• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • IPL 2023: ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್​ಗೆ ಬರದೇ ಇರಲು ಕಾರಣನೇ ಸಂಜು ಸ್ಯಾಮ್ಸನ್ ಅಂತೆ​! ಏಕೆ ಗೊತ್ತಾ?

IPL 2023: ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್​ಗೆ ಬರದೇ ಇರಲು ಕಾರಣನೇ ಸಂಜು ಸ್ಯಾಮ್ಸನ್ ಅಂತೆ​! ಏಕೆ ಗೊತ್ತಾ?

ಸಂಜು ಸ್ಯಾಮ್ಸನ್ ಮತ್ತು ಸುನಿಲ್ ಗವಾಸ್ಕರ್

ಸಂಜು ಸ್ಯಾಮ್ಸನ್ ಮತ್ತು ಸುನಿಲ್ ಗವಾಸ್ಕರ್

IPL 2023ರ ರಾಜಸ್ಥಾನ್ ರಾಯಲ್ಸ್ ಪ್ಲೇ-ಆಫ್ ಹಂತಕ್ಕೆ ತಲುಪದೇ ಇರಲು ಭಾರತದ ಮಾಜಿ ಬೌಲರ್ ಎಸ್ ಶ್ರೀಶಾಂತ್ ಅವರು ಪಂದ್ಯಾವಳಿಯ ಸಮಯದಲ್ಲಿ ತಂಡದ ನಾಯಕ ಸಂಜು ಸ್ಯಾಮ್ಸನ್, ಹಿರಿಯ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅವರು ನೀಡಿದ ಸಲಹೆಯನ್ನು ನಿರ್ಲಕ್ಷಿಸಿದ್ದೇ ಕಾರಣ ಎಂದಿದ್ದಾರೆ.

 • Share this:

ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023 ರ ಆವೃತ್ತಿ ಕೊನೆಯ ಹಂತವನ್ನು ತಲುಪಿದ್ದು, ಇನ್ನೂ ಎರಡು ಪಂದ್ಯಗಳು ಮಾತ್ರವೇ ಉಳಿದಿವೆ. ಬಹುನಿರೀಕ್ಷಿತ ಐಪಿಎಲ್ ಸೆಮಿಫೈನಲ್ ಪಂದ್ಯವೊಂದು ಗುಜರಾತ್ ಟೈಟಾನ್ಸ್ (Gujarat Titans) ಹಾಗೂ ಮುಂಬೈ ಇಂಡಿಯನ್ಸ್ (Mumbai Indians) ತಂಡಗಳ ನಡುವೆ ಮೇ 26ನೇ ತಾರೀಖಿನಂದು ನಡೆದಿದೆ. ಇದರಲ್ಲಿ ಗುಜಶರಾತ್​ ಟೈಟಾನ್ಸ್​ ಗೆದ್ದು ಫೈನಲ್ ಪ್ರವೇಶಿಸಿದೆ. ಈ ಬಾರಿಯ ಐಪಿಎಲ್ 2023 ರ ಫೈನಲ್ (IPL @023 Final) ನಲ್ಲಿ ಗುಜರಾತ್​ ಟೈಟಾನ್ಸ್​ ಎಂ.ಎಸ್ ಧೋನಿ ಅವರ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಎದುರಿಸಲಿದೆ.


ಈ ಐಪಿಎಲ್ ನಲ್ಲಿ ಎಷ್ಟೋ ತಂಡಗಳು ಟೂರ್ನಿಯ ಮೊದಲರ್ಧದಲ್ಲಿ ತುಂಬಾನೇ ಚೆನ್ನಾಗಿ ಆಟವಾಡಿ, ಇನ್ನೇನು ಇವರೇ ಪ್ಲೇ-ಆಫ್ ಗೆ ಬರಬಹುದು ಅನ್ನೋವಾಗ ಮುಗ್ಗರಿಸಿ ಪ್ಲೇ-ಆಫ್ ನಿಂದ ಹೊರ ಬಿದ್ದಿವೆ.


ಸುನಿಲ್ ಗವಾಸ್ಕರ್ ಕೊಟ್ಟ ಸಲಹೆಯನ್ನು ನಿರ್ಲಕ್ಷಿಸಿದ್ರಂತೆ ಸಂಜು ಸ್ಯಾಮ್ಸನ್! ಏನ್ ಹೇಳಿದ್ರು ನೋಡಿ ಮಾಜಿ ಬೌಲರ್ ಶ್ರೀಶಾಂತ್..


ಐಪಿಎಲ್ ನಲ್ಲಿ ಶುಭಾರಂಭ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ-ಆಫ್ ನಿಂದ ಹೊರಗುಳಿಯಿತು


ಹೀಗೆ ಮುಗ್ಗರಿಸಿದ ತಂಡಗಳಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡವು ಒಂದು. ಏಕೆಂದರೆ ಏಪ್ರಿಲ್ 27 ರಂದು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 30 ರನ್ ಗಳ ಜಯ ಸಾಧಿಸಿದ ನಂತರ ರಾಜಸ್ಥಾನ್ ರಾಯಲ್ಸ್ ತಂಡವು ತನ್ನ ಆರಂಭಿಕ 8 ಪಂದ್ಯಗಳಲ್ಲಿ 5 ಗೆಲುವುಗಳೊಂದಿಗೆ ಐಪಿಎಲ್ ಟೇಬಲ್ ನಲ್ಲಿ ಅಗ್ರಸ್ಥಾನವನ್ನು ಪಡೆದಿತ್ತು. ಆದರೆ ನಂತರದ ಕೆಲವೇ ಕೆಲವು ವಾರಗಳಲ್ಲಿ ಈ ತಂಡವು ಐಪಿಎಲ್ ಪ್ಲೇ-ಆಫ್ ನಿಂದಲೇ ಹೊರಹೋಯಿತು.


ಇದನ್ನೂ ಓದಿ: ಸೆಹ್ವಾಗ್​ ದಾಖಲೆ ಮುರಿದ ಗಿಲ್​! ಪ್ರಿನ್ಸ್ ಅಬ್ಬರಕ್ಕೆ ರೆಕಾರ್ಡ್ಸ್​ಗಳೆಲ್ಲಾ ಉಡೀಸ್​


ಒಳ್ಳೆಯ ಅಂತರಾಷ್ಟೀಯ ಮತ್ತು ದೇಸಿಯ ಆಟಗಾರರನ್ನು ಒಳಗೊಂಡಿರುವ ಈ ತಂಡ ಈ ಆವೃತ್ತಿಯ ಮೊದಲರ್ಧದಲ್ಲಿ ಚೆನ್ನಾಗಿ ಆಟವಾಡಿ, ಕೊನೆ ಕೊನೆಗೆ ಮುಗ್ಗರಿಸಲು ಕಾರಣಗಳು ಅನೇಕ ಇವೆ.


ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ-ಆಫ್ ನಿಂದ ಹೊರಗುಳಿಯುವುದಕ್ಕೆ ಇದೇ ಕಾರಣವಂತೆ..


ಐಪಿಎಲ್ 2023 ರಿಂದ ರಾಜಸ್ಥಾನ್ ರಾಯಲ್ಸ್ ಪ್ಲೇ-ಆಫ್ ಹಂತಕ್ಕೆ ತಲುಪಲು ವಿಫಲವಾದುದ್ದಕ್ಕೆ ಭಾರತದ ಮಾಜಿ ಬೌಲರ್ ಎಸ್ ಶ್ರೀಶಾಂತ್ ಅವರು ಪಂದ್ಯಾವಳಿಯ ಸಮಯದಲ್ಲಿ ತಂಡದ ನಾಯಕ ಸಂಜು ಸ್ಯಾಮ್ಸನ್, ಹಿರಿಯ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅವರು ನೀಡಿದ ಸಲಹೆಯನ್ನು ನಿರ್ಲಕ್ಷಿಸಿದ್ದೇ ಕಾರಣ ಅಂತ ಹೇಳಿದ್ದಾರೆ ನೋಡಿ.


ಕೇರಳ ಪರ ಸ್ಯಾಮ್ಸನ್ ಅವರೊಂದಿಗೆ ಆಡಿರುವ ಶ್ರೀಶಾಂತ್, ಐಪಿಎಲ್ 2023 ರ ಸಮಯದಲ್ಲಿ ಕ್ರೀಸ್ ನಲ್ಲಿ ಸ್ವಲ್ಪ ಹೊತ್ತು ಸಮಯ ಕಳೆಯಲು ಲೆಜೆಂಡರಿ ಬ್ಯಾಟರ್ ಸುನಿಲ್ ಗವಾಸ್ಕರ್ ಅವರು ಸಂಜು ಸ್ಯಾಮ್ಸನ್ ಗೆ ಸಲಹೆ ನೀಡಿದ್ದರು, ಆದರೆ ಸ್ಯಾಮ್ಸನ್ ತಮ್ಮದೇ ಆದ ರೀತಿಯಲ್ಲಿ ಬ್ಯಾಟಿಂಗ್ ಮುಂದುವರಿಸಿದರು ಎಂದು ಹೇಳಿದರು.


ಸಂಜು ಸ್ಯಾಮ್ಸನ್ ಮತ್ತು ಸುನಿಲ್ ಗವಾಸ್ಕರ್


"ಗವಾಸ್ಕರ್ ಸರ್ ಅವರು ಸಂಜು ಗೆ ಕನಿಷ್ಠ 10 ಎಸೆತಗಳನ್ನು ಎದುರಿಸಲು ಹೇಳಿದ್ದರು. ವಿಕೆಟ್ ಯಾವ ರೀತಿ ಇದೆ ಅಂತ ನೋಡಿ. ನೀವು ಸಾಕಷ್ಟು ಪ್ರತಿಭೆಯನ್ನು ಹೊಂದಿದ್ದೀರಿ ಎಂದು ನಮಗೆ ತಿಳಿದಿದೆ, ನೀವು 12 ಎಸೆತಗಳಲ್ಲಿ 0 ರನ್ ಗಳಿಸಿದರೂ ಪರವಾಗಿಲ್ಲ, ನಂತರ ನೀವು 25 ರಲ್ಲಿ 50 ರನ್ ಗಳಿಸಬಹುದು" ಅಂತ ಹೇಳಿದ್ದರು.


ಲೀಗ್ ಹಂತದಲ್ಲಿ ಆರ್‌ಆರ್ ತನ್ನ ಕೊನೆಯ ಪಂದ್ಯದಲ್ಲಿ ಸೋತಾಗ 'ಇಲ್ಲ, ಈ ರೀತಿ ಆಡುವುದು ನನ್ನ ಶೈಲಿ' ಅಂತ ಸಂಜು ಹೇಳಿದ್ದು, ನನಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ಶ್ರೀಶಾಂತ್ ಸ್ಟಾರ್ ಸ್ಪೋರ್ಟ್ಸ್ ಗೆ ತಿಳಿಸಿದರು.
ಸಂಜು ಸ್ಯಾಮ್ಸನ್ ಬಗ್ಗೆ ಶ್ರೀಶಾಂತ್ ಹೇಳಿದ್ದೇನು ನೋಡಿ..


"ನಾನು ಸಂಜು ಅವರನ್ನು ಬೆಂಬಲಿಸುತ್ತೇನೆ, ಏಕೆಂದರೆ ಕಳೆದ 4-5 ವರ್ಷಗಳಿಂದ ನಾನು ಅವರನ್ನು ಒಬ್ಬ ಕ್ರಿಕೆಟಿಗನಾಗಿ ನೋಡಿದಾಗ, ಐಪಿಎಲ್ ಮಾತ್ರವಲ್ಲದೇ, ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿಯೂ ಚೆನ್ನಾಗಿ ಪ್ರದರ್ಶನ ನೀಡುವಂತೆ ನಾನು ಅವರಿಗೆ ಅನೇಕ ಬಾರಿ ಹೇಳಿದ್ದೇನೆ” ಎಂದು ಶ್ರೀಶಾಂತ್ ಹೇಳಿದರು.

top videos


  ಐಪಿಎಲ್ 2023 ರ ಮೊದಲ ಎರಡು ಪಂದ್ಯಗಳಲ್ಲಿ ಸ್ಯಾಮ್ಸನ್ ಕ್ರಮವಾಗಿ 55 ಮತ್ತು 42 ರನ್ ಗಳಿಸಿದ್ದರು. ಈ ಋತುವಿನಲ್ಲಿ 14 ಪಂದ್ಯಗಳಲ್ಲಿ ಅವರು ಬರೀ 362 ರನ್ ಗಳಿಸಿದ್ದಾರೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು