ಸಾಮಾನ್ಯವಾಗಿ ಈ ಸಿನೆಮಾ ಸೆಲೆಬ್ರಿಟಿಗಳು ಅಥವಾ ಯಾವುದಾದರೂ ಕ್ರೀಡೆಯ ಜನಪ್ರಿಯ ಆಟಗಾರರು ತಮ್ಮ ಕುಟುಂಬದವರೊಡನೆ ಯಾವುದಾದರೊಂದು ಪ್ರೇಕ್ಷಣೀಯ ಸ್ಥಳವನ್ನು ನೋಡಲು ಬಂದಾಗ ಅಲ್ಲಿ ಅವರ ಅಭಿಮಾನಿಗಳು ಅವರೊಂದಿಗೆ ಫೋಟೋ (Photo) ತೆಗೆಸಿಕೊಳ್ಳಲು ಮತ್ತು ಅವರ ಆಟೋಗ್ರಾಫ್ ಪಡೆಯಲು ಮುಗಿಬೀಳುವುದನ್ನು ನಾವೆಲ್ಲಾ ಅನೇಕ ಬಾರಿ ನೋಡಿರುತ್ತೇವೆ. ಹೀಗೆ ಅಭಿಮಾನಿಗಳಿಂದ ಸುತ್ತುವರೆದು ಅವರಿಗೆ ಆ ಸ್ಥಳಕ್ಕೆ ಭೇಟಿ ನೀಡಿದ ಸಮಯವನ್ನು ಸಂಪೂರ್ಣವಾಗಿ ಆನಂದಿಸಲು ಆಗುವುದಿಲ್ಲ. ಅದಕ್ಕೆ ಜನಪ್ರಿಯ ಫುಟ್ಬಾಲ್ (Football) ಆಟಗಾರ ರೊನಾಲ್ಡೊ (Cristiano Ronaldo) ತನ್ನ ಕುಟುಂಬದೊಂದಿಗೆ ಪಾರ್ಕಿಗೆ ಆ ಸ್ಥಳವನ್ನು ಸಾರ್ವಜನಿಕರಿಗಾಗಿ ಸುಮಾರು ಎರಡು ಗಂಟೆಗಳ ಕಾಲ ಮುಚ್ಚಿದ್ರಂತೆ.
ಅಮ್ಯೂಸ್ಮೆಂಟ್ ಪಾರ್ಕ್ಗೆ ಬಂದ ಕ್ರಿಸ್ಟಿಯಾನೊ ರೊನಾಲ್ಡೊ:
ಫುಟ್ಬಾಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಅವರ ಕುಟುಂಬದವರಿಗಾಗಿ ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಲ್ಲಿರುವ ಮನರಂಜನಾ ಉದ್ಯಾನವನವನ್ನು ಎರಡು ಗಂಟೆಗಳ ಕಾಲ ಮುಚ್ಚಲಾಗಿತ್ತು ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಪಾರ್ಕ್ ಅಧಿಕಾರಿಗಳ ಪ್ರಕಾರ, ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಮತ್ತು ಅವರ ಕುಟುಂಬದ ಖಾಸಗಿ ಭೇಟಿಗೆ ಅನುಕೂಲವಾಗುವಂತೆ ಬೌಲೆವಾರ್ಡ್ ವರ್ಲ್ಡ್ ಅಮ್ಯೂಸ್ಮೆಂಟ್ ಪಾರ್ಕ್ ಅನ್ನು ಎರಡು ಗಂಟೆಗಳ ಕಾಲ ಸಾರ್ವಜನಿಕರಿಗೆ ಮುಚ್ಚಲಾಯಿತು.
ಪಾರ್ಕ್ ನಲ್ಲಿ ತೆಗೆಸಿಕೊಂಡ ಫೋಟೋ ವೈರಲ್:
ಅವರ ಸಂಗಾತಿ ಜಾರ್ಜಿನಾ ರೊಡ್ರಿಗಸ್ ಥೀಮ್ ಪಾರ್ಕ್ ನಲ್ಲಿ ಆನಂದಿಸುತ್ತಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ವಿಶ್ವದ ಅತಿ ಉದ್ದದ ರೋಲರ್ ಕೋಸ್ಟರ್ ಮತ್ತು ಗರಿಷ್ಠ 52 ಮೀಟರ್ ಎತ್ತರ ಮತ್ತು 110 ಕಿಲೋ ಮೀಟರ್ ವೇಗವನ್ನು ತಲುಪುವ ಸ್ಕೈ ಲೂಪ್ ಸವಾರಿಯ ಮುಂದೆ ನಿಂತು ರೊನಾಲ್ಡೊ ಪತ್ನಿ ರೊಡ್ರಿಗಸ್ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
View this post on Instagram
ಇದನ್ನೂ ಓದಿ: Rahul Dravid: ದ್ರಾವಿಡ್ ಮಗ ಸೇಮ್ ಧೋನಿಯಂತೆ ಆಡ್ತಾರಂತೆ, ಡಬಲ್ ಸೆಂಚುರಿ ಬಾರಿಸಿದ್ರು ಸಮಿತ್-ಅನ್ವಯ್
ಸೌದಿ ಆಲ್ ಸ್ಟಾರ್ ತಂಡದಲ್ಲಿ ರೊನಾಲ್ಡೊ:
ಸೌದಿ ಫುಟ್ಬಾಲ್ ಕ್ಲಬ್ ಅಲ್-ನಸರ್ ಗಾಗಿ ರಿಯಾದ್ ನಲ್ಲಿರುವ ರೊನಾಲ್ಡೊ, ಕುಟುಂಬವು ಉಳಿದುಕೊಳ್ಳಲು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವವರೆಗೂ ಐಷಾರಾಮಿ ಪಂಚತಾರಾ ಹೊಟೇಲ್ ನಲ್ಲಿ ವಾಸಿಸುತ್ತಿದ್ದಾರೆ. ಅಲ್-ನಸರ್ ಕ್ಲಬ್ ನೊಂದಿಗೆ ಎರಡೂವರೆ ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿರುವ 37 ವರ್ಷದ ಆಟಗಾರ ರವಿವಾರ ತನ್ನ ಮೊದಲ ಪಂದ್ಯವನ್ನು ಆಡಲಿದ್ದಾರೆ.
ಜನವರಿ 19 ರಂದು ಲಿಯೋನೆಲ್ ಮೆಸ್ಸಿ ಅವರ ಪ್ಯಾರಿಸ್ ಸೇಂಟ್ ಜರ್ಮೈನ್ ವಿರುದ್ಧದ ಸ್ನೇಹಪರ ಪಂದ್ಯದಲ್ಲಿ ರೊನಾಲ್ಡೊ ಸೌದಿ ಆಲ್-ಸ್ಟಾರ್ ಇಲೆವೆನ್ ತಂಡವನ್ನು ಮುನ್ನಡೆಸಲಿದ್ದಾರೆ. ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ನಿಂದ ಸ್ಥಳಾಂತರಗೊಂಡಿದ್ದಕ್ಕಾಗಿ ಸರಿ ಸುಮಾರು 4,400 ಕೋಟಿ ರೂಪಾಯಿಗಳನ್ನು ಪಡೆದರು. ಅವರು ಈ ಹಿಂದೆ ಜುವೆಂಟಸ್ ಮತ್ತು ರಿಯಲ್ ಮ್ಯಾಡ್ರಿಡ್ ಪರ ಸಹ ಆಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ