ಬೇಬಿ ಮಿರ್ಜಾ ಮಲ್ಲಿಕ್ ಆಗಮನದ ನಿರೀಕ್ಷೆಯಲ್ಲಿ ಮೂಗುತಿ ಸುಂದರಿ ಸಾನಿಯಾ ಮಿರ್ಜಾ

 • News18
 • Last Updated :
 • Share this:
  ನ್ಯೂಸ್ 18 ಕನ್ನಡ 

  ಮೂಗುತಿ ಸುಂದರಿ 31 ವರ್ಷದ  ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಈಗ ಪ್ರೆಗ್ನೆಂಟ್​​. ಇದೇನೂ ರೂಮರ್ಸ್ ಅಲ್ಲ. ಯಾಕಂದ್ರೆ, ತಾನು ಪ್ರೆಗ್ನೆಂಟ್ ಅನ್ನೋದನ್ನ ಸಾನಿಯಾ ತಮ್ಮ ಅಧಿಕೃತ ಟ್ವಿಟ್​​ರ್​​​​​ ಖಾತೆಯಲ್ಲಿ ಈ ಬಗ್ಗೆ ಚಿತ್ರವನ್ನು ಹಾಕಿಕೊಂಡಿದ್ದಾರೆ.

  ಕೆಲ ದಿನಗಳ ಹಿಂದೆ ಎಪ್ರಿಲ್​​ 12ರಂದು ಸಾನಿಯಾ ಮಿರ್ಜಾ ಹಾಗೂ ಅವರ ಪತಿ ಕ್ರಿಕೆಟರ್​​​ ಶೋಯೆಬ್​​ ಮಲಿಕ್​​ ತಮ್ಮ 8ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಇನ್ನೂ ಈ ವರ್ಷ ಅಕ್ಟೋಬರ್​​​ನಲ್ಲಿ ಸಾನಿಯಾ-ಶೋಯೆಬ್ ​ ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

  ಸಾನಿಯಾ ಪೋಸ್ಟ್​​ ಮಾಡಿರುವ ಚಿತ್ರದಲ್ಲಿ ಸಾನಿಯಾ ಮತ್ತು ಶೋಯೆಬ್ ಮಲಿಕ್​​ ಡ್ರೆಸ್ಸಿಂಗ್​ ಡ್ರೆಸ್ಸಿಂಗ್​ ರ‍್ಯಾಕ್​​ಗಳ ಮಧ್ಯೆ ಮತ್ತೊಂದು ರ‍್ಯಾಕ್​​ ಇದೆ.  ಅದು ಅವರ ಮಗುವಿನದು. ಅದಕ್ಕೆ ಮಿರ್ಜಾ-ಮಲ್ಲಿಕ್​​ ಎಂದು ಸಾನಿಯಾ ಹೆಸರಿಟ್ಟಿದ್ದಾರೆ. ಈ ಪೋಸ್ಟ್​​ ನೋಡುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಸಾನಿಯಾಗೆ ಶುಭಾಷಯ ತಿಳಿಸಿದ್ದಾರೆ.

  ಇನ್ನೂ ಇತ್ತಿಚಿನ 2018 ಗೋವಾ ಫೆಸ್ಟ್​​​ನಲ್ಲಿ ಸಾನಿಯಾ ತಮಗೆ ಹುಟ್ಟುವ ಮಗುವಿಗೆ ತನ್ನ ಹಾಗೂ ಪತಿ ಮಲಿಕ್​​​ ಇಬ್ಬರ ಸರ್​​ನೇಮ್​​ ಇರುತ್ತದೆ ಎಂದು ಹೇಳಿದ್ದರು.  ಪತಿ ಶೋಯೆಬ್​​ಗೆ ಹೆಣ್ಣು ಮಗು ಹುಟ್ಟಬೇಕೆಂಬ ಆಸೆ ಇದೆ ಅಂತಲೂ ಅವರು ಈ ಹಿಂದೆ ತಿಳಿಸಿದ್ದರು.

  ಒಂದು ಕಾಲದಲ್ಲಿ ತನ್ನ ​ ಆಟ ಮತ್ತು ಮೂಗುತಿಯಿಂದ ಪಡ್ಡೆ ಹುಡುಗರ ನಿದ್ದೆ ಕದ್ದು, ನಂತರ ಪಾಕಿಸ್ತಾನ ಕ್ರಿಕೆಟರ್​​ ಶೋಯೆಬ್ ಮಲ್ಲಿಕ್ ಅವರನ್ನು ಮದುವೆಯಾಗಿ ಗುಲ್ಲೆಬ್ಬಿಸಿದ್ದ ಸಾನಿಯಾ, ಈಗ  ಮತ್ತೆ ತಮ್ಮ ಪ್ರೆಗ್ನೆನ್ಸಿಯಿಂದಾಗಿ ಸುದ್ದಿಯಾಗಿದ್ದಾರೆ.

   

   

   

   
  First published: