ತಮ್ಮ ಸ್ಪಿನ್ ಬೌಲಿಂಗ್ ನಿಂದ ಅಟ್ಟಹಾಸ ಮೆರೆದಿದ್ದಂತೂ ನಿಜ. ಆದರೆ ಈ ಸ್ಪಿನ್ ಮಾಂತ್ರಿಕ ಕಳೆದ ವರ್ಷ ಮಾರ್ಚ್ 4 ರಂದು ಹೃದಯಾಘಾತದಿಂದ ನಿಧನರಾದರು. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರ 145 ಟೆಸ್ಟ್ ಹಾಗೂ 194 ಏಕದಿನ ಪಂದ್ಯಗಳನ್ನಾಡಿರುವ ವಾರ್ನ್ ಕ್ರಮವಾಗಿ 708 ಹಾಗೂ 293 ವಿಕೆಟ್ ಕಬಳಿಸಿದ್ದರು.
ದಿವಂಗತ ಸ್ಪಿನ್ನರ್ ಶೇನ್ ವಾರ್ನ್ ಅವರ ಆಸ್ತಿ ಎಷ್ಟಿದೆ ಗೊತ್ತೇ?
ಆಸ್ಟ್ರೇಲಿಯಾದ ಖ್ಯಾತ ಸ್ಪಿನ್ನರ್ ಶೇನ್ ವಾರ್ನ್, ತಮ್ಮ ಆಸ್ತಿಯ ಬಹುಭಾಗವನ್ನು ತಮ್ಮ ಮೂವರು ಮಕ್ಕಳಿಗೆ ಸಮಾನವಾಗಿ ಹಂಚಿದ್ದಾರೆ. ಅವರ ಆಸ್ತಿಯ ಮೌಲ್ಯ 120 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ವಿಕ್ಟೋರಿಯಾದ ಸರ್ವೋಚ್ಚ ನ್ಯಾಯಾಲಯವು ಬುಧವಾರ ಅವರ ಅಂತಿಮ ವಿಲ್ನ್ನು ಬಹಿರಂಗಗೊಳಿಸಿದ ನಂತರ, ಈ ಮಾಹಿತಿ ಬೆಳಕಿಗೆ ಬಂದಿತು.
ವಾರ್ನ್ ಅವರ ಮಕ್ಕಳ ಜೊತೆಗೆ, ವಾರ್ನ್ ಅವರ ಸಹೋದರ ಜೇಸನ್ ಮಾಜಿ ಕ್ರಿಕೆಟಿಗ ಬಿಟ್ಟು ಹೋದ 2 ಪ್ರತಿಶತ ಹಣವನ್ನು ಪಡೆಯುತ್ತಾರೆ ಮತ್ತು ಅವರ ಸೋದರ ಸೊಸೆ ಟೈಲಾ ಮತ್ತು ಸೋದರಳಿಯ ಸೆಬಾಸ್ಟಿಯನ್ ತಲಾ 2 ಪ್ರತಿಶತದಷ್ಟು ಹಣವನ್ನು ಪಡೆಯುತ್ತಾರೆ ಅಂತ ಹೇಳಲಾಗುತ್ತಿದೆ.
ಇದನ್ನೂ ಓದಿ: WPL 2023: ಆರ್ಸಿಬಿ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್, ತಂಡಕ್ಕೆ ಎಂಟ್ರಿ ಕೊಟ್ಟ ಮೂಗುತಿ ಸುಂದರಿ
ಹೆಂಡತಿಯರಿಗಿಲ್ಲ ಆಸ್ತಿ:
ಹೆರಾಲ್ಡ್ ಸನ್ ಪ್ರಕಾರ, ವಾರ್ನ್ ತಮ್ಮ ಮಗ ಜಾಕ್ಸನ್ ಅವರಿಗೆ ತಮ್ಮ 3 ಕೋಟಿ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ವಾಹನ ಸಂಗ್ರಹವನ್ನು ಬಿಟ್ಟು ಹೋಗಿದ್ದಾರೆ. ಆದಾಗ್ಯೂ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ವಾರ್ನ್ ತಮ್ಮ ಮಾಜಿ ಪತ್ನಿ ಸಿಮೋನ್ ಕ್ಯಾಲಹಾನ್ ಮತ್ತು ಅವರ ಹಾಲಿ ಪತ್ನಿ ಲಿಜ್ ಹರ್ಲಿಗೆ ಯಾವುದೇ ರೀತಿಯ ಆಸ್ತಿಯಲ್ಲಿ ಪಾಲು ಕೊಟ್ಟಿಲ್ಲ.
ಶೇನ್ ವಾರ್ನ್ ಪೋರ್ಟ್ಸೀಯಲ್ಲಿ 6.5 ಮಿಲಿಯನ್ ಡಾಲರ್ ಮೌಲ್ಯದ ಮನೆ ಮತ್ತು 2 ಮಿಲಿಯನ್ ಡಾಲರ್ ವೈಯಕ್ತಿಕ ವಸ್ತುಗಳನ್ನು ಹೊಂದಿದ್ದಾರೆ. ಇದಲ್ಲದೆ, ಅವರ ಆಸ್ಟ್ರೇಲಿಯಾದ ಬ್ಯಾಂಕ್ ಖಾತೆಯಲ್ಲಿ 5 ಮಿಲಿಯನ್ ಡಾಲರ್ ಮತ್ತು ಪ್ರತ್ಯೇಕ ಖಾತೆಯಲ್ಲಿ 500,000 ಡಾಲರ್ ಇತ್ತು. ಅವರು 3 ಮಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಸಹ ಹೊಂದಿದ್ದರು. ಈಗ ವಾರ್ನ್ ಅವರ ಉಯಿಲಿಗೆ ಪ್ರಾಬೆಟ್ ನೀಡಲಾಗಿದೆ, ಅವರ ಕಾರ್ಯನಿರ್ವಾಹಕರು ಅವರ ಆಸ್ತಿಯನ್ನು ಫಲಾನುಭವಿಗಳ ನಡುವೆ ಹಂಚಲು ಸಾಧ್ಯವಾಗುತ್ತದೆ ಎಂದು ವರದಿಯಾಗಿದೆ.
ಥೈಲ್ಯಾಂಡ್ ನಲ್ಲಿ ರಜಾದಿನ ಕಳೆಯುತ್ತಿದ್ದಾಗ ನಿಧನ:
ಶೇನ್ ಅವರು ಥೈಲ್ಯಾಂಡ್ ನಲ್ಲಿ ತಮ್ಮ ರಜಾದಿನಗಳನ್ನು ಕಳೆಯುತ್ತಿದ್ದಾಗ ಕುಸಿದು ಬಿದ್ದು 52ನೇ ವಯಸ್ಸಿನಲ್ಲಿ ನಿಧನರಾದರು. ಈ ಸುದ್ದಿಯು ಕ್ರಿಕೆಟ್ ಜಗತ್ತನ್ನು ದಿಗ್ಭ್ರಮೆಗೊಳಿಸಿತು, ಏಕೆಂದರೆ ಅದು ತನ್ನ ದೇಶದ ಮಹಾನ್ ಸ್ಪಿನ್ ಬೌಲರ್ ಅನ್ನು ಕಳೆದುಕೊಂಡಿತ್ತು.
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆದ ಶೇನ್ ವಾರ್ನ್ ಅವರ ಅಂತ್ಯಕ್ರಿಯೆಯಲ್ಲಿ 50,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು, ಏಕೆಂದರೆ ಅವರು ವಿಕ್ಟೋರಿಯನ್ ಹುಡುಗನಾಗಿದ್ದರಿಂದ ಇದನ್ನು ಅವರ ತವರು ಮೈದಾನ ಎಂದು ಕರೆಯಲಾಗುತ್ತಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ