ಆತ ಓರ್ವ ಸ್ವಾರ್ಥಿ ಕ್ರಿಕೆಟಿಗ: ಮಾಜಿ ನಾಯಕನ ವಿರುದ್ಧ ವಾರ್ನ್​​ ವಾಗ್ದಾಳಿ

news18
Updated:October 3, 2018, 7:12 PM IST
ಆತ ಓರ್ವ ಸ್ವಾರ್ಥಿ ಕ್ರಿಕೆಟಿಗ: ಮಾಜಿ ನಾಯಕನ ವಿರುದ್ಧ ವಾರ್ನ್​​ ವಾಗ್ದಾಳಿ
  • Advertorial
  • Last Updated: October 3, 2018, 7:12 PM IST
  • Share this:
ಸಾಗರ್ ಕನ್ನೆಮನೆ, ನ್ಯೂಸ್ 18 ಕನ್ನಡ

ಸದಾ ಒಂದಲ್ಲಾಒಂದು ವಿವಾದದಿಂದಲೇ ಸುದ್ದಿಯಾಗಿರುವ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಇದೀಗ ಮತ್ತೊಂದು ಬಹುದೊಡ್ಡ ವಿವಾದಕ್ಕೆ ಕಾರಣರಾಗಿದ್ದಾರೆ. ತನ್ನ ಮಾಜಿ ನಾಯಕನ ವಿರುದ್ಧವೇ ಶೇನ್ ವಾರ್ನ್ ತಿರುಗಿ ಬಿದ್ದು ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಶೇನ್ ವಾರ್ನ್​​​ ಅವರ ನೂತನ ‘ನೋ ಸ್ಪಿನ್’ ಎಂಬ ಆತ್ಮಚರಿತ್ರೆಯಲ್ಲಿ ಸ್ಟೀವ್ ವ್ಹಾ ವಿರುದ್ಧ ಬರೆದುಕೊಂಡಿದ್ದಾರೆ.

'ಸ್ಟೀವ್ ವ್ಹಾ ಅವರು ತಂಡಕ್ಕಾಗಿ ಆಡುತ್ತಿರಲಿಲ್ಲ . ಅವರು ತನ್ನ ವೈಯಕ್ತಿಯ ಸರಾಸರಿ ಹಾಗೂ ದಾಖಲೆಗಳನ್ನ ಗಮನದಲ್ಲಿಟ್ಟುಕೊಂಡು ಆಡುತ್ತಿದ್ದರು. ಸ್ಟೀವ್ ವ್ಹಾ ನಾನು ಜೊತೆಗಾಡಿದ ಓರ್ವ ಸ್ವಾರ್ಥಿ ಕ್ರಿಕೆಟಿಗ. ಅವರು ಯಾವಾಗಲೂ 50 ಬ್ಯಾಟಿಂಗ್ ಸರಾಸರಿ ಕುರಿತೇ ಚಿಂತೆ ಮಾಡುತ್ತಿದ್ದರು. ಬ್ಯಾಟಿಂಗ್ ಸರಾಸರಿ ಕಾಪಾಡಿಕೊಳ್ಳುವುದೇ ಅವರ ಮುಖ್ಯ ಗುರಿಯಾಗಿತ್ತು'.

-ಶೇನ್ ವಾರ್ನ್ - ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ

ಶೇನ್ ವಾರ್ನ್ ತಮ್ಮ ಆತ್ಮಚರಿತ್ರೆಯಲ್ಲಿ ಸ್ಟೀವ್ ವ್ಹಾ ರನ್ನು ಸ್ವಾರ್ಥಿ ಎಂದು ಕರೆದಿದ್ದಾರೆ. ಇಷ್ಟಲ್ಲದೆ 1999ರ ವೆಸ್ಟ್‌ಇಂಡೀಸ್ ಪ್ರವಾಸದ ಅನುಭವವೊಂದನ್ನು ವಾರ್ನ್ ಬಿಚ್ಚಿಡುವ ಮೂಲಕ ಸ್ಟೀವ್ ವ್ಹಾ ಸ್ವಾರ್ಥಿ ಎಂಬುದನ್ನ ವಿವರಿಸಿದ್ದಾರೆ. ತನ್ನನ್ನು ತಂಡದಿಂದ ಹೊರಗಿಡುವ ಪ್ರಯತ್ನ ನಡೆಸಿದ್ದರು. ಅವರಿಗೆ ಬ್ಯಾಟಿಂಗ್ ಸರಾಸರಿ ಕಾಪಾಡಿಕೊಳ್ಳುವುದೇ ಮುಖ್ಯ ಗುರಿಯಾಗಿತ್ತು ಎಂದು ವಾರ್ನ್ ಆರೋಪಿಸಿದ್ದಾರೆ.

ಆದರೆ ಈ ಕುರಿತು ಸ್ವೀವ್ ವ್ಹಾ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿದೆ.
First published:October 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...