news18-kannada Updated:February 18, 2021, 5:04 PM IST
ಸೆರೆನಾ ವಿಲಿಯಮ್ಸ್ ಮಗಳು
ಸೆರೆನಾ ವಿಲಿಯಮ್ಸ್ ಆಟಕ್ಕೆ ಮನಸೋಲದವರಿಲ್ಲ. ವಿಶ್ವದ ನಂ.1 ಆಟಗಾರ್ತಿ ಎನಿಸಿಕೊಂಡಿದ್ದ ಸೆರೆನಾ ವಿಲಿಯಮ್ಸ್. ಅಂತಹ ಶ್ರೇಷ್ಟ ಟೆನ್ನಿಸ್ ಪಟು ಆಕೆ. ಈಗ ಸೆರೆನಾ ಮಗಳು ಕೂಡ ಅಮ್ಮನಂತೆ ಆಗಲೂ ಎಲ್ಲಾ ತಯಾರಿ ನಡೆಸಿದ್ದಾಳೆ. ವಯಸ್ಸಿನ್ನು ಮೂರು ಆದರೂ ಟೆನಿಸ್ ಕೋರ್ಟ್ನಲ್ಲಿ ರಾಕೆಟ್ ಹಿಡಿದು ಕೈ ಚಳಕ ಪ್ರದರ್ಶಿಸಿದ್ದಾಳೆ. ಆಕೆಗೆ ತನ್ನ ಅಮ್ಮನಂತೆ ಆಗಬೇಕೆಂಬ ಹಂಬಲ. ಅದಕ್ಕಾಯೇ ಆಕೆ ಟೆನ್ನಿಸ್ ಕೋರ್ಟ್ ಗೆ ಇಳಿದು ಈಗಾಗಲೇ ತಯಾರಿ ಶೂರು ಮಾಡಿದ್ದಾಳೆ. ಸೆರೆನಾ ಅವರ 3 ವರ್ಷದ ಪುತ್ರಿ ಅಲೆಕ್ಸಿಸ್ ಒಲಿಂಪಿಯಾ ಓಹಾನಿಯನ್ ಜೂನಿಯರ್ ತನ್ನ ತಾಯಿಯಂತೆ ಟೆನ್ನಿಸ್ ಆಡುವುದನ್ನು ಕಲಿಯಲು ಪ್ರಯತ್ನಿಸಿದ್ದಾಳೆ. ಅಲೆಕ್ಸಿಸ್ ಟೆನ್ನಿಸ್ ಅಭ್ಯಾಸ ಮಾಡುತ್ತಿರುವ ವಿಡಿಯೋ ಕ್ಲಿಪ್ ಅನ್ನು ಸೆರೆನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಟೆನ್ನಿಸ್ ಡೈರೀಸ್’ ಎಂದು ಬರೆದುಕೊಂಡಿದ್ದಾರೆ. ಟೆನಿಸ್ ಕೋರ್ಟ್ ನಲ್ಲಿ ಪುಟ್ಟಹುಡುಗಿ ತನ್ನ ಕೈಚಳಕ ಪ್ರದರ್ಶಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬಿಳಿ ಸ್ನೀಕರ್ಸ್ನೊಂದಿಗೆ ನೀಲಿ ಬಣ್ಣದ ಟಾಪ್ ಮತ್ತು ಪ್ಯಾಂಟ್ನಲ್ಲಿ ಅಲೆಕ್ಸಿಸ್, ಕೋಚ್ ಪ್ಯಾಟ್ರಿಕ್ ಮೌರಟೋಗ್ಲೊ ಅವರೊಂದಿಗೆ ಕೋರ್ಟ್ ನಲ್ಲಿ ಟೆನ್ನಿಸ್ ಆಡುತ್ತಿದ್ದಾಳೆ. ಆಕೆ ಆಡುತ್ತಿರುವ ದೃಶ್ಯ ನೋಡುಗರ ಮನಸೆಳೆದಿದೆ. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಪುಟ್ಟ ಹುಡುಗಿ ಆಟಕ್ಕೆ ಮನಸೋತು ಕಾಮೆಂಟ್ ಗಳ ಮಹಾಪೂರವನ್ನೇ ಹರಿಸಿದ್ದಾರೆ
‘ತನ್ನ ತಾಯಿಯಂತೆ ಅಲೆಕ್ಸಿಸ್ ಒಲಿಂಪಿಯಾ ಕೂಡ ಟೆನಿಸ್ ಲೋಕದಲ್ಲಿ ಸಾಧನೆ ಮಾಡಲಿದ್ದಾಳೆ’ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ‘ಓಹ್… ಆಕೆಯ ಕ್ಯೂಟ್ ನೆಸ್ ಅನ್ನು ನನ್ನ ಹೃದಯ ನಿಭಾಯಿಸಲು ಸಾಧ್ಯವಿಲ್ಲ’ವೆಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಕಳೆದ ತಿಂಗಳಷ್ಟೇ ಸೆರೆನಾ ವಿಲಿಯಮ್ಸ್ ಟೆನಿಸ್ ಕೋರ್ಟ್ನಲ್ಲಿ ತನ್ನ ಮಗಳೊಂದಿಗೆ ಆಡುತ್ತಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು, ಇದು ಕೂಡ ಸಖತ್ ವೈರಲ್ ಆಗಿತ್ತು. ಸೆರೆನಾ ವಿಲಿಯಮ್ಸ್ ಮಹಿಳಾ ಸಿಂಗಲ್ ಟೆನ್ನಿಸ್ನಲ್ಲಿ ವಿಶ್ವದ ನಂ .1 ಸ್ಥಾನದಲ್ಲಿದ್ದರು. ಅವರು ಇದುವರೆಗೆ 23 ಗ್ರ್ಯಾನ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
Published by:
Seema R
First published:
February 18, 2021, 5:04 PM IST