• Home
  • »
  • News
  • »
  • sports
  • »
  • Sania Mirza: ಶೋಯೆಬ್‌ ಬಯೋದಲ್ಲಿ ಸಾನಿಯಾ ಮಿರ್ಜಾ, ಸ್ಟಾರ್​ ಜೋಡಿ ಡಿವೋರ್ಸ್​ ವಿಷಯದಲ್ಲಿ ಬಿಗ್​ ಟ್ವಿಸ್ಟ್​

Sania Mirza: ಶೋಯೆಬ್‌ ಬಯೋದಲ್ಲಿ ಸಾನಿಯಾ ಮಿರ್ಜಾ, ಸ್ಟಾರ್​ ಜೋಡಿ ಡಿವೋರ್ಸ್​ ವಿಷಯದಲ್ಲಿ ಬಿಗ್​ ಟ್ವಿಸ್ಟ್​

ಸಾನಿಯಾ ಮಿರ್ಜಾ

ಸಾನಿಯಾ ಮಿರ್ಜಾ

Sania Mirza: ಇನ್‌ ಸ್ಟಾಗ್ರಾಂ ನಲ್ಲಿ ಹೆಸರಿನ ಕೆಳಗೆ ಇರುವ ಬಯೋದಲ್ಲಿ ಶೋಯೆಬ್‌ ಮಲಿಕ್‌, ಕ್ರೀಟಾಪಟು, ಸೂಪರ್‌ ವುಮನ್‌ @ಮಿರ್ಜಾಸಾನಿಯಾರ್‌ ಪತಿ, ಒಂದು ಮಗುವಿನ ತಂದೆ ಎಂದು ಬರೆದುಕೊಂಡು ಸಾನಿಯಾ ಮಿರ್ಜಾ ಅಕೌಂಟ್‌ ಅನ್ನು ಟ್ಯಾಗ್‌ ಮಾಡಿದ್ದಾರೆ.

  • Share this:

ಸಿನಿಮಾ ತಾರೆಯರು ಮತ್ತು ಸೆಲೆಬ್ರಿಟಿ (Celebrities) ಕ್ರೀಡಾಪಟುಗಳು, ಶ್ರೀಮಂತ ಉದ್ಯಮಿಗಳ ಬದುಕು ಒಂಥರಾ ತೆರೆದ ಪುಸ್ತಕವಿದ್ದಂತೆ. ಇವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿರೋದ್ರಿಂದ ಅವರು ಕುಂತಿದ್ದು, ನಿಂತಿದ್ದು, ನಕ್ಕಿದ್ದು, ಹೋಗಿದ್ದು-ಬಂದಿದ್ದು ಎಲ್ಲವೂ ಸುದ್ದಿ ಆಗುತ್ತದೆ. ಇನ್ನು ಇಂಥ ಸೆಲೆಬ್ರಿಟಿಗಳ ವೈಯಕ್ತಿಕ ಬದುಕಿನ ಬಗ್ಗೆಯೂ ಜನರಿಗೆ ಹೆಚ್ಚೆನಿಸುವಷ್ಟು ಕ್ಯೂರಿಯಾಸಿಟಿ ಇರುತ್ತದೆ. ಹಾಗಾಗಿ ಅವರ ಜೀವನದ ಬಗ್ಗೆ ಒಂದಿಷ್ಟು ನಿಜವಾದದ್ದು, ಒಂದಿಷ್ಟು ಊಹಾಪೋಹಗಳು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಇತ್ತೀಚಿಗಷ್ಟೇ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್‌ ಮಲಿಕ್‌ (Shoaib Malik) ಹಾಗೂ ಟೆನಿಸ್‌ ತಾರೆ ಸಾನಿಯಾ ಮಿರ್ಜಾ (Sania Mirza) ಬೇರೆಯಾಗ್ತಾರೆ ಅಂತ ಸುದ್ದಿಯಾಗಿದ್ದರು. ವೈಯಕ್ತಿಕ ಕಾರಣಗಳಿಂದ ಈ ಜೋಡಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಜೋರು ಸುದ್ದಿಯಾಗಿತ್ತು. ಆದರೆ ಇದೀಗ ಈ ಕುರಿತು ಇನ್ನೊಂದು ಪೋಸ್ಟ್​ ಸಖತ್ ವೈರಲ್ ಆಗುತ್ತಿದೆ.


ಶೋಯೆಬ್‌ ಬಯೋದಲ್ಲಿ ಸಾನಿಯಾ ಮಿರ್ಜಾ ಹೆಸರು:


ಇನ್‌ ಸ್ಟಾಗ್ರಾಂ ನಲ್ಲಿ ಹೆಸರಿನ ಕೆಳಗೆ ಇರುವ ಬಯೋದಲ್ಲಿ ಶೋಯೆಬ್‌ ಮಲಿಕ್‌, ಕ್ರೀಟಾಪಟು, ಸೂಪರ್‌ ವುಮನ್‌ @ಮಿರ್ಜಾಸಾನಿಯಾರ್‌ ಪತಿ, ಒಂದು ಮಗುವಿನ ತಂದೆ ಎಂದು ಬರೆದುಕೊಂಡು ಸಾನಿಯಾ ಮಿರ್ಜಾ ಅಕೌಂಟ್‌ ಅನ್ನು ಟ್ಯಾಗ್‌ ಮಾಡಿದ್ದಾರೆ. ಈ ಮೂಲಕ ಈಗಾಗಲೇ ಬೇರೆಯಾಗಿದ್ದಾರೆ ಎಂಬುದಕ್ಕೆ ಪರೋಕ್ಷವಾಗಿ ಉತ್ತರ ನೀಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.


ಇನ್ನು ಈಗಾಗಲೇ ಡಿವೋರ್ಸ್‌ ಕುರಿತಾಗಿ ಶೋಯೆಬ್‌ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ್ದು ಇದು ವೈಯಕ್ತಿಕ ವಿಷಯ ಬಿಟ್ಟುಬಿಡಿ ಎಂಬುದಾಗಿ ಹೇಳಿದ್ದಾರೆ. ಅಲ್ಲದೇ ತಮ್ಮ ವಿಚ್ಛೇದನದ ಕುರಿತಾದ ಊಹಾಪೋಗಳಿಗೆ ಅಥವಾ ಪ್ರಶ್ನೆಗಳಿಗೆ ನಾನು ಅಥವಾ ಸಾನಿಯಾ ಉತ್ತರಿಸುವುದಿಲ್ಲ ಎಂಬುದಾಗಿಯೂ ಅವರು ಹೇಳಿದ್ದರು ಎನ್ನಲಾಗಿದೆ.


ಇದನ್ನೂ ಓದಿ: Sania Mirza: ಸಾನಿಯಾ-ಶೋಯೆಬ್ ನಡುವಿನ ಬಿರುಕಿಗೆ ಆ ಮಾಡೆಲ್ ಕಾರಣಾನಾ? ವೈರಲ್ ಆಯ್ತು ನಟಿಯ ಜೊತೆಗಿನ ಫೋಟೋಶೂಟ್


ಇನ್ನೊಂದು ವರದಿಯ ಪ್ರಕಾರ, ಶೋಯೆಬ್ ಮಲಿಕ್‌ ಮತ್ತು ಸಾನಿಯಾ ಮಿರ್ಜಾ ಈಗಾಗಲೇ ಬೇರ್ಪಟ್ಟಿರುವ ಕಾರಣ ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಅವರ ಆಪ್ತ ಸ್ನೇಹಿತರೊಬ್ಬರು ಹೇಳಿದ್ದಾರಂತೆ. ಅಲ್ಲದೇ ಮಲಿಕ್‌ ಅವರ ಮ್ಯಾನೇಜ್‌ ಮೆಂಟ್‌ ತಂಡದ ಸದಸ್ಯರೊಬ್ಬರು ಕೂಡ ಇದನ್ನು ನಿಜವೆಂದಿದ್ದಾರೆ. ಅವರಿಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ ಎಂದಿದ್ದರು. ಇದಕ್ಕಿಂತ ಹೆಚ್ಚಿನದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಅವರಿಬ್ಬರೂ ಬೇರೆಯಾಗಿದ್ದಾರೆ ಎಂಬುದನ್ನು ಮಾತ್ರ ಖಚಿತಪಡಿಸಬಹುದು ಎಂಬುದಾಗಿ ಹೇಳಿದ್ದಾರೆ ಎನ್ನಲಾಗಿದೆ.


ಕಾನೂನಿನ ಸಮಸ್ಯೆಯಲ್ಲಿ ಜೋಡಿ:


ಈ ಮಧ್ಯೆ ದಂಪತಿ ತಮ್ಮ ವಿಚ್ಛೇದನವನ್ನು ಘೋಷಿಸಲು ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅಂದಹಾಗೆ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ 2010ರಲ್ಲಿ ವಿವಾಹವಾದರು. ದಂಪತಿ ಅಕ್ಟೋಬರ್ 30, 2018 ರಂದು ಮಗ ಇಜಾನ್ ಮಿರ್ಜಾ ಮಲಿಕ್ ನನ್ನು ಬರಮಾಡಿಕೊಂಡಿದ್ದಾರೆ. ಈ ಮಧ್ಯೆ ಶೋಯೆಬ್‌ ಮಲಿಕ್‌ ಬಾಳಲ್ಲಿ ಪಾಕಿಸ್ತಾನಿ ನಟಿ ಆಯೇಷಾ ಒಮರ್‌ ಬಂದಿದ್ದಾರೆನ್ನಲಾಗಿದ್ದು ಅವರಿಬ್ಬರೂ ಜೊತೆಗೇ ಓಡಾಡುತ್ತಿದ್ದಾರೆ ಎನ್ನಲಾಗಿದೆ.


ಈ ಮಧ್ಯೆ ಆಯೇಷಾ ಅಂಥದ್ದೇನಿಲ್ಲ, ಶೋಯೆಬ್ ತನ್ನ ಹೆಂಡತಿಯೊಂದಿಗೆ ಸಂತೋಷವಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ತಾನು ಕ್ರಿಕೆಟಿಗನ ಉತ್ತಮ ಸ್ನೇಹಿತೆ ಎಂದೂ ಆಯೇಷಾ ಹೇಳಿಕೆ ನೀಡಿದ್ದರು. ಇವೆಲ್ಲದರ ಮಧ್ಯೆ ಒಟಿಟಿ ಯಲ್ಲಿ ಶೋಯೆಬ್‌ ಹಾಗೂ ಸಾನಿಯಾ ಮಿರ್ಜಾ, ದಿ ಮಿರ್ಜಾ ಮಲಿಕ್‌ ಶೋ ಎಂಬ ರಿಯಾಲಿಟಿ ಶೋ ಕೂಡ ನಡೆಸಿಕೊಡುತ್ತಿದ್ದಾರೆ.


ಒಟ್ಟಾರೆ, ಇಬ್ಬರೂ ದೊಡ್ಡ ಸೆಲೆಬ್ರಿಟಿಗಳಾಗಿದ್ದರಿಂದ ಇವರ ಪ್ಯಾನ್‌ ಫಾಲೋವರ್ಸ್‌ ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೌದು.. ಅಲ್ಲಗಳ ಮಧ್ಯೆ ಇವರಿಬ್ಬರ ವಿಚ್ಛೇದನ ದಿನಕ್ಕೊಂದು ಸುದ್ದಿ ಮಾಡುತ್ತಿದೆ. ಮುಂದೇನಾಗುತ್ತದೆ ಅನ್ನೋದ್ರ ಬಗ್ಗೆ ಅಭಿಮಾನಿಗಳು ಕಾದು ನೋಡಬೇಕಷ್ಟೇ.

Published by:shrikrishna bhat
First published: