Shane Warne: ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರನ ಕ್ರಿಕೆಟ್ ಪಯಣ

ಕ್ರಿಕೆಟ್‌ ಜಗತ್ತು ಕಂಡ ಸರ್ವ ಶ್ರೇಷ್ಠ ಆಟಗಾರರಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಪ್ಲೇಯರ್ ಶೇನ್‌ ವಾರ್ನ್‌ ಅವರ ಹೆಸರನ್ನ ಎಂದಿಗೂ ಮರೆಯಲು ಸಾಧ್ಯವಿಲ್ಲ. ತಮ್ಮ ಚಾಣಾಕ್ಷ ಸ್ಪಿನ್‌ ಮೂಲಕವೇ ಮೋಡಿ ಮಾಡಿರುವ ಈ ಸ್ಪಿನ್‌ ಜಾದುಗಾರ ಇನ್ನು ನಮಗೆ ನೆನಪು ಮಾತ್ರ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕ್ರಿಕೆಟ್‌ ಜಗತ್ತು ಕಂಡ ಸರ್ವ ಶ್ರೇಷ್ಠ ಆಟಗಾರರಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಪ್ಲೇಯರ್ ಶೇನ್‌ ವಾರ್ನ್‌ (Shane Warne) ಅವರ ಹೆಸರನ್ನ ಎಂದಿಗೂ ಮರೆಯಲು ಸಾಧ್ಯವಿಲ್ಲ. ತಮ್ಮ ಚಾಣಾಕ್ಷ ಸ್ಪಿನ್‌ ಮೂಲಕವೇ ಮೋಡಿ ಮಾಡಿರುವ ಈ ಸ್ಪಿನ್‌ ಜಾದುಗಾರ ಇನ್ನು ನಮಗೆ ನೆನಪು ಮಾತ್ರ. ಹೌದು, 52 ವರ್ಷದ ಶೇನ್‌ ವಾರ್ನ್‌ ಥೈಲ್ಯಾಂಡ್‌ನಲ್ಲಿ (Thailand) ಕಳೆದ ರಾತ್ರಿ ಹೃದಯಾಘಾತದಿಂದ ನಿಧನರಾದರು. ಶೇನ್‌ ವಾರ್ನ್‌ ಅವರ ಅಗಲಿಕೆ ಕೇವಲ ಕ್ರಿಕೆಟ್‌ (Cricket) ಲೋಕಕ್ಕೆ ಮಾತ್ರವಲ್ಲದೇ, ಕ್ರಿಕೆಟ್‌ ಅಂಗಳದಲ್ಲಿ ಅವರು ಮಾಡಿದ್ದ ಸ್ಪಿನ್‌ ಮ್ಯಾಜಿಕ್‌ಗೆ ಸಾಕ್ಷಿಯಾಗಿದ್ದ ಕೋಟ್ಯಾಂತರ ಕ್ರಿಕೆಟ್‌ ಅಭಿಮಾನಿಗಳಿಗೂ ಆಘಾತವನ್ನುಂಟು ಮಾಡಿದೆ. ’ಸ್ಪಿನ್‌ ಡಾಕ್ಟರ್‌’ (Spin doctor) ಎಂದೇ ಕರೆಯಲ್ಪಡುತ್ತಿದ್ದ ಶೇನ್‌ ವಾರ್ನ್‌ ಅಗಲಿಕೆಗೆ ವಿಶ್ವ ಕ್ರಿಕೆಟ್‌ನ ಹಾಲಿ ಹಾಗೂ ಮಾಜಿ ಆಟಗಾರರು ಕಂಬನಿ ಮಿಡಿದಿದ್ದಾರೆ. ಈ ನಡುವೆ ವಾರ್ನ್‌ ಅವರೊಂದಿಗೆ ಆಡುವ ಹಾಗೂ ಅವರ ಆಟವನ್ನು ಹತ್ತಿರದಿಂದ ನೋಡಿರುವ ಕ್ರಿಕೆಟಿಗರು ಶೇನ್‌ ವಾರ್ನ್‌ ಅವರ ವ್ಯಕ್ತಿತ್ವ, ಆಟದ ವೈಖರಿ ಹಾಗೂ ಅವರ ಜೊತೆಗಿನ ಒಡನಾಡವನ್ನು ನೆನೆದು ಭಾವುಕರಾಗಿದ್ದಾರೆ.

ಶೇನ್ ವಾರ್ನ್ ನೆನೆದ ಗಿಲ್ ಕ್ರಿಸ್ಟ್:

ಶೇನ್‌ ವಾರ್ನ್‌ ಅವರೊಂದಿಗೆ ಆಸ್ಟ್ರೇಲಿಯಾ ತಂಡದಲ್ಲಿ ಹಲವು ವರ್ಷಗಳ ಕಾಲ ವಿಕೆಟ್‌ ಕೀಪರ್‌ ಆಗಿದ್ದ ಆಡಿರುವ ಆಡಂ ಗಿಲ್‌ಕ್ರಿಸ್ಟ್‌, ಶೇನ್‌ ವಾರ್ನ್‌ ಅವರು ಕೇವಲ ಮೈದಾನದಲ್ಲಿ ಬೌಲರ್‌ ಆಗಿರದೆ, ಪಂದ್ಯದ ಕೊನೆ ಕ್ಷಣದವರೆಗೂ ಒಬ್ಬ ಜಾದೂಗಾರನಂತೆ ಇರುತ್ತಿದ್ದರು ಎಂದು ತಮ್ಮದೇ ಪದಗಳಿಂದ ಬಣ್ಣಿಸಿದ್ದಾರೆ. ಆಡಂ ಗಿಲ್‌ಕ್ರಿಸ್ಟ್‌ ಹಾಗೂ ಇಯಾನ್‌ ಹೀಲಿ ಅವರುಗಳು ಶೇನ್‌ ವಾರ್ನ್‌ ಅವರ ಬೌಲಿಂಗ್‌ನಲ್ಲಿ ಹೆಚ್ಚು ಕಾಲ ವಿಕೆಟ್‌ ಕೀಪಿಂಗ್‌ ಮಾಡಿದ್ದರು.

ಶೇನ್‌ ವಾರ್ನ್‌ ಕೇವಲ ಆಸ್ಟ್ರೇಲಿಯನ್‌ ಸೂಪರ್‌ ಸ್ಟಾರ್‌ ಆಗಿರಲಿಲ್ಲ. ಕ್ರಿಕೆಟ್‌ ಮೂಲಕ ಪ್ರತಿ ಮನೆಯಲ್ಲೂ ಹೀರೋ ಆಗಿದ್ದರು. ತಮ್ಮ ಬತ್ತಳಿಕೆಯಲ್ಲಿ ಹಲವು ಸ್ಪಿನ್‌ ಅಸ್ತ್ರಗಳನ್ನು ಹೊಂದಿದ್ದ ಶೇನ್‌ ವಾರ್ನ್‌, ಬ್ಯಾಟ್ಸಮನ್‌ಗಳನ್ನು ನಿರಂತರವಾಗಿ ಕಾಡುತ್ತಿದ್ದರು. ಅವರ ಲೆಗ್‌ ಸ್ಪಿನ್‌, ಫ್ಲಿಪ್ಪರ್‌ಗಳು, ಗೂಗ್ಲಿಗಳು ಎಲ್ಲವೂ ಒಂದೇ ಆಕ್ಷನ್‌ನಲ್ಲಿ ಹೊರ ಬರುತ್ತಿತ್ತು. ಬ್ಯಾಟ್ಸಮನ್‌ಗಳ ಕಾಲುಗಳ ನಡುವೆ ಬೌಲ್‌ ಮಾಡಿ, ಸ್ಪಿನ್‌ ಮೂಲಕ ಬೋಲ್ಡ್‌ ಮಾಡುವ ಚಾಣಾಕ್ಷತೆ ವಾರ್ನ್‌ ಅವರ ಬೌಲಿಂಗ್‌ನಲ್ಲಿತ್ತು ಎಂದಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ವಾರ್ನ್‌ ಒಬ್ಬ ಚಾಣಾಕ್ಷ, ಕೊನೆವರೆಗೂ ಹೋರಾಡಿದ ಮಾಸ್ಟರ್‌ ಹಾಗೂ ತಮ್ಮ ಪಾಂಡಿತ್ಯದಿಂದ ಮೈದಾನದಲ್ಲಿ ಮಿನುಗಿದ ಜಾದೂಗಾರ ಎಂದು ಬಣ್ಣಿಸಿದ್ದಾರೆ.

 ಶೇನ್‌ ವಾರ್ನ್‌ ಅವರ ಕ್ರಿಕೆಟ್‌ ಜೀವನದ ಪಯಣ, ಸಾಧನೆಗಳು:

ಟೆಸ್ಟ್‌ ಪಾದಾರ್ಪಣೆ: ಭಾರತದ ವಿರುದ್ಧ, ಸಿಡ್ನಿ ಕ್ರಿಕೆಟ್‌ ಮೈದಾನ, ಜ.2, 1992

ಕೊನೆ ಟೆಸ್ಟ್‌: ಇಂಗ್ಲೆಂಡ್‌ ವಿರುದ್ಧ, ಸಿಡ್ನಿ ಕ್ರಿಕೆಟ್‌ ಮೈದಾನ, ಜ.2, 2007

ODI ಪಾದಾರ್ಪಣೆ: ನ್ಯೂಜಿ಼ಲೆಂಡ್‌ ವಿರುದ್ಧ, ಬಸಿನ್‌ ರಿಸರ್ವ್‌, ಮಾ.24, 1993

ಕೊನೆ ODI: ಏಷ್ಯಾ ಇಲೆವೆನ್‌, ಮೆಲ್ಬೋರ್ನ್‌ ಕ್ರಿಕೆಟ್‌ ಮೈದಾನ, ಜ.10, 2005

ಚೊಚ್ಚಲ IPL: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ, ಅರುಣ್‌ ಜೇಟ್ಲಿ ಕ್ರೀಡಾಂಗಣ, ಏ.19, 2008

ಕೊನೆ IPL: ಮುಂಬೈ ಇಂಡಿಯನ್ಸ್‌ ವಿರುದ್ಧ, ವಾಂಖೆಡೆ ಕ್ರೀಡಾಂಗಣ, ಮೇ 20, 2011

ಶೇನ್‌ ವಾರ್ನ್‌ ಒಟ್ಟು 55 ಐಪಿಎಲ್‌ ಪಂದ್ಯಗಳನ್ನು ಆಡಿ 57 ವಿಕೆಟ್‌ ಪಡೆದಿದ್ದಾರೆ, 4/21 ಇವರ ಬೆಸ್ಟ್‌ ಬೌಲಿಂಗ್‌ ಪ್ರದರ್ಶನವಾಗಿದೆ. 2008 ರಲ್ಲಿ ಚೊಚ್ಚಲ ಐಪಿಎಲ್‌ ಆವೃತ್ತಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮುನ್ನಡೆಸಿದ್ದ ಶೇನ್‌ ವಾರ್ನ್‌, ತಂಡಕ್ಕೆ ಐಪಿಎಲ್‌ ಪ್ರಶಸ್ತಿ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದರು. ತಮ್ಮ ಲೆಗ್‌ ಸ್ಪಿನ್‌ ಮೂಲಕ ಕಮಾಲ್‌ ಮಾಡಿದ್ದ ಶೇನ್‌ ವಾರ್ನ್‌, 1999ರಲ್ಲಿ ಆಸ್ಟ್ರೇಲಿಯಾ ತಂಡದ ಏಕದಿನ ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಶೇನ್‌ ವಾರ್ನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನದ ಬೌಲಿಂಗ್ ಅಂಕಿ-ಅಂಶಗಳು:

ಟೆಸ್ಟ್‌ ಕ್ರಿಕೆಟ್‌ನಲ್ಲಿ

ಒಟ್ಟು ಪಂದ್ಯಗಳು: 145,
ಇನ್ನಿಂಗ್ಸ್‌: 273,
ವಿಕೆಟ್‌ಗಳು: 708,
ಬೆಸ್ಟ್‌ ಬೌಲಿಂಗ್(ಇನ್ನಿಂಗ್ಸ್‌): 8/71
ಬೆಸ್ಟ್‌ ಬೌಲಿಂಗ್‌(ಪಂದ್ಯದಲ್ಲಿ): 12/128
ನೀಡಿದ ರನ್‌ಗಳು: 17,995
ಮಾಡಿದ ಬಾಲ್‌ಗಳು: 40,705
ಸರಾಸರಿ: 25.41
ಎಕಾನಮಿ: 2.65
5 ವಿಕೆಟ್‌ಗಳು: 37 ಸಲ
10 ವಿಕೆಟ್‌ಗಳು: 10 ಸಲ

ಏಕದಿನ ಕ್ರಿಕೆಟ್‌ನಲ್ಲಿ

ಪಂದ್ಯಗಳು: 194
ಇನ್ನಿಂಗ್ಸ್‌: 191
ವಿಕೆಟ್‌ಗಳು : 293
ಬೆಸ್ಟ್‌ ಬೌಲಿಂಗ್‌: 5/33
ನೀಡಿದ ರನ್‌ಗಳು: 7541
ಮಾಡಿದ ಬಾಲ್‌ಗಳು: 10642
ಸರಾಸರಿ: 25.73
ಎಕಾನಮಿ: 4.25
5 ವಿಕೆಟ್‌ಗಳು: 1 ಸಲ

 ಶೇನ್‌ ವಾರ್ನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನದ ಬ್ಯಾಟಿಂಗ್ ಅಂಕಿ-ಅಂಶಗಳು:

ಟೆಸ್ಟ್ ಕ್ರಿಕೆಟ್​ನಲ್ಲಿ

ಒಟ್ಟು ಪಂದ್ಯಗಳು: 145
ಇನ್ನಿಂಗ್ಸ್: 199
ರನ್: 3154
ಅತಿ ಹೆಚ್ಚು ರನ್: 99
ಅರ್ಧ ಶತಕ: 12
ಸರಾಸರಿ: 17.32
ಸ್ರೈಕ್ ರೇಟ್: 57.65

ಏಕದಿನ ಕ್ರಿಕೆಟ್​ನಲ್ಲಿ

ಏಕದಿನ ಪಂದ್ಯ: 194
ಇನ್ನಿಂಗ್ಸ್
ಇನ್ನಿಂಗ್ಸ್: 107
ರನ್: 1018
ಅತಿ ಹೆಚ್ಚು ರನ್: 55
ಸರಾಸರಿ: 13.05
ಸ್ರೈಕ್ ರೇಟ್: 72.04
ಅರ್ಧ ಶತಕ: 1
Published by:shrikrishna bhat
First published: