• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಬಾಡ್ಮಿಂಟನ್​ ಕೋರ್ಟ್​ನಿಂದ ಮದುವೆ ಮಂಟಪಕ್ಕೆ; ಡಿಸೆಂಬರ್​ನಲ್ಲಿ ಹಸೆಮಣೆ ಏರಲಿದ್ದಾರೆ ಈ ಕ್ರೀಡಾ ಜೋಡಿ

ಬಾಡ್ಮಿಂಟನ್​ ಕೋರ್ಟ್​ನಿಂದ ಮದುವೆ ಮಂಟಪಕ್ಕೆ; ಡಿಸೆಂಬರ್​ನಲ್ಲಿ ಹಸೆಮಣೆ ಏರಲಿದ್ದಾರೆ ಈ ಕ್ರೀಡಾ ಜೋಡಿ

ಸೈನಾ ನೆಹ್ವಾಲ್​- ಪಾರುಪಳ್ಳಿ ಕಶ್ಯಪ್​

ಸೈನಾ ನೆಹ್ವಾಲ್​- ಪಾರುಪಳ್ಳಿ ಕಶ್ಯಪ್​

ನಾವಿಬ್ಬರು ಬದುಕಿನ ದೊಡ್ಡ ಪಯಾಣಕ್ಕೆ ಮಂದಾಗಿದ್ದೇವೆ . ಒಟ್ಟಿಗೆ ತರಬೇತಿ ಪಡೆದಿದ್ದು, ಕ್ರೀಡಾ  ಜಗತ್ತಿನಲ್ಲಿ ಒಟ್ಟಿಗೆ ತೆವಳುತ್ತಾ ಹೆಜ್ಜೆ ಇಟ್ಟಿದ್ದೇವೆ. ಜೊತೆಯಲ್ಲಿಯೇ ಟೂರ್ನಮೆಂಟ್​ ಆಡಿದ್ದೇವೆ. ಈಗ ಸಪ್ತಪದಿ ತುಳಿಯಲು ಮುಂದಾಗಿದ್ದೇವೆ

  • News18
  • 5-MIN READ
  • Last Updated :
  • Share this:

ಹೈದ್ರಾಬಾದ್​ (ಡಿ.2): ಈಗ ಎಲ್ಲಿ ನೋಡಿದರೂ ಸೆಲೆಬ್ರಿಟಿಗಳ ಮದುವೆ ಸಂಭ್ರಮ. ತಾರಾ ಜೋಡಿಗಳು ಅದ್ದೂರಿ ಮದುವೆ ಮಾಡಿಕೊಳ್ಳುವ ಮೂಲಕ ಅವರ ಅಭಿಮಾನಿಗಳ ಕಣ್ಣಿಗೆ ರಸದೌತಣ ನೀಡುತ್ತಿದ್ದಾರೆ. ಈ ಸಾಲಿಗೆ ಈಗ ​ ಹೆಸರಾಂತ ಬಾಡ್ಮಿಂಟನ್​ ತಾರೆ ಹೆಸರು ಸೇರ್ಪಡೆಯಾಗಿದೆ. ಏಷ್ಯಾನ್​ ಗೇಮ್ಸ್​ನಲ್ಲಿ ಮಿಂಚಿ ದೇಶಕ್ಕೆ ಹೆಸರು ತಂದ ಸೈನಾನೆಹ್ವಾಲ್ ಈಗ​ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
 
View this post on Instagram
 

#MatchPoint And here's the other one! @nehwalsaina @parupallikashyap


A post shared by Saina HarvirSingh Nehwal_fp🏸 (@s.nehwal) on

ತಾವು ಪ್ರೀತಿಸುತ್ತಿದ್ದ ತಮ್ಮ ಸಹವರ್ತಿ ಕ್ರೀಡಾ ಪಟುವಾದ ಪಾರುಪಳ್ಳಿ ಕಶ್ಯಪ್​ ಜೊತೆ ಸೈನಾ ಮದುವೆಯಾಗಲಿದ್ದಾರೆ.


 

ಪಾರುಪಳ್ಳಿ ಕಶ್ಯಪ್​ ಕೂಡ ಬಾಡ್ಮಿಂಟನ್​ ಪಟುವಾಗಿದ್ದು 2014ರ ಕಾಮನ್​ವೆಲ್ತ್​ ಗೇಮ್​ನಲ್ಲಿ ಚಿನ್ನವನ್ನು ಪಡೆದಿದ್ದರು. ಈ ಕ್ರೀಡಾ ಜೋಡಿ ಇದೇ ಡಿಸೆಂಬರ್​ 16ರಂದು ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ಸೈನಾ ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದ್ದು, ತಮ್ಮ ಆಪ್ತರಿಗೆ ವಿವಾಹ ಆಮಂತ್ರಣ ನೀಡುತ್ತಿದ್ದಾರೆ.ಇತ್ತೀಚೆಗಷ್ಟೆ ತಮ್ಮ ಸಂಬಂಧದ ಕುರಿತು ಮಾತನಾಡಿದ ಸೈನಾ “ 2007-08ರಿಂದ ನಾವಿಬ್ಬರು ಬದುಕಿನ ದೊಡ್ಡ ಪಯಾಣಕ್ಕೆ ಮಂದಾಗಿದ್ದೇವೆ .  ಒಟ್ಟಿಗೆ ತರಬೇತಿ ಪಡೆದಿದು, ಕ್ರೀಡಾ  ಜಗತ್ತಿನಲ್ಲಿ ಒಟ್ಟಿಗೆ ತೆವಳುತ್ತಾ ಹೆಜ್ಜೆ ಇಟ್ಟಿದ್ದೇವೆ. ಜೊತೆಯಲ್ಲಿಯೇ ಟೂರ್ನಮೆಂಟ್​ ಆಡಿದ್ದೇವೆ. ಇಬ್ಬರ ಮ್ಯಾಚ್​ಗಳ ಬಗ್ಗೆ ಹೆಚ್ಚಾಗಿ ಗಮನ ನೀಡುತ್ತಾ ಬಂದಿದ್ದೇವೆ ಎಂದು ತಮ್ಮ ಬಾಳಸಂಗಾತಿ ಬಗ್ಗೆ ಜಗತ್ತಿಗೆ ತಿಳಿಸಿದ್ದರು.

First published: