ಟೀಂ ಇಂಡಿಯಾ ಬೌಲರ್​ಗಳ ದಾಳಿಗೆ ಮಕಾಡೆ ಮಲಗಿದ ಆಂಗ್ಲರು: 287ಕ್ಕೆ ಆಲೌಟ್

news18
Updated:August 2, 2018, 3:56 PM IST
ಟೀಂ ಇಂಡಿಯಾ ಬೌಲರ್​ಗಳ ದಾಳಿಗೆ ಮಕಾಡೆ ಮಲಗಿದ ಆಂಗ್ಲರು: 287ಕ್ಕೆ ಆಲೌಟ್
news18
Updated: August 2, 2018, 3:56 PM IST
ನ್ಯೂಸ್ 18 ಕನ್ನಡ

ಬರ್ಮಿಂಗ್‌ಹ್ಯಾಮ್‌ (ಆ. 02):  ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 287 ರನ್​ಗೆ ಆಲೌಟ್ ಆಗಿದೆ.

ಮೊದಲ ದಿನದಾಟದ ಅಂತ್ಯಕ್ಕೆ 285 ರನ್​ಗೆ 9 ವಿಕೆಟ್ ಕಳೆದುಕೊಂಡಿದ್ದ ಆಂಗ್ಲರು, ಎರಡನೇ ದಿನವಾದ ಇಂದು ಆರಂಭದಲ್ಲೇ ಸ್ಯಾಮ್​ ಕುರ್ರನ್ ಅವರ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ 287 ರನ್​ಗೆ ಸರ್ವಪತನ ಕಂಡಿದೆ.

ಇಂಗ್ಲೆಂಡ್ ಪರ ನಾಯಕ ಜೋ ರೂಟ್ 80 ಹಾಗೂ ಜಾನಿ ಬೈರ್ಸ್ಟೊ 70 ರನ್​ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಭಾರತ ಪರ ಅದ್ಭುತ ಪ್ರದರ್ಶನ ನೀಡಿದ ಆರ್. ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದರೆ, ಮೊಹಮ್ಮದ್ ಶಮಿ 3, ಉಮೇಶ್ ಯಾದ್ ಹಾಗೂ ಇಶಾಂತ್ ಶರ್ಮಾ ತಲಾ 1 ವಿಕೆಟ್ ಪಡೆದರು.

 

 
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ