ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​​: ಕ್ವಾರ್ಟರ್ ಫೈನಲ್​​ನಲ್ಲಿ ಮುಗ್ಗರಿಸಿದ ಸೈನಾ ನೆಹ್ವಾಲ್

news18
Updated:August 3, 2018, 8:01 PM IST
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​​: ಕ್ವಾರ್ಟರ್ ಫೈನಲ್​​ನಲ್ಲಿ ಮುಗ್ಗರಿಸಿದ ಸೈನಾ ನೆಹ್ವಾಲ್
news18
Updated: August 3, 2018, 8:01 PM IST
ನ್ಯೂಸ್ 18 ಕನ್ನಡ

ನನ್​​ಜಿಂಗ್​ (ಆ. 03): ಚೀನಾದಲ್ಲಿ ನಡೆಯುತ್ತಿರುವ ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​​​ನಲ್ಲಿ ಭಾರತದ ಶ್ರೇಷ್ಠ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಹೋರಾಟ ಅಂತ್ಯವಾಗಿದೆ.

ಇಂದು ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್​​ನ ಕರೋಲಿನಾ ಮರಿನ್ ವಿರುದ್ಧ ಸೈನಾ ಪರಾಭವಗೊಂಡಿದ್ದಾರೆ. ಮೊದಲ ಸರ್ವ್​​​ನಿಂದ ಮರ್ಲಿನ್​​ರ ಎದುರು ನೀರಸ ಪ್ರದರ್ಶನ ತೋರಿದ ಸೈನಾ ಪ್ರಥಮ ಸುತ್ತಿನಲ್ಲಿ 21-6 ರಿಂದ ಹಿನ್ನಡೆ ಕಂಡರು. ಬಳಿಕ ಎರಡನೇ ಸೆಟ್​​​ನಲ್ಲಿ 21-11 ಸೆಟ್​​​ಗಳಿಂದ ಸೋಲು ಕಾಣಬೇಕಾಯಿತು.

ಈ ಮೂಲಕ ಕೇವಲ 31 ನಿಮಿಷಗಳಲ್ಲಿ ಮುಕ್ತಾಯಗೊಂಡ ಪಂದ್ಯದಲ್ಲಿ 21-6, 21-11 ನೇರ ಸೆಟ್​​ಗಳಿಂದ ಗೆದ್ದ ಕರೋಲಿನಾ ಮರಿನ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...