• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • World Championships 2022: ಸಾತ್ವಿಕ್-ಚಿರಾಗ್ ಭರ್ಜರಿ ಜೊತೆಯಾಟ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಪದಕ

World Championships 2022: ಸಾತ್ವಿಕ್-ಚಿರಾಗ್ ಭರ್ಜರಿ ಜೊತೆಯಾಟ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಪದಕ

ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ

ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ

World Championships 2022: ವಿಶ್ವದ ನಂ 2 ಸ್ಥಾನದಲ್ಲಿರುವ ಟಕುರೊ ಹಾಕಿ ಮತ್ತು ಜಪಾನ್‌ನ ಯುಗೊ ಕೊಬಯಾಶಿ ಜೋಡಿಯೊಂದಿಗೆ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಪದಕವನ್ನು ತಮ್ಮದಾಗಿಸಿಕೊಂಡರು.

  • Share this:

ವಿಶ್ವದ ನಂ 2 ಸ್ಥಾನದಲ್ಲಿರುವ ಟಕುರೊ ಹಾಕಿ ಮತ್ತು ಜಪಾನ್‌ನ ಯುಗೊ ಕೊಬಯಾಶಿ ಜೋಡಿಯೊಂದಿಗೆ ಭಾರತದ ಪುರುಷರ ಡಬಲ್ಸ್ (Mens Doubles) ಜೋಡಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ (Satwiksairaj Rankireddy )ಮತ್ತು ಚಿರಾಗ್ ಶೆಟ್ಟಿ (Chirag Shetty) ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಪದಕವನ್ನು ತಮ್ಮದಾಗಿಸಿಕೊಂಡರು. ಮೊದಲ ಪಂದ್ಯದಲ್ಲಿ 12-5  ಅಂಕಗಳ ಅಂತರದ ಮುನ್ನಡೆ ಸಾಧಿಸಿದರು. ಜಪಾನಿನ ಜೋಡಿಯು 16-14 ರ ಜೊತೆಯಾಟವನ್ನು ನೀಡಿತು. ಅದಾಗ್ಯೂ ಆರಂಭಿಕ ಪಂದ್ಯದ ನಂತರ ಪ್ರಬಲವಾಗಿ ಆಡಿದ ಸಾತ್ವಿಕ್ ಚಿರಾಗ್ ಜೋಡಿ ಗೆಲ್ಲುವ ಮೂಲಕ ಚಾಂಪಿಯನ್​ ಆಗಿ ಹೊರಹೊಮ್ಮಿದರು.


ಜಪಾನ್​ ಜೋಡಿಗಳ ನಡುವೆ ಭಾರತೀಯ ಜೋಡಿಗಳ ಭರ್ಜರಿ ಆಟ:


ಟಕುರೊ ಮತ್ತು ಯುಗೊ ಎರಡನೇ ಪಂದ್ಯದಲ್ಲಿ ಕಟ್ಟುನಿಟ್ಟಿನ ಜೊತೆಯಾಟವನ್ನು ಆಡಿ 9-9 ಅಂತರದ ಸಮ ಬಲದಲ್ಲಿ ಪುನರ್ ಆಗಮನ ಮಾಡಿ ಭಾರತೀಯ ಜೋಡಿಗೆ ಪೈಪೋಟಿ ನೀಡಿತು. ಪಂದ್ಯವು ಸಮಬಲದಲ್ಲಿತ್ತು ಹಾಗೂ ಇಬ್ಬರೂ ಜೋಡಿಗಳು ತಮ್ಮ ರಕ್ಷಣಾ ಪ್ರಾಬಲ್ಯವನ್ನು ದೃಢಗೊಳಿಸಿದರು. ಮಧ್ಯಂತರದಲ್ಲಿ 11-5 ರಿಂದ ಮುನ್ನಡೆಯಲು ಜಪಾನೀ ಪಡೆ ದಾಳಿ ಹೆಚ್ಚಿಸಿದಾಗ ಭಾರತೀಯ ಜೋಡಿಯು ಉತ್ತಮವಾಗಿ ಆಟವಾಡಿತು.


ಇದನ್ನೂ ಓದಿ:  KL Rahul: ಕೆಎಲ್ ರಾಹುಲ್​ಗೆ ಇದು ಲಾಸ್ಟ್ ಚಾನ್ಸ್? ಕನ್ನಡಿಗನ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾನೆ ಪಂಜಾಬ್ ಬಾಯ್!


ಜಪಾನ್‌ನ ಯುಗೋ ಕೂಡ ಸಾತ್ವಿಕ್ ಜೋಡಿಗೆ ಪ್ರಬಲ ಪೈಪೋಟಿಯನ್ನು ನೀಡುವುದರ ಮೂಲಕ ಪ್ರಬಲ ಸ್ಮ್ಯಾಶ್ ಮತ್ತು ಕ್ರಾಸ್ ಕೋರ್ಟ್ ರಿಟರ್ನ್ ಸೇರಿದಂತೆ ಅತ್ಯುತ್ತಮ ಹೊಡೆತಗಳನ್ನು ಎದುರಾಳಿ ತಂಡಕ್ಕೆ ನೀಡಿದರು.


ಮೊದಲ ಬಾರಿಗೆ ಭಾರತದ ಮುಡಿಗೇರಿದ ಪುರುಷರ ಡಬಲ್ಸ್:


ಜಪಾನ್‌ನ ಆಟಗಾರರ ಎದುರು ಭಾರತೀಯ ಜೋಡಿಯನ್ನು 19-13 ಅಂತರದಲ್ಲಿ ಗೆಲುವಿನಿಂದ ಒಂದೆರಡು ಪಾಯಿಂಟ್‌ಗಳ ಅಂತರದಲ್ಲಿತ್ತು. ಸಾತ್ವಿಕ್ ಹಾಗೂ ಚಿರಾಗ್ ಜೋಡಿ ಕೂಡ ಅದ್ಭುತ ರಿಟರ್ನ್ಸ್‌ನೊಂದಿಗೆ ಏಳು ಮ್ಯಾಚ್ ಪಾಯಿಂಟ್‌ಗಳನ್ನು ತಮ್ಮದಾಗಿಸಿಕೊಂಡರು. ಇದು ಜಪಾನಿನ ಜೋಡಿಯ ಸೋಲಿಗೆ ಕಾರಣವಾಯಿತು.


ಈ ತಿಂಗಳ ಆರಂಭದಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತೀಯ ಜೋಡಿ ಒಂದು ಗಂಟೆ 15 ನಿಮಿಷಗಳಲ್ಲಿ 24-22, 15-21, 21-14 ಅಂತರದಲ್ಲಿ ಜಪಾನ್‌ನ ಜೋಡಿಯನ್ನು ಭರ್ಜರಿ ಪ್ರದರ್ಶನ ನೀಡಿತು. ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತವು ಮೊದಲ ಬಾರಿಗೆ ಪುರುಷರ ಡಬಲ್ಸ್ ಪದಕವನ್ನು ತನ್ನದಾಗಿಸಿಕೊಂಡಿತು.


2011 ರಲ್ಲಿ ಮಹಿಳಾ ಡಬಲ್ಸ್‌ನಲ್ಲಿ ವಿಶ್ವಚಾಂಪಿಯನ್ ಪದಕ:


ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿಯು 2011ರಲ್ಲಿ ಮಹಿಳೆಯರ ಡಬಲ್ಸ್‌ನಲ್ಲಿ ವಿಶ್ವಚಾಂಪಿಯನ್ ಪದಕವನ್ನು ಪಡೆದುಕೊಂಡ ನಂತರ ಎರಡನೇ ಪದಕ ಇದಾಗಿದೆ. ನಾವು ಇಲ್ಲಿಗೇ ತೃಪ್ತಿ ಪಟ್ಟಿಲ್ಲ. ನಾವು ಇನ್ನೂ ಮುಂದಕ್ಕೆ ಹೋಗಬೇಕು. ಆದರೆ ನಾವು ಇದನ್ನೇ ಗುರಿಯಾಗಿಸಿಕೊಂಡಿದ್ದೆವು. ನಮ್ಮ ದೇಹವನ್ನು ಫಿಟ್ ಆಗಿರಿಸಿಕೊಂಡು ಚೆನ್ನಾಗಿ ಪ್ರದರ್ಶನ ನೀಡಬೇಕೆಂದಿದ್ದೇವೆ ಎಂಬುದು ಸಾತ್ವಿಕ್ ಅಭಿಪ್ರಾಯವಾಗಿದೆ.


ಇದನ್ನೂ ಓದಿ:  Virat Kohli: ಏಷ್ಯಾ ಕಪ್​ಗೂ ಮುನ್ನ ಧೋನಿ ನೆನೆದ ವಿರಾಟ್​! ಭಾವುಕ ಪೋಸ್ಟ್ ಕಂಡು ಕಣ್ಣೀರಿಟ್ಟ ಕ್ರಿಕೆಟ್ ಅಭಿಮಾನಿಗಳು


ಇದಕ್ಕೂ ಮೊದಲು ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಮೂರು ಬಾರಿ ಚಿನ್ನದ ಪದಕ ವಿಜೇತರಾದ ಮೊಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಟಿಯವಾನ್ ವಿರುದ್ಧ ಎಂಆರ್ ಅರ್ಜುನ್ ಮತ್ತು ಧ್ರುವ್ ಕಪಿಲಾ ಸೋಲುಂಡಿದ್ದಾರೆ. ಈ ವಾರ ಅದ್ಭುತ ಗೆಲುವನ್ನು ತಮ್ಮದಾಗಿಸಿಕೊಂಡಿದ್ದ ಭಾರತೀಯ ಜೋಡಿಯು 8-21, 14-21 ಶ್ರೇಯಾಂಕದಲ್ಲಿ ವಿಶ್ವದಲ್ಲೇ ಅಜೇಯ ಎಂದೆನಿಸಿರುವ ಮೂರನೇ ಶ್ರೇಯಾಂಕದ ಇಂಡೋನೇಷ್ಯಾ ಜೋಡಿಯೆದುರಿಗೆ 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಸೋಲುಂಡಿದ್ದಾರೆ. ಈ ಜೋಡಿ ಇದಕ್ಕೂ ಮೊದಲು ಎಂಟನೇ ಶ್ರೇಯಾಂಕದ ಕಿಮ್ ಅಸ್ಟ್ರಪ್ ಮತ್ತು ಡೆನ್ಮಾರ್ಕ್‌ನ ಆಂಡರ್ಸ್ ಸ್ಕಾರಪ್ ರಾಸ್ಮುಸ್ಸೆನ್ ಅವರನ್ನು ಎರಡನೇ ಸುತ್ತಿನಲ್ಲಿ ಸೋಲಿಸಿದ್ದರು.


ಶುಕ್ರವಾರ ನಡೆದ BWF ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ಸ್ಪರ್ಧೆಯ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಎಚ್‌ಎಸ್ ಪ್ರಣಯ್ ಅವರು ಚೀನಾದ ಜಾವೊ ಜುನ್ ಪೆಂಗ್ ಅವರನ್ನು ಸೋಲಿಸಿದರು. 23 ನೇ ಶ್ರೇಯಾಂಕಿತ ಝಾವೊ ಎದುರು 21-19, 6-21, 18-21 ಅಂತರದಲ್ಲಿ ಸೋಲುಂಡರು.

top videos
    First published: