News18 India World Cup 2019

ಪದಾರ್ಪಣೆ ಟೆಸ್ಟ್​​ನ 2ನೇ ಎಸೆತದಲ್ಲೇ ಸಿಕ್ಸ್; ಏನಂದ್ರು ರಿಷಭ್ ಪಂತ್..?

news18
Updated:August 25, 2018, 5:54 PM IST
ಪದಾರ್ಪಣೆ ಟೆಸ್ಟ್​​ನ 2ನೇ ಎಸೆತದಲ್ಲೇ ಸಿಕ್ಸ್; ಏನಂದ್ರು ರಿಷಭ್ ಪಂತ್..?
news18
Updated: August 25, 2018, 5:54 PM IST
ನ್ಯೂಸ್ 18 ಕನ್ನಡ

ಆಂಗ್ಲರ ನೆಲದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-1ರ ಹಿನ್ನಡೆಯಲ್ಲಿದೆ. ನ್ಯಾಟಿಂಗ್​ಹ್ಯಾಮ್​​ನಲ್ಲಿ ನಡೆದ 3ನೇ ಟೆಸ್ಟ್​​ನಲ್ಲಿ ಕೊಹ್ಲಿ ಪಡೆ 203 ರನ್​ಗಳಿಂದ ಗೆದ್ದು ಸರಣಿಯನ್ನು ಜೀವಂತವಾಗಿರಿಸಿದೆ. ಈ ಮಧ್ಯೆ ಚೊಚ್ಚಲ ಅಂತರಾಷ್ಟ್ರೀಯಾ ಟೆಸ್ಟ್​ ಪಂದ್ಯವನ್ನಾಡಿದ ವಿಕೆಟ್ ಕೀಪರ್-ಬ್ಯಾಟ್ಸ್​ಮನ್​ ರಿಷಭ್ ಪಂತ್ ತಾವೆದುರಿಸಿದ ಎರಡನೇ ಎಸೆತದಲ್ಲೇ ಸಿಕ್ಸ್​ ಸಿಡಿಸಿದ್ದರು. ಈ ಮೂಲಕ ಪದಾರ್ಪಣೆ ಟೆಸ್ಟ್​​ನಲ್ಲಿ ಸಿಕ್ಸ್ ಬಾರಿಸುವ ಮೂಲಕ ರನ್ ಖಾತೆ ತೆರೆದ ಭಾರತದ ಮೊದಲ  ಹಾಗೂ ವಿಶ್ವದ 12ನೇ ಬ್ಯಾಟ್ಸ್​ಮನ್​​ ಎಂಬ ಕೀರ್ತಿಗೆ ಪಂತ್ ಭಾಜನರಾಗಿದ್ದರು.

ಸದ್ಯ ಈ ವಿಚಾರದ ಕುರಿತು ಮಾತನಾಡಿರುವ ಪಂತ್, ಅಂತರಾಷ್ಟ್ರೀಯಾ ಟೆಸ್ಟ್​​ ಪಂದ್ಯವನ್ನಾಡುವುದು ನನ್ನ ಕನಸಾಗಿತ್ತು. ಪ್ರತಿಯೊಬ್ಬರು ಮೊದಲ ಪಂದ್ಯವನ್ನಾಡುವಾಗ ಆತಂಕಕ್ಕೆ ಒಳಗಾಗುತ್ತಾರೆ. ನನಗೆ ಕೂಡ ಅದೇ ರೀತಿಯಾಗಿತ್ತು. ನಾನು ಎದುರಿಸಿದ 2ನೇ ಎಸೆತದಲ್ಲೇ ಸಿಕ್ಸ್ ಬಾರಿಸಬೇಕೆಂದು ಯೋಚಿಸಿರಲಿಲ್ಲ. ರಶೀದ್ ಮಾಡಿದ ಬೌಲ್ ಅನ್ನು ನೋಡಿದೆ ಮತ್ತು ಅದಕ್ಕೆ ಪ್ರತಿಕ್ರಿಯಿಸಿದೆ ಎಂದು ಹೇಳಿದ್ದಾರೆ. ಇನ್ನು ಇಂಗ್ಲೆಂಡ್​ನಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾನೇ ಕಷ್ಟಕರ. ಕಳೆದ ತಿಂಗಳು ಇಂಗ್ಲೆಂಡ್​​ನಲ್ಲೇ ಭಾರತ ಎ ತಂಡದ ಜೊತೆ ಆಡಿದ್ದೆ, ಇದು ನನಗೆ ತುಂಬಾನೇ ಸಹಯವಾಗುತ್ತಿದೆ ಎಂದಿದ್ದಾರೆ.

291ನೇ ಭಾರತದ ಟೆಸ್ಟ್ ಆಟಗಾರನಾಗಿ 20 ವರ್ಷ ಪ್ರಾಯದ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್​ಗೆ ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್​ ಮೂಲಕ ಪದಾರ್ಪಣೆ ಮಾಡಿದ್ದರು. ಸದ್ಯ ಆಗಸ್ಟ್​ 30ರಿಂದ ಆರಂಭವಾಗುವ 4ನೇ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದ್ದು, ಟೀಂ ಇಂಡಿಯಾ ಕಠಿಣ ಅಭ್ಯಾಸದಲ್ಲಿ ತೊಡಗಿದೆ.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...