• Home
  • »
  • News
  • »
  • sports
  • »
  • T20 World Cup 2022: ಟಿ20 ವಿಶ್ವಕಪ್​ಗೆ ಬುಮ್ರಾ ಸ್ಥಾನಕ್ಕೆ ಬದಲಿ ಆಟಗಾರನ ಆಯ್ಕೆ, ಯುವ ಆಟಗಾರರಿಗೂ ಬಿಸಿಸಿಐನಿಂದ ಸಿಕ್ತು ಚಾನ್ಸ್

T20 World Cup 2022: ಟಿ20 ವಿಶ್ವಕಪ್​ಗೆ ಬುಮ್ರಾ ಸ್ಥಾನಕ್ಕೆ ಬದಲಿ ಆಟಗಾರನ ಆಯ್ಕೆ, ಯುವ ಆಟಗಾರರಿಗೂ ಬಿಸಿಸಿಐನಿಂದ ಸಿಕ್ತು ಚಾನ್ಸ್

ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ

T20 World Cup 2022: ಜಸ್ಪ್ರೀತ್ ಬುಮ್ರಾ (Jasprit Bumrah) ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಮೊಹಮ್ಮದ್ ಶಮಿ (Jasprit Bumrah) 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

  • Share this:

ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಸಿದ್ಧತೆಗಾಗಿ ಆಸ್ಟ್ರೇಲಿಯಾ ತಲುಪಿದೆ. ಟಿ20 ಟೂರ್ನಿಯ (T20 World Cup) 8ನೇ ಸೀಸನ್ ಅಕ್ಟೋಬರ್ 16ರಿಂದ ಆರಂಭವಾಗಲಿದೆ. ಆದರೆ, ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಮೊಹಮ್ಮದ್ ಶಮಿ (Jasprit Bumrah) 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಕುರಿತು ಬಿಸಿಸಿಐ ಅಧಿಕೃತವಾಗಿ ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದೆ. ಇದಲ್ಲದೇ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಬ್ಯಾಕ್‌ಅಪ್‌ ಆಟಗಾರರಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಈ ಇಬ್ಬರು ಆಟಗಾರರು ಶೀಘ್ರದಲ್ಲಿಯೇ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ ಎಂದು ತಿಳಿಸಿದೆ.


ಬುಮ್ರಾ ಬದಲಿಗೆ ಶಮಿ ಆಯ್ಕೆ:


ಗಾಯದ ಸಮಸ್ಯೆಯಿಂದ ಟಿ20 ವಿಶ್ವಕಪ್​ ನಿಂದ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ ಬದಲಿಗೆ ಇದೀಗ ಬಿಸಿಸಿಐ ಅಧಿಕೃತವಾಗಿ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಿದೆ. ಈ ಕುರಿತು ಟ್ವೀಟ್​ ಮಾಡುವ ಮೂಲಕ ತಿಳಿಸಿದೆ. ಶಮಿ ಅವರನ್ನು ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿ ಆಯ್ಕೆ ಮಾಡಿದ್ದು, ಇವರೊಂದಿಗೆ ಟೀಂ ಇಂಡಿಯಾಗೆ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಬ್ಯಾಕಪ್ ಆಟಗಾರರಾಗಿ ಆಯ್ಕೆ ಮಾಡಿದೆ. ಈಗಾಗಲೇ ಮೊಹಮ್ಮದ್ ಶಮಿ ಆಸ್ಟ್ರೇಲಿಯಾವನ್ನು ತಲುಪಿದ್ದಾರೆ. ಆದರೆ ಸಿರಾಜ್ ಮತ್ತು ಶಾರ್ದೂಲ್  ಶೀಘ್ರದಲ್ಲಿಯೇ ಆಸೀಸ್​ ಪ್ರಯಾಣ ಮಾಡಲಿದ್ದಾರೆ ಎಂದು ತಿಳಿಸಿದೆ. ಜೊತೆಗೆ ಅಭ್ಯಾಸ ಪಂದ್ಯಗಳು ಆರಂಭಕ್ಕೂ ಮುನ್ನ ಬ್ರಿಸ್ಬೇನ್‌ನಲ್ಲಿರುವ ಭಾರತ ತಂಡವನ್ನು ಶಮಿ ಸೇರಿಕೊಳ್ಳಲಿದ್ದಾರೆ.ಕೊರೋನಾದಿಂದ ಗುಣಮುಖರಾದ ಶಮಿ:


ಸೆಪ್ಟೆಂಬರ್ 28 ರಂದು ಮೊದಲ ಟಿ 20 ಟಾಸ್ ಸಂದರ್ಭದಲ್ಲಿ, ರೋಹಿತ್ ಗಾಯಗೊಂಡ ಕಾರಣ ಬುಮ್ರಾ ಈ ಪಂದ್ಯದಲ್ಲಿ ಆಡುವುದಿಲ್ಲ ಎಂದು ಘೋಷಿಸಿದರು. ಮರುದಿನ, ಬಿಸಿಸಿಐ ಬುಮ್ರಾ ಅವರ ಗಾಯದ ತೀವ್ರತೆಯನ್ನು ಉಲ್ಲೇಖಿಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಯಿಂದ ಹೊರಗುಳಿಸಿತು. ಕೆಲವು ದಿನಗಳ ನಂತರ, ಬುಮ್ರಾ ಟಿ 20 ವಿಶ್ವಕಪ್‌ನಿಂದ ಹಿಂದೆ ಸರಿಯುವುದಾಗಿ ಘೋಷಿಸಿದರು.


ಇದನ್ನೂ ಓದಿ: T20 World Cup 2022: ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ ಪಾಕ್​ ಆಲ್​ರೌಂಡರ್​, ಹಾರ್ದಿಕ್​ಗಿಂತಲೂ ಅಪಾಯಕಾರಿಯಂತೆ ಈ ಪ್ಲೇಯರ್​!


ಕೊರೊನಾದಿಂದ ಚೇತರಿಸಿಕೊಂಡಿದ್ದರೂ, ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಗೆ ಗೈರುಹಾಜರಾಗಿದ್ದರು, ಅವರ ಫಿಟ್‌ನೆಸ್ ಬಗ್ಗೆ ಅನುಮಾನಗಳಿದ್ದ ಕಾರಣ, ಬುಮ್ರಾ ಅವರ ಸ್ಥಾನದಲ್ಲಿ ಶಮಿಯನ್ನು ತೆಗೆದುಕೊಳ್ಳುವ ಬಗ್ಗೆ ಅನಿಶ್ಚಿತತೆ ಇತ್ತು. ಇದೇ ವೇಳೆ ದೀಪಕ್ ಚಹಾರ್​ ಸಹ ಗಾಯಗೊಂಡಿರುವ ಕಾರಣ ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಬದಲಾವಣೆ ಮಾಡಲು ಅಕ್ಟೋಬರ್ 15 ಕೊನೆಯ ದಿನವಾಗಿತ್ತು. ಹೀಗಾಗಿ ಒಂದು ದಿನ ಮುಮಚಿತವಾಗಿ ಬಿಸಿಸಿಐ ಶಮಿ ಹೆಸರನ್ನು ಅಂತಿಮಗೊಳಿಸಿದೆ.


ಟಿ20 ವಿಶ್ವಕಪ್‌ಗೆ ಭಾರತ ತಂಡ:


ರೋಹಿತ್ ಶರ್ಮಾ (C), ಕೆಎಲ್ ರಾಹುಲ್ (WC), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.

Published by:shrikrishna bhat
First published: