• Home
  • »
  • News
  • »
  • sports
  • »
  • T20 World Cup 2022: ಬಾಬರ್ ಫಾರ್ಮ್ ಬಗ್ಗೆ ಅಮಿತ್ ಮಿಶ್ರಾ ಟ್ವೀಟ್, ಗರಂ ಆದ ಪಾಕ್ ಮಾಜಿ ನಾಯಕ

T20 World Cup 2022: ಬಾಬರ್ ಫಾರ್ಮ್ ಬಗ್ಗೆ ಅಮಿತ್ ಮಿಶ್ರಾ ಟ್ವೀಟ್, ಗರಂ ಆದ ಪಾಕ್ ಮಾಜಿ ನಾಯಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

T20 World Cup 2022: ಪಾಕ್ ನ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರು ಮಿಶ್ರಾ ಅವರ ಟ್ವೀಟ್ ಬಗ್ಗೆ "ನೀವು ಹೇಳಿದ ಅಮಿತ್ ಮಿಶ್ರಾ ಅವರು ಭಾರತಕ್ಕಾಗಿ ಆಡಿದ್ದಾರೆ. ಅವರು ಸ್ಪಿನ್ನರ್ ಅಥವಾ ಬ್ಯಾಟ್ಸ್ಮನ್ ಆಗಿದ್ದರೇ” ಎಂದು ಕೇಳಿದ್ದಾರೆ.

  • Share this:

ಈಗಾಗಲೇ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವಂತಹ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಪಾಕಿಸ್ತಾನ (Pakistan) ತಂಡವು ತನ್ನ ಮೊದಲೆರಡು ಪಂದ್ಯಗಳಲ್ಲಿ ಸೋತು ಸುಣ್ಣವಾಗಿತ್ತು. ಭಾರತ (Team India) ಮತ್ತು ಜಿಂಬಾಬ್ವೆ ತಂಡಗಳ ವಿರುದ್ದ ಸೋಲನುಭವಿಸಿದ ನಂತರದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರರಿಂದ ಮತ್ತು ಪಾಕ್ ಅಭಿಮಾನಿಗಳಿಂದ ತೀವ್ರ ಟೀಕೆಗೆ ಒಳಗಾಗಿತ್ತು. ಆದರೆ ಪರ್ತ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನೆದರ್ಲ್ಯಾಂಡ್ (PAK vs NL) ತಂಡವನ್ನು ಆರು ವಿಕೆಟ್ ಗಳಿಂದ ಸೋಲಿಸುವ ಮೂಲಕ ತನ್ನ ಮೊದಲ ಗೆಲುವನ್ನು ದಾಖಲಿಸಿತು. ಡಚ್ ತಂಡವನ್ನು 20 ಓವರ್ ಗಳಲ್ಲಿ 9 ವಿಕೆಟ್ ಗಳನ್ನು ಉರುಳಿಸಿ ಕೇವಲ 91 ರನ್ ಗಳಿಗೆ ನಿಯಂತ್ರಿಸಿದ ನಂತರ, ಪಾಕಿಸ್ತಾನವು ಕೇವಲ 13.5 ಓವರ್ ಗಳಲ್ಲಿಯೇ ತನ್ನ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಆ ಗುರಿಯನ್ನು ಯಶಸ್ವಿಯಾಗಿ ತಲುಪಿತು.


ಬ್ಯಾಟಿಂಗ್ ನಲ್ಲಿ ಮೊಹಮ್ಮದ್ ರಿಜ್ವಾನ್ 39 ಎಸೆತಗಳಲ್ಲಿ 49 ರನ್ ಗಳಿಸಿದರೆ, ಶದಾಬ್ ಖಾನ್ ಅವರು ತಮ್ಮ 4 ಓವರ್ ಗಳಲ್ಲಿ ಕೇವಲ 22 ರನ್ ಗಳನ್ನು ನೀಡಿ 3 ವಿಕೆಟ್ ಗಳನ್ನು ಪಡೆದು ಪಾಕ್ ಪರ ಉತ್ತಮ ಬೌಲಿಂಗ್ ಪ್ರದರ್ಶನವನ್ನು ನೀಡಿದರು.


ಕಳಪೆ ಫಾರ್ಮ್ ಮುಂದುವರೆಸಿದ ಪಾಕ್ ನಾಯಕ:


ಆದಾಗ್ಯೂ, ತಂಡದ ನಾಯಕ ಬಾಬರ್ ಅಜಮ್ ಕಳಪೆ ಫಾರ್ಮ್ ಅನ್ನು ಮುಂದುವರಿಸಿದರು, ಏಕೆಂದರೆ ಅವರು ಐದು ಎಸೆತಗಳಲ್ಲಿ ಕೇವಲ 4 ರನ್ ಗಳನ್ನು ಮಾತ್ರ ಗಳಿಸಿ ಔಟಾದರು. ಪಂದ್ಯದ ಎರಡನೇ ಓವರ್ ನಲ್ಲಿ ಬಾಬರ್ ರನೌಟ್ ಆದರು. ವಿಶ್ವಕಪ್ ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ, ಪಾಕಿಸ್ತಾನದ ನಾಯಕ 0, 4 ಮತ್ತು 4 ರನ್ ಗಳನ್ನು ಮಾತ್ರ ಗಳಿಸಿದ್ದಾರೆ.


ಇದನ್ನೂ ಓದಿ: Virat Kohli: ಟಿ20 ವಿಶ್ವಕಪ್​ನಲ್ಲಿ​ ಹೊಸ ದಾಖಲೆ ಬರೆದ ಕೊಹ್ಲಿ, ಇವರಿಗೆ ನಂಬರ್​ಗಳೇ ಲೆಕ್ಕಾ ಇಲ್ಲಾ!


ಬಾಬರ್ ಅವರ ಕಳಪೆ ಫಾರ್ಮ್ ಬಗ್ಗೆ ಪಾಕಿಸ್ತಾನದ ಅಭಿಮಾನಿಗಳಿಂದ ಬೇಸರ ವ್ಯಕ್ತಪಡಿಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಕೆಲವು ತಿಂಗಳ ಹಿಂದೆ, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಇದೇ ರೀತಿ ಕಳಪೆ ಫಾರ್ಮ್ ನಲ್ಲಿದ್ದಾಗ, ಪಾಕ್ ನಾಯಕ ಬಾಬರ್ ಅವರು ವಿರಾಟ್ ಅವರಿಗೆ ಹೃದಯಸ್ಪರ್ಶಿ ಟ್ವೀಟ್ ಮಾಡಿ ಬೆಂಬಲಿಸಿದ್ದರು. ಪಾಕಿಸ್ತಾನದ ನಾಯಕ "ಈ ಸಮಯ ಸಹ ಹಾದು ಹೋಗುತ್ತದೆ, ದೃಢವಾಗಿರಿ" ಎಂದು ಟ್ವೀಟ್ ಮಾಡಿದ್ದರು.


ಬಾಬರ್ ಗೆ ಟ್ವೀಟ್ ಮಾಡಿ ಧೈರ್ಯ ಹೇಳಿದ ಮಿಶ್ರಾ:


ಭಾನುವಾರ, ಟಿ20 ವಿಶ್ವಕಪ್ ಪಂದ್ಯವೊಂದರಲ್ಲಿ ಪಾಕ್ ನಾಯಕ ಬಾಬರ್ ಅವರ ಮತ್ತೊಂದು ಒಂದಂಕಿಯ ಸ್ಕೋರ್ ನೋಡಿದ ನಂತರ, ಭಾರತದ ಸ್ಪಿನ್ನರ್ ಅಮಿತ್ ಮಿಶ್ರಾ ಅವರು ಸಹ ಪಾಕಿಸ್ತಾನ ನಾಯಕನಿಗೆ ನಿಖರವಾಗಿ ಅದೇ ರೀತಿಯ ಟ್ವೀಟ್ ಮಾಡಿದ್ದಾರೆ. ಪಾಕಿಸ್ತಾನದ ಟಿವಿಯ ಕಾರ್ಯಕ್ರಮವೊಂದರಲ್ಲಿ ನಿರೂಪಕರು ಅಮಿತ್ ಮಿಶ್ರಾ ಅವರ ಟ್ವೀಟ್ ಗೆ ಬಲವಾಗಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. 'ಅಮಿತ್ ಮಿಶ್ರಾ ಎಂಬ ಆಟಗಾರ ಅದನ್ನು ಗೇಲಿ ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.


ಇದನ್ನೂ ಓದಿ: T20 WC 2022 IND vs BAN: ರಾಹುಲ್-ಕೊಹ್ಲಿ ಅಬ್ಬರಕ್ಕೆ ತತ್ತರಿಸಿದ ಬಾಂಗ್ಲಾ, ಬೃಹತ್​ ಮೊತ್ತದ ಟಾರ್ಗೆಟ್​


ಮಿಶ್ರಾ ಟ್ವೀಟ್ ಬಗ್ಗೆ ಶಾಹಿದ್ ಅಫ್ರಿದಿ ಹೇಳಿದ್ದೇನು?:


ಅದೇ ಕಾರ್ಯಕ್ರಮದ ಭಾಗವಾಗಿದ್ದ ಪಾಕ್ ನ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರು ಮಿಶ್ರಾ ಅವರ ಟ್ವೀಟ್ ಬಗ್ಗೆ "ನೀವು ಹೇಳಿದ ಅಮಿತ್ ಮಿಶ್ರಾ ಅವರು ಭಾರತಕ್ಕಾಗಿ ಆಡಿದ್ದಾರೆ. ಅವರು ಸ್ಪಿನ್ನರ್ ಅಥವಾ ಬ್ಯಾಟ್ಸ್ಮನ್ ಆಗಿದ್ದರೇ” ಎಂದು ಕೇಳಿದರು. ಅವರೊಬ್ಬ ಸ್ಪಿನ್ನರ್ ಅಂತ ಎಂದು ಹೇಳಿದ ನಂತರ ಅಫ್ರಿದಿ ಅವರು ವ್ಯಂಗ್ಯವಾಗಿ "ಹೋಗಲಿ ಬಿಡಿ, ಇದು ಸಹ ಮುಂದೆ ಕಳೆದು ಹೋಗುತ್ತದೆ" ಎಂದು ಹೇಳಿದರು.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು