• Home
 • »
 • News
 • »
 • sports
 • »
 • ‘ಓಂ ಫಿನಿಶಾಯ ನಮಃ’: ಧೋನಿ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ಶುಭಕೋರಿದ ಸೆಹ್ವಾಗ್

‘ಓಂ ಫಿನಿಶಾಯ ನಮಃ’: ಧೋನಿ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ಶುಭಕೋರಿದ ಸೆಹ್ವಾಗ್

ಎಂಎಸ್ ಧೋನಿ (ಟೀಂ ಇಂಡಿಯಾ ಮಾಜಿ ನಾಯಕ)

ಎಂಎಸ್ ಧೋನಿ (ಟೀಂ ಇಂಡಿಯಾ ಮಾಜಿ ನಾಯಕ)

 • News18
 • Last Updated :
 • Share this:

  -ನ್ಯೂಸ್ 18 ಕನ್ನಡ

  ಭಾರತ ತಂಡದ ಮಾಜಿ ನಾಯಕ, ಕೂಲ್​ ಪ್ಲೇಯರ್​ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಟೀಮ್ ಇಂಡಿಯಾದ ಮಾಸ್ಟರ್​ ಮೈಂಡ್​ ಇಂದು 37ನೇ ವಸಂತಕ್ಕೆ ಕಾಲಿಟ್ಟಿದಿದ್ದಾರೆ.

  ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಧೋನಿ ಅವರಿಗೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿವೆ. ಅದರಲ್ಲು ವಿರೇಂದ್ರ ಸೆಹ್ವಾಗ್ ಅವರು ಧೋನಿಗೆ ವಿಶೇಷ ರೀತಿಯಲ್ಲಿ ವಿಶ್ ಮಾಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಧೋನಿ ಅವರ ಅಪರೂಪದ ಚಿತ್ರವನ್ನು ಹಂಚಿಕೊಂಡು ‘ಸ್ಟಂಪಿಂಗ್​ಗೆ ಹೆಸರಾದ ನಿಮಗೆ ಸ್ಟಂಪಿಂಗ್​​ಗಿಂತಲೂ ವೇಗವಾಗಿ ಎಲ್ಲಾ ವಿಷಯದಲ್ಲಿ ಖುಷಿ ನಿಮ್ಮನ್ನು ಹುಡುಕಿಕೊಂಡು ಬರಲಿ’ ಎಂದು ಹೇಳಿದ್ದಾರೆ. ಜೊತೆಗೆ ‘ಓಂ ಫಿನಿಶಾಯ ನಮಃ’ ಎಂದು ಅಡಿ ಬರಹ ಬರೆದು  ಹಂಚಿಕೊಂಡಿದ್ದಾರೆ.

      

  ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ದೇಶದ ಕ್ರಿಕೆಟಿಗರು ಸೇರಿದಂತೆ ಕ್ರಿಕೆಟ್​ ದಿಗ್ಗಜರು, ಸಿನಿನಟರು ಮಾಹಿಯ ಬರ್ತಡೇಗೆ ಶುಭಕೋರಿದ್ದಾರೆ.


   


  15 ವರ್ಷಗಳಿಂದ ಭಾರತ ತಂಡದ ನಾವಿಕನಾಗಿರುವ ದೋನಿ ಈಗ ವಿಶ್ವದಾಖಲೆಯ ಒಡೆಯನಾಗಿ ಮಿಂಚುತ್ತಿದ್ದಾರೆ. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಧೋನಿ ಅವರು ಪತ್ನಿ ಸಾಕ್ಷಿ, ಮಗಳು ಜೀವಾ ಹಾಗೂ ಭಾರತೀಯ ಕ್ರಿಕೆಟ್ ಆಟಗಾರರೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

   


   

  First published: