• Home
  • »
  • News
  • »
  • sports
  • »
  • Sania-Malik: ಸಾನಿಯಾ-ಶೋಯೆಬ್ ಡಿವೋರ್ಸ್​ ಕೇಸ್​ಗೆ ಬಿಗ್​ ಟ್ವಿಸ್ಟ್​! ಟಿವಿ ಶೋಗಾಗಿ ನಾಟಕವಾಡಿದ್ರಾ ಸ್ಟಾರ್​ ಜೋಡಿ?

Sania-Malik: ಸಾನಿಯಾ-ಶೋಯೆಬ್ ಡಿವೋರ್ಸ್​ ಕೇಸ್​ಗೆ ಬಿಗ್​ ಟ್ವಿಸ್ಟ್​! ಟಿವಿ ಶೋಗಾಗಿ ನಾಟಕವಾಡಿದ್ರಾ ಸ್ಟಾರ್​ ಜೋಡಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Sania-Malik: ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯೆಬ್ ಮಲಿಕ್ (Shoaib Malik) ಅವರು ಶೀಘ್ರದಲ್ಲೇ ಉರ್ದು ಫ್ಲಿಕ್ಸ್‌ನಲ್ಲಿ ರಿಯಾಲಿಟಿ ಶೋ (Reality Show) ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ.

  • Share this:

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರೂ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಕಾನೂನುಬದ್ಧವಾಗಿ ಬೇರ್ಪಡುತ್ತಿದ್ದಾರೆ ಎಂಬ ವರದಿಗಳ ನಡುವೆ, ಸಾನಿಯಾ ಮಿರ್ಜಾ (Sania Mirzaಮತ್ತು ಶೋಯೆಬ್ ಮಲಿಕ್ (Shoaib Malik) ಅವರು ಶೀಘ್ರದಲ್ಲೇ ಉರ್ದು ಫ್ಲಿಕ್ಸ್‌ನಲ್ಲಿ ರಿಯಾಲಿಟಿ ಶೋ (Reality Show) ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. ಇದು ಅನೇಕ ಅಭಿಮಾನಿಗಳನ್ನು ಸಖತ್‌ ಕನ್​ಫ್ಯೂಸ್‌ ಮಾಡಿದೆ. ಹೌದು, ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಅವರ ಪತಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಹೊಸ ರಿಯಾಲಿಟಿ ಶೋನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಸ್ಟಾರ್‌ ದಂಪತಿ ಶೋ ನಲ್ಲಿ ಕಾಣಿಸಿಕೊಳ್ಳುವುದರಲ್ಲಿ ಆಶ್ಚರ್ಯ ಏನೂ ಇಲ್ಲವಾದರೂ ಈ ಪ್ರಕಟಣೆ ಅನೇಕ ಅಭಿಮಾನಿಗಳನ್ನು ಗೊಂದಲಗೊಳಿಸಿದೆ.


ಉರ್ದು ಫ್ಲಿಕ್ಸ್‌ ನಲ್ಲಿ ದಿ ಮಿರ್ಜಾ ಮಲಿಕ್‌ ಶೋ!:


ಇಷ್ಟಕ್ಕೆಲ್ಲ ಕಾರಣ ಕಳೆದ ವಾರವೆಲ್ಲಾ ಇಬ್ಬರೂ ಬೇರೆಯಾಗುತ್ತಾರೆ ಮತ್ತು ಅಂತಿಮವಾಗಿ ಡೈವೋರ್ಸ್‌ ಹಾದಿ ಹಿಡಿದಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿತ್ತು. ಈ ಬಗ್ಗೆ ಸಾನಿಯಾ ಮತ್ತು ಶೋಯೆಬ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಅಭಿಮಾನಿಗಳು ವರದಿಗಳು ಸುಳ್ಳೇ ಅಥವಾ ಇದು ಪ್ರಚಾರದ ಸ್ಟಂಟಾ ಎಂದು ಆಶ್ಚರ್ಯ ಪಡುತ್ತಿದ್ದಾರೆ. ಶನಿವಾರ ರಾತ್ರಿ OTT ಪ್ಲಾಟ್‌ಫಾರ್ಮ್ ಉರ್ದು ಫ್ಲಿಕ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ಸಾನಿಯಾ ಮತ್ತು ಶೋಯೆಬ್ ಮಲಿಕ್ ದಿ ಮಿರ್ಜಾ ಮಲಿಕ್ ಶೋನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಘೋಷಿಸಿದೆ.


ಸ್ಟಾರ್ ಜೋಡಿಗಳನ್ನು ಒಳಗೊಂಡ ಕಾರ್ಯಕ್ರಮದ ಪೋಸ್ಟರ್ ಅನ್ನು ಹಂಚಿಕೊಂಡು ಪೋಸ್ಟ್‌ ನಲ್ಲಿ, "ಮಿರ್ಜಾ ಮಲಿಕ್ ಶೋ‘‘ ಅತಿ ಶೀಘ್ರದಲ್ಲಿ ಉರ್ದು ಫ್ಲಿಕ್ಸ್‌ನಲ್ಲಿ ಮಾತ್ರ" ಎಂದು ಬರೆಯಲಾಗಿದೆ. ಪೋಸ್ಟರ್‌ನಲ್ಲಿ ಸಾನಿಯಾ ಮತ್ತು ಶೋಯೆಬ್ ತನ್ನ ಭುಜದ ಮೇಲೆ ಕೈಯಿಟ್ಟು ಹಸಿರು ಗೋಡೆಯ ಮುಂದೆ ನಿಂತಿರುವುದನ್ನು ನೋಡಬಹುದು. ಒಂದು ಕಿಟಕಿಯು ಹಿನ್ನೆಲೆಯಲ್ಲಿ ಬುರ್ಜ್ ಖಲೀಫಾವನ್ನು ತೋರಿಸಲಾಗಿದೆ.


ಇದನ್ನೂ ಓದಿ: Sania Mirza: ಸಾನಿಯಾ-ಶೋಯೆಬ್ ನಡುವಿನ ಬಿರುಕಿಗೆ ಆ ಮಾಡೆಲ್ ಕಾರಣಾನಾ? ವೈರಲ್ ಆಯ್ತು ನಟಿಯ ಜೊತೆಗಿನ ಫೋಟೋಶೂಟ್


ಪೋಸ್ಟ್​ರ್ ನೋಡಿ ಕನ್​ಫ್ಯೂಸ್‌ ಆದ ನೆಟ್ಟಿಗರು:


ಇನ್ನು, ಉರ್ದು ಫ್ಲಿಕ್ಸ್‌ ನ ಈ ಇನ್‌ ಸ್ಟಾಗ್ರಾಂ ಪೋಸ್ಟ್‌ ಗೆ ಸಾಕಷ್ಟು ಕಾಮೆಂಟ್‌ ಗಳು ಬಂದಿವೆ. ಕಳೆದ ಕೆಲವು ದಿನಗಳಿಂದ ಹರಡಿದ ವದಂತಿಗಳನ್ನು ಈ ಪ್ರಕಟಣೆಯು ನಿರಾಕರಿಸಿದೆ ಎಂದು ಅನೇಕ ಅಭಿಮಾನಿಗಳು ಭಾವಿಸಿದ್ದಾರೆ. ದಂಪತಿಗಳು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದೂ ಹೇಳಿದ್ದಾರೆ. ಒಬ್ಬ ಅಭಿಮಾನಿ ‘ಇದನ್ನು ನೋಡಿ ತುಂಬಾ ಸಂತೋಷವಾಯಿತು. ಒಟ್ಟಿಗೆ ಇರಿ‘ ಎಂದು ಬರೆದಿದ್ದಾರೆ.


ಸಾನಿಯಾ-ಶೋಯೆಬ್ ಜೋಡಿ


ಮತ್ತೊಬ್ಬರು, ‘ಒಬ್ಬರನ್ನೊಬ್ಬರು ಕ್ಷಮಿಸಿ ಒಬ್ಬರಿಗೊಬ್ಬರು ಇರಿ, ನೀವಿಬ್ಬರೂ ಒಟ್ಟಿಗೆ ಚೆನ್ನಾಗಿ ಕಾಣುತ್ತೀರಿ. ಶೋಯಬ್ ಅವರನ್ನು ಬೇರೆಯವರೊಂದಿಗೆ ನೋಡಲು ಸಾಧ್ಯವಿಲ್ಲ. ಸಾನಿಯಾ ಅವರಿಗೆ ಇದು ಪರಿಪೂರ್ಣವಾಗಿದೆ‘ ಎಂದಿದ್ದಾರೆ. ಅಲ್ಲದೇ ಇನ್ನೊಬ್ಬರು, ‘ಬೇರ್ಪಡಿಕೆ ವದಂತಿಗಳು ಇದಕ್ಕೆ ಪ್ರಚಾರದ ಸಾಹಸವೇ? ಸಾನಿಯಾ ಹಾಗೆ ಮಾಡುತ್ತಾರೆ ಅಂತ ಅಲ್ಲ‘ ಎಂದರೆ, ಬಹುಶಃ ಅವರ ಮದುವೆಯ ಸಮಸ್ಯೆಗಳ ಮೊದಲು ಈ ಕಾರ್ಯಕ್ರಮವನ್ನು ಚಿತ್ರೀಕರಿಸಲಾಗಿದೆ. ಅದು ಇನ್ನೂ ಮುಂದುವರಿಯುತ್ತದೆಯೇ? ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಏನನ್ನೂ ಹಂಚಿಕೊಂಡಿಲ್ಲ ಎಂದು ಹೇಳಿದ್ದಾರೆ.


ತಮ್ಮ ಖಾತೆಯಲ್ಲಿ ಫೋಸ್ಟರ್​ ಹಂಚಿಕೊಳ್ಳದ ಜೋಡಿ:


ಈ ಮಧ್ಯೆ, ಸಾನಿಯಾ ಅಥವಾ ಶೋಯೆಬ್ ತಮ್ಮ ಇನ್‌ ಸ್ಟಾಗ್ರಾಂ ನಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಳ್ಳದ ಕಾರಣ ಸಾಕಷ್ಟು ಜನರು ಇನ್ನೂ ಗೊಂದಲದಲ್ಲಿಯೇ ಇದ್ದಾರೆ. ಇನ್ನು, ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್‌ 2010 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2018 ರಲ್ಲಿ ತಮ್ಮ ಮಗ ಇಜಾನ್ ಅವರನ್ನು ಸ್ವಾಗತಿಸಿರುವ ಈ ದಂಪತಿ ಸದ್ಯ ದುಬೈ ನಲ್ಲಿ ನೆಲೆಸಿದ್ದಾರೆ. ಒಂದು ವಾರದ ಹಿಂದೆ, ಪಾಕಿಸ್ತಾನಿ ಮಾಧ್ಯಮಗಳಲ್ಲಿ ಸಾನಿಯಾ ಹಾಗೂ ಶೋಯೆಬ್‌ ಇಬ್ಬರೂ ತಮ್ಮ ಮದುವೆಯ ವಿಚ್ಛೇಧನಕ್ಕೆ ಬಂದಿದ್ದಾರೆ. ಕಾನೂನು ಬದ್ಧವಾಗಿ ಬೇರೆಯಾಗಲಿದ್ದಾರೆ ಎಂದು ಹೇಳಿವೆ. ಕೆಲವು ವರದಿಗಳು ಶೋಯೆಬ್‌ಗೆ ಪಾಕಿಸ್ತಾನಿ ಮಾಡೆಲ್ ಆಯೇಷಾ ಒಮರ್‌ ಜೊತೆ ಸಂಬಂಧವಿದೆ ಎಂಬುದಾಗಿಯೂ ವರದಿಗಳಾಗಿದ್ದವು. ಆದ್ರೆ ಈ ವಿಚಾರದಲ್ಲಿ ದಂಪತಿ ಇಲ್ಲಿಯವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

Published by:shrikrishna bhat
First published: