ಖ್ಯಾತ ಟೆನಿಸ್ (Tennis) ತಾರೆ (Star), ಮೂಗುತಿ ಸುಂದರಿ ಸಾನಿಯಾ ಮಿರ್ಜಾ (Sania Mirza) ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ಪತಿ (Husband), ಪಾಕಿಸ್ತಾನ ಕ್ರಿಕೆಟ್ ಆಟಗಾರ (Pakistan Cricketer) ಶೋಯಬ್ ಮಲಿಕ್ (Shoaib Malik) ವಿರುದ್ಧ ಆರೋಪ ಮಾಡಿದ್ದಾರೆ. ಅವರ ಕೆಟ್ಟ ಗುಣಗಳ ಬಗ್ಗೆ ಹೇಳಿರುವ ಸಾನಿಯಾ, “ಪತಿ ಶೋಯಬ್ರ ಅಭ್ಯಾಸಗಳು ನನಗೆ ಇಷ್ಟವೇ ಆಗೋದಿಲ್ಲ” ಅಂತ ಹೇಳಿದ್ದಾರೆ. ಸಾನಿಯಾ ಮಿರ್ಜಾ ಹಾಗೂ ಶೋಯಬ್ ಮಲಿಕ್ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ (Social Media) ಆ್ಯಕ್ಟೀವ್ (Active) ಆಗಿದ್ದು, ಅವರ ವಿಚಾರಗಳನ್ನು ತಿಳಿದುಕೊಳ್ಳುವಲ್ಲಿ ಅಭಿಮಾನಿಗಳೂ (Fans) ಕೂಡ ಆಸಕ್ತರಾಗಿದ್ದಾರೆ. ಇತ್ತೀಚಿಗೆ ಟಿವಿ ಚಾನೆಲ್ (TV Channel) ಒಂದರ ಚಿಟ್ ಚಾಟ್ (Chit Chat) ಕಾರ್ಯಕ್ರಮದಲ್ಲಿ, ಸಾನಿಯಾ ಮಿರ್ಜಾ ಶೋಯೆಬ್ನ ಕೆಟ್ಟ ಅಭ್ಯಾಸಗಳಲ್ಲಿ ಒಂದನ್ನು ಬಹಿರಂಗಪಡಿಸಿದರು, “ಇದನ್ನು ನಾನು ಇಷ್ಟಪಡುವುದಿಲ್ಲ” ಅಂತ ನೇರವಾಗಿಯೇ ಹೇಳಿದ್ದಾರೆ. ಇನ್ನು ಈ ಜೋಡಿಯ ಸಂದರ್ಶನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.
ಪ್ರತಿ ರಾತ್ರಿ ಗೊರಕೆ ಹೊಡೆಯುತ್ತಾರಂತೆ ಶೋಯೆಬ್ ಮಲಿಕ್!
ಹೌದು, ಪತಿ ಶೋಯೆಬ್ ಮಲಿಕ್ ಈ ಗುಣದ ಬಗ್ಗೆ ಸಾನಿಯಾ ಮಿರ್ಜಾ ಉದ್ದುದ್ದದ ಕಂಪ್ಲೆಂಟ್ ಮಾಡಿದ್ದಾರೆ. ಶೋಯಬ್ ಮಲಿಕ್ ರಾತ್ರಿಯಲ್ಲಿ ಗೊರಕೆ ಹೊಡೆಯುತ್ತಾರಂತೆ. ಅದು ಒಂದೆರಡು ದಿನವಲ್ಲ, ಪ್ರತಿ ರಾತ್ರಿ ಮಲಗಿದ ತಕ್ಷಣ ಶೋಯಬ್ ಗೊರಕೆ ಹೊಡೆಯುತ್ತಾರಂತೆ. ಈ ಒಂದು ಗುಣ ನನಗೆ ಇಷ್ಟವೇ ಆಗುವುದಿಲ್ಲ ಅಂತ ಸಾನಿಯಾ ಮಿರ್ಜಾ ಹೇಳಿದ್ದಾರೆ.
“ಪ್ರತಿ ದಿನ ಅಲ್ಲ, ಸುಸ್ತಾದಾಗ ಮಾತ್ರ ಗೊರಕೆ ಹೊಡೆಯುತ್ತೇನೆ”
ಪತ್ನಿ ಸಾನಿಯಾ ಮಿರ್ಜಾ ಆರೋಪವನ್ನು ಶೋಯಬ್ ಮಲಿಕ್ ನಿರಾಕರಿಸಿದ್ದಾರೆ. ಆಕೆ ಹೇಳುವಂತೆ ನಾನು ಪ್ರತಿದಿನ ನಿದ್ದೆ ಮಾಡುವಾಗ ಗೊರಕೆ ಹೊಡೆಯುವುದಿಲ್ಲ ಎಂದಿದ್ದಾರೆ. ನಾನು ತುಂಬಾ ಸುಸ್ತಾಗಿ ಬಂದು, ಮಲಗಿದಾಗ ಮಾತ್ರ ಗೊರಕೆ ಹೊಡೆಯುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: India v/s Sri Lanka: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯುವಕರ ಹುಚ್ಚಾಟ, ಕೊಹ್ಲಿ ಜೊತೆ ಸೆಲ್ಫಿ ತೆಗೆಯಲು ಹೋಗಿ ಜೈಲು ಪಾಲು!
ಶೋಯಬ್ ಅತೀ ತಾಳ್ಮೆ ಸಾನಿಯಾಗೆ ಇಷ್ಟ ಇಲ್ವಂತೆ!
ಇನ್ನು ಕಾರ್ಯಕ್ರಮದಲ್ಲಿ ಶೋಯೆಬ್ ಮಲಿಕ್ ಮತ್ತೊಂದು ಗುಣ ನನಗೆ ಇಷ್ಟ ಆಗುವುದಿಲ್ಲ ಅಂತ ಸಾನಿಯಾ ಮಿರ್ಜಾ ಹೇಳಿದರು. ಶೋಯಬ್ ಮಲಿಕ್ ಬಗ್ಗೆ ನೀವು ಇಷ್ಟಪಡದ ಸಂಗತಿಗಳು ಯಾವುವು ಎಂದು ಕಾರ್ಯಕ್ರಮದ ನಿರೂಪಕರು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಸಾನಿಯಾ ಮಿರ್ಜಾ, ಶೋಯಬ್ ತುಂಬಾ ತಾಳ್ಮೆಯ ಮನುಷ್ಯ, ಅವರ ಈ ಗುಣ ನನಗೆ ಇಷ್ಟ ಆಗುವುದಿಲ್ಲ ಎಂದು ಹೇಳಿದ್ರು.
ಬರುತ್ತಾ ಸಾನಿಯಾ ಮಿರ್ಜಾ ಬಯೋಪಿಕ್
ಇದೀಗ ಬಾಲಿವುಡ್ನಲ್ಲಿ ಕ್ರೀಡಾ ಲೋಕದ ಖ್ಯಾತನಾಮರ ಬಯೋಪಿಕ್ಗಳು ತೆರೆಗೆ ಬರುತ್ತಿವೆ. ಈ ಪೈಕಿ ಭಾರತದ ಟೆನಿಸ್ ಲೋಕದ ಸೆನ್ಸೇಷನ್, ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಜೀವನ ಚರಿತ್ರೆಯೂ ಸಿನಿಮಾ ಆಗುತ್ತೆ ಎನ್ನುವು ಮಾತು ಈ ಹಿಂದಿನಿಂದಲೂ ಕೇಳಿ ಬರುತ್ತಲೇ ಇವೆ. ಇದೀಗ ಈ ಬಗ್ಗೆಯೂ ಸಾನಿಯಾ ಮಿರ್ಜಾ ಮಾತನಾಡಿದ್ದಾರೆ.
ಕೋವಿಡ್ನಿಂದಾಗಿ ಪ್ರಕ್ರಿಯೆ ನಿಧಾನವಾಗುತ್ತಿದೆ!
ಮತ್ತೊಂದೆಡೆ ನಿರ್ಮಾಪಕರೊಬ್ಬರು ಸಾನಿಯಾ ಹಾಗೂ ಶೋಯೆಬ್ರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ನಾವು ಕೆಲವು ಜನರೊಂದಿಗೆ ಸಂಪರ್ಕದಲ್ಲಿದ್ದೇವೆ. ಕೋವಿಡ್ನಿಂದಾಗಿ, ಎಲ್ಲಾ ಪ್ರಕ್ರಿಯೆಗಳು ಸ್ವಲ್ಪ ನಿಧಾನವಾಗಿರುತ್ತವೆ ಆದರೆ ಇದು ಖಂಡಿತವಾಗಿಯೂ ಪ್ರಕ್ರಿಯೆಯಲ್ಲಿದೆ ಅಂತ ಸಾನಿಯಾ ಹೇಳಿದ್ದಾರೆ.
ಇದನ್ನೂ ಓದಿ: Inspire Story: ಕೃತಕ ಕಾಲಿನಿಂದಲೇ Everest ಹತ್ತಿದ ಗಟ್ಟಿಗಿತ್ತಿ! ಈ ಸಾಧಕಿಗೊಂದು ಸಲಾಂ
OTTಯಲ್ಲಿ ‘ಮಿರ್ಜಾ-ಮಲಿಕ್ ಶೋ’
ಇನ್ನು ಉರ್ದುಫ್ಲಿಕ್ಸ್, ಪಾಕಿಸ್ತಾನಿ OTT ಪೂರೈಕೆದಾರರು ತಮ್ಮನ್ನು ಸಂಪರ್ಕಿಸಿದ್ದಾರೆ. ಅವರು ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಅವರ ಸ್ವಂತ ಕಾರ್ಯಕ್ರಮ ‘ಮಿರ್ಜಾ-ಮಲಿಕ್ ಶೋ’ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ