• Home
  • »
  • News
  • »
  • sports
  • »
  • Cricket News: ಸಂಸ್ಕೃತದಲ್ಲಿ ಕ್ರಿಕೆಟ್ ಕಾಮೆಂಟರಿ, ವೈರಲ್​ ಆಯ್ತು ವಿಡಿಯೋ

Cricket News: ಸಂಸ್ಕೃತದಲ್ಲಿ ಕ್ರಿಕೆಟ್ ಕಾಮೆಂಟರಿ, ವೈರಲ್​ ಆಯ್ತು ವಿಡಿಯೋ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Cricket News: ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಕೆಲವು ಹುಡುಗರು ಕ್ರಿಕೆಟ್ ಆಡುವುದನ್ನು ಮತ್ತು ಸಂಸ್ಕೃತದಲ್ಲಿ ಕಾಮೆಂಟರಿ ಮಾಡಿರುವುದನ್ನು ಕಾಣಬಹುದು.

  • Share this:

ಭಾರತದಲ್ಲಿನ ಗಲ್ಲಿ ಕ್ರಿಕೆಟ್ (Cricket) ಪಂದ್ಯಗಳಲ್ಲಿ ಕೆಲವು ಅತ್ಯುತ್ತಮ ಪ್ರತಿಭೆಗಳು ಆಗ್ಗಾಗ್ಗೆ ಸಖತ್​ ಸುದ್ದಿಯಲ್ಲಿರುತ್ತಾರೆ. ಆದರೆ ಯಾವುದೇ ಕ್ರೀಡೆಯು ತನ್ನ ಕಾಮೆಂಟರಿ (Commentary) ಮೂಲಕ ಜನರ ಗಮನವನ್ನು ಸೆಳೆಯುತ್ತದೆ. ಅಲ್ಲದೇ ನಮಗೆ ಕಾಮೆಂಟರಿ ಇಲ್ಲದೇ ಕ್ರಿಕೆಟ್​ ನೋಡುವುದು ತುಂಬಾ ಕಷ್ಟ ಎಂದು ಹೇಳಬಹುದು. ಅದಕ್ಕಾಗಿ ಕಾಮೆಂಟರಿ ಎನ್ನುವುದು ತುಂಬಾ ದೊಡ್ಡ ಮಹತ್ವವನ್ನು ಪಡೆದುಕೊಂಡಿದೆ. ನಾವೆಲ್ಲರೂ ಇದೀಗ ಇಂಗ್ಲಿಷ್ (English), ಹಿಂದಿ ಹೊರತು ಪಡಿಸಿದ ಪ್ರಾದೇಶಿಕ ಭಾಷೆಯಲ್ಲಿ ಕ್ರಿಕೆಟ್​ ಕಾಮೆಂಟರಿ ಅನ್ನು ಕೇಳುತ್ತಿದ್ದೇವೆ. ಆದರೆ ಇಲ್ಲಿ ಒಂದು ವಿಡಿಯೋ ವೈರಲ್​ ಆಗಿದ್ದು, ಸ್ಟ್ರೀಟ್ ಮ್ಯಾಚ್‌ನಲ್ಲಿ ಹುಡುಗನೊಬ್ಬ ಸಂಸ್ಕೃತದಲ್ಲಿ (Sanskrit) ಕಾಮೆಂಟರಿ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.


 ಸಂಸ್ಕೃತದಲ್ಲಿ ಕ್ರಿಕೆಟ್​ ಕಾಮೆಂಟರಿ:


ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಕೆಲವು ಹುಡುಗರು ಕ್ರಿಕೆಟ್ ಆಡುವುದನ್ನು ಮತ್ತು ಸಂಸ್ಕೃತದಲ್ಲಿ ಕಾಮೆಂಟರಿ ಮಾಡಿರುವುದನ್ನು ಕಾಣಬಹುದು. ಒಬ್ಬ ಹುಡುಗ (ವೀಡಿಯೊದ ಆರಂಭದಲ್ಲಿ ನೋಡಬಹುದಾದ) ತುಣುಕಿನ ಉದ್ದಕ್ಕೂ ಸಂಸ್ಕೃತದಲ್ಲಿ ಕಾಮೆಂಟರಿ ನೀಡುವುದನ್ನು ಕೇಳಬಹುದು, ಇದು ಸಾಕಷ್ಟು ಅದ್ಭುತವಾಗಿದೆ ಮೂಡಿಬಂದಿದೆ.ಟ್ವಿಟ್ಟರ್ ಬಳಕೆದಾರ ಲಕ್ಷ್ಮೀ ನಾರಾಯಣ್ ಬಿಎಸ್ ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದು, 'ಸಂಸ್ಕೃತ ಮತ್ತು ಕ್ರಿಕೆಟ್' ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಕೆಲವೇ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ವೇಗವಾಗಿ ವೈರಲ್ ಆಗಿದೆ. ಸಂಸ್ಕೃತದಲ್ಲಿನ ಈ ನಿರರ್ಗಳ ವ್ಯಾಖ್ಯಾನದಿಂದ ಸಾಮಾಜಿಕ ಮಾಧ್ಯಮ ಬಳಕೆದಾರರು ಆಶ್ಚರ್ಯಚಕಿತರಾದರು ಮತ್ತು ಈ ವ್ಯಾಖ್ಯಾನಕಾರರನ್ನು ತೀವ್ರವಾಗಿ ಹೊಗಳಿದ್ದಾರೆ.


ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ಗೂ ಮೊದಲೇ ಟೀಂ ಇಂಡಿಯಾದಲ್ಲಿ ಟೆನ್ಷನ್, ಬುಮ್ರಾ ನಂತರ ಮತ್ತೊಬ್ಬ ಆಟಗಾರ ಇಂಜೂರಿ


ಸಂಸ್ಕ್ರತಿ ಭಾಷೆ ಮಾತನಾಡುವವರು ಕಡಿಮೆ:


2011 ರ ಜನಗಣತಿಯಿಂದ ಪಡೆದ ಮಾಹಿತಿಯು ಭಾರತೀಯ ಜನಸಂಖ್ಯೆಯ ಶೇಕಡಾ 0.002 ಕ್ಕಿಂತ ಕಡಿಮೆ ಜನರು ಸಂಸ್ಕೃತವನ್ನು ಮಾತನಾಡುತ್ತಾರೆ. ಸಂಸ್ಕೃತವು ಭಾರತದಲ್ಲಿ ಕೇವಲ 24,821 ಜನರ ಮಾತೃಭಾಷೆಯಾಗಿದೆ. 2001 ರ ಜನಗಣತಿಯಲ್ಲಿ ಈ ಸಂಖ್ಯೆ 14,135 ಆಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಕ್ರಮೇಣವಾಗಿ ಸಂಸ್ಕೃತ ಮಾತನಾಡುವವರ ಸಂಖ್ಯೆ ಹೆಚ್ಚುತ್ತಿದೆ. ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಗೃಹ ಸಚಿವಾಲಯದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಯಿಂದ ಈ ಮಾಹಿತಿಯನ್ನು ಪಡೆಯಲಾಗಿದೆ.


ಇದನ್ನೂ ಓದಿ: T20 World Cup 2022: ಟೀಂ ಇಂಡಿಯಾ ವಿಶ್ವಕಪ್​ ಗೆಲ್ಲಬೇಕಾದ್ರೆ ಈ ಆಟಗಾರ ಆಡಬೇಕಂತೆ, ಇಲ್ಲಾ ಅಂದ್ರೆ ಕಷ್ಟವಂತೆ


ಈ ರೀತಿ ಕಾಮೆಂಟರಿ ಬೇಕು ಎಂದ ನೆಟ್ಟಿಗರು:


ಹೌದು, ಸಾಮಾನ್ಯವಾಗಿ ನಾವೆಲ್ಲರೂ ಇದೀಗ ಇಂಗ್ಲಿಷ್​, ಹಿಂದೆ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಮಾತ್ರ ಕಾಮೆಂಟರಿಗಳನ್ನು ಕೇಳುತ್ತಿದ್ದೇವೆ. ಆದರೆ ಇದೀಗ ಈ ಸಂಸ್ಕ್ರತಿಯ ಕಾಮೆಂಟರಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇದನ್ನೂ ಅಂತರಾಷ್ಟ್ರೀಯ ಕ್ರಿಕೆಟ್​ ಕಾಮೆಂಟರಿಯಲ್ಲೂ ಬಳಸಬೇಕು ಎಂದು ಹೇಳುತ್ತಿದ್ದಾರೆ. ಅಲ್ಲದೇ ವಿಡಿಯೋ ವೈರಲ್​ ಆಗುತ್ತಿದ್ದಂತೆ ವಿಡಿಯೋಗೆ ನೆಟ್ಟಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಅನೇಕ ಜನರು ಭಾರತದ ಪುರಾತನ ಭಾಷೆ ಸಂಸ್ಕೃತ ಚೀನಾಗೆ ಬಂದು ಬರೋಬ್ಬರಿ 2000 ವರ್ಷಗಳು ಗತಿಸಿದರೂ ಅಲ್ಲಿ ಸಂಸ್ಕೃತ ಭಾಷೆ ಇನ್ನೂ ಜನಪ್ರಿಯವಾಗಿದೆ. ಇನ್ನು, ಚೀನಾದ ಪೇಕಿಂಗ್‌ ವಿಶ್ವವಿದ್ಯಾಲಯವು ಸಂಸ್ಕೃತವನ್ನು ಪಠ್ಯವಾಗಿ ಆರಂಭಿಸಿ 100 ವರ್ಷ ಪೂರ್ಣಗೊಂಡಿದೆ.

Published by:shrikrishna bhat
First published: