• Home
  • »
  • News
  • »
  • sports
  • »
  • Sania Mirza-Shoaib Malik: ಸಾನಿಯಾ-ಶೋಯೆಬ್ ವಿಚ್ಛೇದನ ಆಗಿದ್ಯಂತೆ, ಆ ಒಂದು ಕಾರಣಕ್ಕೆ ಇನ್ನೂ ಸುಮ್ಮನಿದ್ದಾರಂತೆ!

Sania Mirza-Shoaib Malik: ಸಾನಿಯಾ-ಶೋಯೆಬ್ ವಿಚ್ಛೇದನ ಆಗಿದ್ಯಂತೆ, ಆ ಒಂದು ಕಾರಣಕ್ಕೆ ಇನ್ನೂ ಸುಮ್ಮನಿದ್ದಾರಂತೆ!

ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ ವಿಚ್ಛೇದನ ವದಂತಿ!

ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ ವಿಚ್ಛೇದನ ವದಂತಿ!

ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲ್ಲಿಕ್ ನಡುವೆ ವಿಚ್ಛೇದನ ನಡೆದಿರುವುದು ಸತ್ಯ ಅಂತ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ ಈ ಬಗ್ಗೆ ದಂಪತಿ ಯಾಕೆ ಮಾತನಾಡುತ್ತಿಲ್ಲ ಎನ್ನುವುದಕ್ಕೂ ಪಾಕ್ ಮಾಧ್ಯಮಗಳು ಕಾರಣ ನೀಡಿವೆ!

  • Share this:

ಪಾಕಿಸ್ತಾನ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ (Indian tennis star Sania Mirza) ಮತ್ತು ಪಾಕಿಸ್ತಾನಿ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ (Shoaib Malik) ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಎಂಬ ವದಂತಿ (Rumors) ದಿನ ದಿನಕ್ಕೂ ಜಾಸ್ತಿಯಾಗುತ್ತಿದೆ. ಸಾನಿಯಾ, ಶೋಯೆಬ್ ವೈವಾಹಿಕ ಜೀವನದ ಬಗ್ಗೆ, ಮಾಡೆಲ್ (Model) ಒಬ್ಬಳ ಜೊತೆ ಶೋಯೆಬ್ ಸಂಬಂಧದ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳು (Pakistani media) ದಿನಕ್ಕೊಂದು ಸುದ್ದಿ ಬರೆಯುತ್ತಿವೆ. ಇದೀಗ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲ್ಲಿಕ್ ನಡುವೆ ವಿಚ್ಛೇದನ (Divocre) ಆಗಿರುವುದು ನಿಜ, ಆದರೆ ಅವರಿಬ್ಬರ ಮಧ್ಯೆ ಕಾನೂನು ತೊಡಕುಗಳು ಇದ್ದು, ಅದನ್ನು ಪರಿಹರಿಸಿದ ನಂತರ ಅಧಿಕೃತ ವಿಚ್ಛೇದನವನ್ನು ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿದೆ.


ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲ್ಲಿಕ್ ವಿಚ್ಛೇದನ ಪಕ್ಕಾ


ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲ್ಲಿಕ್ ನಡುವೆ ವಿಚ್ಛೇದನ ನಡೆದಿರುವುದು ಸತ್ಯ ಅಂತ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡುತ್ತಿವೆ. ಕಾನೂನು ತೊಡಕುಗಳೊಂದಿಗೆ ಸಹಿ ಹಾಕಲಾದ ಒಪ್ಪಂದಗಳಿಂದಾಗಿ ದಂಪತಿಗಳು ಈ ಬಗ್ಗೆ ಅಧಿಕೃತವಾಗಿ ತಿಳಿಸಿಲ್ಲ ಅಂತ ಪಾಕಿಸ್ತಾನ ಮೂಲದ ಜಿಯೋ ನ್ಯೂಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.


2010ರಲ್ಲಿ ಹಸಮಣೆ ಏರಿದ್ದ ಕ್ರೀಡಾ ತಾರೆಗಳು


ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಏಪ್ರಿಲ್ 12, 2010 ರಂದು ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದರು. 2018 ರಲ್ಲಿ ಸಾನಿಯಾ ತಮ್ಮ ಪುತ್ರ ಇಝಾನ್ ಮಿರ್ಜಾ ಮಲಿಕ್‌ಗೆ ಜನ್ಮ ನೀಡಿದ್ರು.


ಈಗ ಯಾವುದೂ ಮೊದಲಿನಂತೆ ಇಲ್ಲ!


ಇತ್ತೀಚೆಗೆ, ದಂಪತಿಗಳ ವೈವಾಹಿಕ ಸಂಬಂಧ ಮೊದಲಿನಂತೆ ಇಲ್ಲ ಎನ್ನಲಾಗಿದೆ ದಂಪತಿಗಳು ಬೇರ್ಪಡಲು ಯೋಜಿಸುತ್ತಿದ್ದಾರೆ ಎಂಬ ರೂಮರ್ಸ್ ಹಬ್ಬಿದೆ. ಜಿಯೋ ನ್ಯೂಸ್ ವರದಿಯ ಪ್ರಕಾರ, ಸಾನಿಯಾ ಮತ್ತು ಶೋಯೆಬ್ ತಮ್ಮ ಮಗ ಇಜಾನ್ ಮಿರ್ಜಾ ಮಲಿಕ್ ಅನ್ನು ಸಹ-ಪೋಷಕರಾಗಲು ನಿರ್ಧರಿಸಿದ್ದಾರೆ.


ದಂಪತಿ ಮಧ್ಯೆ ಬಂದ ಮಾಯಾಂಗಿನಿ ಮಾಡೆಲ್!


ಶೋಯೆಬ್ ಮಲಿಕ್ ಮಾಡಿರುವ ಫೋಟೋ ಶೂಟ್ ಇದಕ್ಕೆ ಕಾರಣ ಎನ್ನಲಾಗಿದೆ. ಈ ಫೋಟೋ ಶೂಟ್‌ನಲ್ಲಿ ಶೋಯೆಬ್ ಒಬ್ಬ ಮಾಡೆಲ್ ಕಮ್ ನಟಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಾಡೆಲ್ ನ ಮೋಹಕ್ಕೆ ಬಿದ್ದ ಶೋಯೆಬ್ ಮಲಿಕ್ ಸಾನಿಯಾ ಕಡೆ ಗಮನ ಹರಿಸುವುದನ್ನು ಬಿಟ್ಟಿದ್ದಾರೆ. ಕೆಲವು ತಿಂಗಳ ಹಿಂದೆ ಆ ಮಾಡೆಲ್ ಜೊತೆ ಶೋಯೆಬ್ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಈ ಫೋಟೋದಲ್ಲಿರುವ ಮಹಿಳೆ ಪಾಕಿಸ್ತಾನಿ ನಟಿ ಮತ್ತು ಯೂಟ್ಯೂಬರ್ ಆಯೇಶಾ ಒಮರ್. ಈ ನಟಿಯೊಂದಿಗೆ ಶೋಯೆಬ್‌ನ ನಿಕಟತೆಯ ಕಾರಣದಿಂದ ಸಾನಿಯಾ ಅವರಿಂದ ದೂರವಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.


ಇದನ್ನೂ ಓದಿ: Sania Mirza-Shoaib Malik: ಸ್ಟಾರ್ ಕ್ರಿಡಾಪಟುಗಳ ಬಾಳಲ್ಲಿ ಬಿರುಗಾಳಿ? ದೂರಾಗ್ತಿದ್ದಾರಾ ಸಾನಿಯಾ-ಶೋಯೆಬ್ ಮಲ್ಲಿಕ್?


‘ಮಿರ್ಜಾ ಮಲಿಕ್ ಶೋ’ ಪ್ರಚಾರಕ್ಕಾಗಿ ಡಿವೋರ್ಸ್​ ನಾಟಕ?


ಹೀಗೊಂದು ಮಾತು ಇದೀಗ ಕೇಳಿ ಬರುತ್ತಿದೆ. ಈ ಜೋಡಿಯ ಹೊಸ ಶೋ ಪಾಕಿಸ್ತಾನದಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಹೆಸರು 'ಮಿರ್ಜಾ ಮಲಿಕ್ ಶೋ' ಆಗಿದ್ದು, ಇದರಲ್ಲಿ ದಂಪತಿಗಳಿಬ್ಬರು ಕಾಣಿಸಿಕೊಳ್ಳಲಿದ್ದಾರೆ. ಈ ಶೋ ಪಾಕಿಸ್ತಾನದ ಉರ್ದುಫ್ಲಿಕ್ಸ್‌ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್​ನಲ್ಲಿ ಪ್ರಸಾರವಾಗಲಿದೆ. ಈ ಶೋ ಬಗ್ಗೆ ಸುದ್ದಿ ಹರಿದಾಡಲಾರಂಭಿಸಿದ ನಂತರ ಅಭಿಮಾನಿಗಳು ದಂಪತಿಗಳಿಬ್ಬರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಈ ಕಾರ್ಯಕ್ರಮದ ಟಿಆರ್‌ಪಿ ಹೆಚ್ಚಿಸುವ ಸಲುವಾಗಿ ಉದ್ದೇಶಪೂರ್ವಕವಾಗಿಯೇ ಈ ದಂಪತಿಗಳು ವಿಚ್ಛೇದನದ ನಾಟಕವನ್ನಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

Published by:Annappa Achari
First published: