ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯಾದ (Inidan Womens Crciket Player) ಪೂಜಾ ವಸ್ತ್ರಾಕರ್ (Pooja Vastrakar) ತಂದೆ ಬಂಧನ್ ರಾಮ್ ವಸ್ತ್ರಾಕರ್, ಮಗಳ ಸಾಧನೆಯ ಬಗ್ಗೆ ಹೆಮ್ಮೆ ಇದ್ದರೂ ಆಕೆ ಅಪರಿಮಿತವಾಗಿ ಹಣ ಖರ್ಚುಮಾಡುತ್ತಾರೆ ಎಂದೇ ಆಪಾದಿಸುತ್ತಾರೆ. ಆಕೆ ಎಫ್‌ಡಿಯಲ್ಲಿ (Fixed Depsoite) ಹಣ ಸೇವಿಂಗ್ ಮಾಡಬೇಕು ಎಂದು ಬಯಸುತ್ತಾರೆ ಏಕೆ ಎಂಬುದನ್ನು ಲೇಖನದಲ್ಲಿ ತಿಳಿದುಕೊಳ್ಳೋಣ. ಬಂಧನ್ ರಾಮ್‌ರ ಕಿರಿಯ ಮಗಳು ಪೂಜಾ, ಮಹಿಳಾ ಕ್ರಿಕೆಟ್ ತಂಡದ ಬಲಗೈ ಬ್ಯಾಟ್ಸ್‌ಮನ್ ಹಾಗೂ ಬೌಲರ್ ಆಗಿ ಇಡಿ ದೇಶದ ಗಮವನ್ನು ಸೆಳೆದವರು. ಆಕೆ 15 ರೂ ಲಕ್ಷದ ಕಾರು ಖರೀದಿಸಿದಾಗ ಕೂಡ ಅವರ ತಂದೆ ಅದನ್ನು ಮೆಚ್ಚಿಕೊಳ್ಳದೆ ವ್ಯರ್ಥ ದುಡ್ಡು ದಂಡ ಎಂದೇ ಉಲ್ಲೇಖಿಸಿದ್ದಾರೆ.
ಹಣ ವ್ಯರ್ಥಮಾಡುತ್ತಾಳೆ ತಂದೆಯ ಆಪಾದನೆ
ಅದೇ ರೀತಿ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಉದ್ಘಾಟನಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ 23 ರ ಹರೆಯದ ಪೂಜಾರನ್ನು ರೂ 1.9 ಕೋಟಿಯ ಬೆಲೆಗೆ ಆಯ್ಕೆಮಾಡಿದ ನಂತರ ಕೂಡ ಬಂಧನ್ ರಾಮ್ ಆಕೆ ಎಫ್‌ಡಿಯಲ್ಲಿ ಹಣ ಹೂಡಿ ಹಣವನ್ನು ಸೇವ್ ಮಾಡಬೇಕೆಂಬ ಸಲಹೆಯನ್ನೇ ನೀಡಿದ್ದಾರೆ.
ನನ್ನ ಮಗಳು ತುಂಬಾ ಹಣ ಖರ್ಚುಮಾಡುತ್ತಾಳೆ ಎಂದು ಹೇಳುವ ಬಂಧನ್ ರಾಮ್, ಆಕೆ ಹೀಗೆ ಖರ್ಚುಮಾಡುವ ಬದಲಿಗೆ ಎಫ್‌ಡಿಯಲ್ಲಿ ಹೂಡಿಕೆ ಮಾಡಬಹುದು ಅದುವೇ ನನ್ನ ಇಷ್ಟ ಕೂಡ ಎಂದು ತಿಳಿಸಿದ್ದಾರೆ. ಬಂಧನ್ ರಾಮ್ ನಿವೃತ್ತ ಬಿಎಸ್‌ಎನ್‌ಎಲ್ ಉದ್ಯೋಗಿಯಾಗಿದ್ದು ತಮ್ಮ ಮಗಳು ಭಾರತಕ್ಕಾಗಿ ಕ್ರಿಕೆಟ್ ಮೈದಾನದಲ್ಲಿ ಆಡುವ ಒಬ್ಬ ಸಾಧಕಳಾಗಬಹುದೆಂಬ ಕಲ್ಪನೆಯನ್ನೇ ಹೊಂದದವರು. ಕ್ರಿಕೆಟ್ ಮೇಲೆ ಆಕೆಗಿರುವ ಅಪರಿಮಿತ ಒಲವು ಇಂದು ಇಷ್ಟೊಂದು ಹಣವನ್ನು ಆಕೆಗೆ ತಂದುಕೊಟ್ಟಿದೆ ಎಂಬುದು ಬಂಧನ್ ರಾಮ್ ಮಾತಾಗಿದೆ.
ಕ್ರಿಕೆಟ್ ಮೇಲೆ ಪೂಜಾರಿಗೆ ಹೆಚ್ಚಿನ ಒಲವು
ನಾಲ್ಕು ವರ್ಷದವಳಿದ್ದಾಗಲೇ ಕ್ರಿಕೆಟ್ ಮೇಲೆ ಆಕೆಗೆ ಹೆಚ್ಚಿನ ಪ್ರೀತಿ ಇತ್ತು. ಆದರೆ ಒಂದು ದಿನ ಭಾರತಕ್ಕಾಗಿ ಆಕೆ ಆಡುವಷ್ಟು ಸಮರ್ಥಳಾಗಬಲ್ಲಳು ಎಂದು ನಾನು ಭಾವಿಸಿರಲಿಲ್ಲ. ಆದರೆ ನನಗಿಂತ ಆಕೆಗದು ಚೆನ್ನಾಗಿ ಗೊತ್ತಿತ್ತು ಎಂದು ಬಂಧನ್ ರಾಮ್ ಮಗಳ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಗಳ ಸಾಧನೆಯ ಬಗ್ಗೆ ಹೆಮ್ಮೆ
ತನ್ನ ಏಳು ಜನ ಸಹೋದರಿಯರಲ್ಲಿ ಪೂಜಾ ಕಿರಿಯವರು ಹಾಗೂ ತಮ್ಮ ತಂದೆಯ ಅಚ್ಚುಮೆಚ್ಚಿನ ಮಗಳು ಹೌದು. ಕ್ರಿಕೆಟ್‌ಗಾಗಿ ಆಕೆ ತನ್ನಲ್ಲಿ ಹಣ ಕೇಳಿದಾಗ ಆಕೆ ವೃಥಾ ಸಮಯ ಕಳೆಯುತ್ತಿದ್ದಾಳೆ ಎಂಬುದು ನನ್ನ ಭಾವನೆಯಾಗಿತ್ತು ಎಂದು ಬಂಧನ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಪೂಜಾ ಯಾವಾಗಲೂ ಒಂದು ಮಾತು ಹೇಳುತ್ತಿದ್ದಳು ನೀವು ನೋಡಿ ಒಂದು ದಿನ ನಾನು ದೇಶಕ್ಕಾಗಿ ಆಡುತ್ತೇನೆ ಎಂದು. ಅದನ್ನಾಕೆ ಸಾಧಿಸಿದ್ದಾಳೆ ಎಂಬುದು ರಾಮ್ ಹೆಮ್ಮೆಯ ಮಾತಾಗಿದೆ.
ಇದನ್ನೂ ಓದಿ: ಭವ್ಯ ಬಂಗಲೆ-ಲಕ್ಸುರಿ ಕಾರು, ಕೋಟಿ ಕೋಟಿ ಆದಾಯ! ಇದು IPL ಸೃಷ್ಠಿಕರ್ತನ ಐಷಾರಾಮಿ ಬದುಕು!
ಭಾರತಕ್ಕೆ ವಿಶ್ವಕಪ್ ದೊರಕಿಸಲು ಮಗಳು ಕಾರಣಳಾಗುತ್ತಾಳೆ
ಮಗಳನ್ನು ಮಹಿಳಾ ವರ್ಲ್ಡ್‌ಕಪ್‌ನೊಂದಿಗೆ ನೋಡಬೇಕೆಂಬುದು ಬಂಧನ್ ರಾಮ್ ಆಸೆಯಾಗಿದೆ. ದಕ್ಷಿಣಾ ಆಫ್ರಿಕಾದಲ್ಲಿ ಈ ಬಾರಿಯ ವಿಶ್ವಕಪ್ ಭಾರತದ ಪಾಲಿಗೆ ದೊರೆಯುವಲ್ಲಿ ಪೂಜಾ ಕಾರಣಳಾಗಲಿದ್ದಾಳೆ. ಗಾಯದಿಂದ ಮರಳಿದೊಡನೆ ಪುನಃ ಹಿಂದಿನಂತೆ ದೃಢಕಾಯಳಾಗಿ ಆಡುತ್ತಾಳೆ ಎಂಬುದು ಬಂಧನ್ ರಾಮ್ ಮಾತಾಗಿದೆ. ಪೂಜಾರ ಸಹೋದರಿ ಉಷಾ ಕೂಡ ಕ್ರೀಡಾಳುವಾಗಿದ್ದು ಆಕೆಯೇ ತಂಗಿ ಪೂಜಾರನ್ನು ಕ್ರೀಡಾ ಕ್ಷೇತ್ರಕ್ಕೆ ಆಗಮಿಸುವಂತೆ ಮಾಡಿದರು.
ಪೂಜಾರ ಬಗ್ಗೆ ಕೋಚ್ ಹೆಮ್ಮೆಯ ಮಾತು
ಆಕೆಯ ಕೋಚ್ ಅಶುತೋಷ್ ಶ್ರೀವಾಸ್ತವ ಕೂಡ ಪೂಜಾರ ಬಗ್ಗೆ ಹೊಗಳಿಕೆಯ ಮಾತುಗಳನ್ನೇ ಆಡಿದ್ದು ಮಧ್ಯಪ್ರದೇಶದ ರೇವಾ ಜಿಲ್ಲೆಯ ಶಾಹದೋಲ್ ಎಂಬ ಸಣ್ಣ ಪಟ್ಟಣದಲ್ಲಿ ವಾಸಿಸುತ್ತಿರುವ ಪೂಜಾ ವಯಸ್ಸಿಗೂ ಮೀರಿ ಸಾಧನೆ ಮಾಡಿದ್ದಾರೆ ಎಂದು ಕೊಂಡಾಡಿದ್ದಾರೆ.
ಶಾಹದೋಲ್‌ನ ಮುನ್ಸಿಪಲ್ ಮೈದಾನದಲ್ಲಿ ಪೂಜಾ ಹೆಚ್ಚಾಗಿ ಆಡುತ್ತಿದ್ದರು ಹಾಗೂ ಟೆನಿಸ್ ಬಾಲ್‌ನಲ್ಲಿ ಸಿಕ್ಸರ್ ಬಾರಿಸುತ್ತಿದ್ದ ಅಪ್ರತಿಮ ಆಟಗಾರ್ತಿ ಆಕೆ ಎಂದು ತಿಳಿಸಿದ್ದಾರೆ. ಆಕೆಯ ಆಟ ನೋಡಿ ಯಾರಲ್ಲೋ ಆಶುತೋಷ್ ಈ ಹುಡುಗ ಯಾರು ಎಂದು ಕೇಳಿದಾಗ ಅವರು ಆಟವಾಡುತ್ತಿರುವುದು ಹುಡುಗನಲ್ಲ ಹುಡುಗಿ ಎಂದು ತಿಳಿಸಿದ್ದರಂತೆ. ಆಕೆಯ ಬಿರುಸಿನ ಹೊಡೆತದಿಂದ ನಾನು ಚಕಿತನಾಗಿದ್ದೆ ಎಂದು ಆಶುತೋಷ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ