Tokyo 2020: ಮಹಿಳಾ ಡಬಲ್ಸ್‌ನಲ್ಲಿ ಉಕ್ರೇನ್‌ನ ಅವಳಿಗಳನ್ನು ಎದುರಿಸಲಿರುವ ಸಾನಿಯಾ-ಅಂಕಿತಾ ಜೋಡಿ!

34 ರ ಹರೆಯದ ಸಾನಿಯಾರಿಗೆ ಇದು ನಾಲ್ಕನೇ ಒಲಿಂಪಿಕ್ಸ್ ಆಗಿದ್ದು ತಮ್ಮ ಹಳೆಯ ಅದೇ ಕ್ರೀಡಾ ಉತ್ಸಾಹ, ಸ್ಫೂರ್ತಿಯೊಂದಿಗೆ ಕಣಕ್ಕಿಳಿದಿದ್ದಾರೆ.

Sania mirza

Sania mirza

  • Share this:

ಟೋಕಿಯೋ 2020 ರ ಒಲಿಂಪಿಕ್ಸ್ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಅಂಕಿತಾ ರೈನಾ ಉಕ್ರೇನ್‌ನ ನಾಡಿಯಾ ಕಿಚೆನೋಕ್ ಹಾಗೂ ಲೌಡ್‌ಮಿಲಾ ಕಿಚೆನೋಕ್ ಅವರನ್ನು ಆರಂಭಿಕ ಸುತ್ತಿನಲ್ಲಿ ಎದುರಿಸಲಿದ್ದಾರೆ. ಟೋಕಿಯೋ 2020 ರ ಕ್ರೀಡಾಕೂಟದಲ್ಲಿ ಕಾಣಿಸಿಕೊಳ್ಳುವ ಮೂಲಕ ಭಾರತವನ್ನು ನಾಲ್ಕನೇ ಬಾರಿ ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸುವ ಭಾರತೀಯ ಮೊದಲನೇ ಟೆನಿಸ್ ಆಟಗಾರ್ತಿ ಎಂಬ ಸಾಧನೆಯನ್ನು ಸಾನಿಯಾ ಮಿರ್ಜಾ ಮಾಡಲಿದ್ದಾರೆ.


ಸಾನಿಯಾ ತಮ್ಮ ಹೆರಿಗೆಯ ರಜೆಯ ನಂತರ ಹೊಬಾರ್ಟ್ ಓಪನ್ ಅನ್ನು ನಾಡಿಯಾ ಅವರೊಂದಿಗೆ ಜೊತೆಯಾಗಿ ಆಡಿ ಗೆದ್ದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. 34 ರ ಹರೆಯದ ಸಾನಿಯಾರಿಗೆ ಇದು ನಾಲ್ಕನೇ ಒಲಿಂಪಿಕ್ಸ್ ಆಗಿದ್ದು ತಮ್ಮ ಹಳೆಯ ಅದೇ ಕ್ರೀಡಾ ಉತ್ಸಾಹ, ಸ್ಫೂರ್ತಿಯೊಂದಿಗೆ ಕಣಕ್ಕಿಳಿದಿದ್ದಾರೆ. ಸಾನಿಯಾ ಅವರು ಮೂರು ಒಲಿಂಪಿಕ್ಸ್‌ಗಳನ್ನು ಬೀಜಿಂಗ್, ಲಂಡನ್ ಹಾಗೂ ರಿಯೋದಲ್ಲಿ ಆಡಿದ್ದು ಸುನೀತಾ ರಾವ್, ರಶ್ಮಿ ಚಕ್ರವರ್ತಿ ಮತ್ತು ಪ್ರಾರ್ಥನಾ ತೋಂಬ್ರೆ ಸಾನಿಯಾರಿಗೆ ಜೋಡಿಗಳಾಗಿ ಪಂದ್ಯಗಳನ್ನಾಡಿದ್ದರು.


ಭಾರತದ ಟೆನಿಸ್ ಆಟಗಾರ ಸುಮಿತ್ ನಾಗಲ್ ಉಜ್ಜೇಕಿಸ್ತಾನದ ಡೆನಿಸ್ ಇಸ್ಟೊಮಿನ್ ಅವರನ್ನು ಪುರುಷರ ಸಿಂಗಲ್ಸ್‌ನಲ್ಲಿ ಮುಖಾಮುಖಿಯಾಗಿ ಎದುರಿಸಲಿದ್ದಾರೆ. ಕೆಳ-ಶ್ರೇಯಾಂಕದ ಉಜ್ಬೆಕ್ ವಿರುದ್ಧ ಡ್ರಾದಲ್ಲಿ ದೊಡ್ಡ ಪ್ರಮಾಣದ ವಿದ್‌ಡ್ರಾಲ್‌ಗಳನ್ನು ಪಡೆದ ನಾಗಲ್ ಕಳೆದ ವಾರವಷ್ಟೇ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದ್ದರು.


23 ರ ಹರೆಯದ ನಾಗಲ್ ಮೊದಲ ಸುತ್ತಿನಲ್ಲಿ ಗೆಲುವನ್ನು ಪಡೆದುಕೊಂಡಲ್ಲಿ, ಆರಂಭಿಕ ಸುತ್ತಿನಲ್ಲಿ ಅಲೆಕ್ಸಾಂಡರ್ ಬಬ್ಲಿಕ್ ಅವರನ್ನು ಎದುರಿಸಲಿರುವ ರಷ್ಯಾದ ಡೇನಿಲ್ ಮಡ್ವೆಡೆವ್ ಅವರನ್ನು ಪಂದ್ಯದಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಮಾಹಿತಿಗಳ ಪ್ರಕಾರ ನಾಗಲ್ ಅವರ ಒಲಿಂಪಿಕ್ಸ್ ಪ್ರವೇಶವು ಕೊಂಚ ನಿರಾಶದಾಯಕವಾಗಿರಬಹುದು ಎಂದಿದೆ ಏಕೆಂದರೆ ಆಸ್ಟ್ರೇಲಿಯನ್ ಓಪನ್ ಸೇರಿದಂತೆ ಸರ್ಕ್ಯೂಟ್‌ನಲ್ಲಿ ಏಳು ಮೊದಲ ಸುತ್ತಿನ ಸೋಲನ್ನು ನಾಗಲ್ ಅನುಭವಿಸಿದ್ದಾರೆ. ಇನ್ನು ಆರು ಚಾಲೆಂಜರ್ ಈವೆಂಟ್‌ಗಳಲ್ಲಿ ಮೂರು ಬಾರಿ ಮಾತ್ರವೇ ಕ್ವಾರ್ಟರ್‌ ಫೈನಲ್ ಅನ್ನು ಪ್ರವೇಶಿಸಿದ್ದಾರೆ. ಇನ್ನು ನಾಗಲ್‌ಗಿರುವ ಅವಕಾಶವೆಂದರೆ ಮಾರ್ಚ್‌ನಲ್ಲಿ ಬ್ಯೂನಸ್‌ನಲ್ಲಿ ನಡೆಯುವ ಎಟಿಪಿ 250 ಈವೆಂಟ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತಮ ಪ್ರದರ್ಶನವನ್ನು ನೀಡುವುದಾಗಿದೆ.


ಇದನ್ನು ಓದಿ: ಆಗಸ್ಟ್​ 10ರೊಳಗೆ SSLC ಫಲಿತಾಂಶ; ಯಶೋಗಾಥೆ ಪುಸ್ತಕ ಬಿಡುಗಡೆಗೆ ಶಿಕ್ಷಣ ಇಲಾಖೆ ಸಜ್ಜು

137 ನೇ ಶ್ರೇಯಾಂಕದಲ್ಲಿದ್ದ ನಾಗಲ್ ಅವರು 160 ನೇ ಶ್ರೇಯಾಂಕಕ್ಕೆ ಕುಸಿದಿರುವುದು ತಮ್ಮ ಕಳಪೆ ಪ್ರದರ್ಶನಗಳಿಂದಾಗಿ ಎಂಬುದು ಕ್ರೀಡಾ ಮೂಲಗಳಿಂದ ವರದಿಯಾದ ಮಾಹಿತಿಯಾಗಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಸಾನಿಯಾ ಮಿರ್ಜಾ ಹಾಗೂ ಅಂಕಿತಾ ರೈನಾ ಅವರನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವಿಟರ್‌ನಲ್ಲಿ ಅಭಿನಂದಿಸಿದ್ದಾರೆ.


2020 ರ ಟೋಕಿಯೋ ಒಲಿಂಪಿಕ್ಸ್‌ನ ಟೆನಿಸ್ ಮಹಿಳೆಯರ ಡಬಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಸಾನಿಯಾ ಮಿರ್ಜಾ ಹಾಗೂ ಅಂಕಿತಾ ರೈನಾ ಅವರಿಗೆ ಅಭಿನಂದನೆ. ಇದು ಸಾನಿಯಾ ಪಾಲಿಗೆ ನಾಲ್ಕನೇ ಒಲಿಂಪಿಕ್ಸ್ ಕ್ರೀಡಾಕೂಟವಾಗಿದ್ದು ಅಂಕಿತಾರಿಗೆ ಚೊಚ್ಚಲ ಒಲಿಂಪಿಕ್ಸ್ ಆಗಿದೆ. ಇಬ್ಬರಿಗೂ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
First published: