ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಶಿಪ್: ಸೈನಾ, ಶ್ರೀಕಾಂತ್ ಗೆಲುವಿನ ಶುಭಾರಂಭ

news18
Updated:July 31, 2018, 6:36 PM IST
ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಶಿಪ್: ಸೈನಾ, ಶ್ರೀಕಾಂತ್ ಗೆಲುವಿನ ಶುಭಾರಂಭ
news18
Updated: July 31, 2018, 6:36 PM IST
ನ್ಯೂಸ್ 18 ಕನ್ನಡ

ನಾನ್​​ಜಿಂಗ್​​ (ಜುಲೈ. 31): ಚೀನಾದಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್​ನಲ್ಲಿ ಭಾರತ ಅಗ್ರ ಶ್ರೇಯಾಂಕದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮೂರನೇ ಸುತ್ತಿಗೆ ಪ್ರವೇಶ ಪಡೆದು ಗೆಲುವಿನ ಶುಭಾರಂಭ ಮಾಡಿದ್ದಾರೆ.

ಟರ್ಕಿಯ ಅಲೈ ಡೆಮಿರ್ಬಾಗ್ ವಿರುದ್ಧ 21-17, 21-18 ಅಂತರದಲ್ಲಿ ಸೈನಾ ಗೆಲುವು ದಾಖಲಿಸಿದ್ದಾರೆ. ಸಾಕಷ್ಟು ರೋಚಕತೆಯಿಂದ ಕೂಡಿದ ಪಂದ್ಯದಲ್ಲಿ ಸೈನಾ ಗೆಲುವಿನ ಆರಂಭಮಾಡಿದ್ದಾರೆ.  2013ರ ವಿಶ್ವ ಚಾಂಪಿಯನ್ ಇಂಡೋನೇಶಿಯಾದ ರಚನಾಕ್ ಇಂಟನಾನ್ ಅವರನ್ನು ಸೈನಾ ಅವರು ಮುಂದಿನ ಸುತ್ತಿನಲ್ಲಿ ಎದುರಿಸಲಿದ್ದಾರೆ.

ಇನ್ನು ಪುರುಷರ ಸಿಂಗಲ್ಸ್​ನಲ್ಲಿ ಭಾರತದ ಶ್ರೀಕಾಂತ್ ಅವರು ಐರ್ಲೆಂಡ್​​ನ ನಾಟ್ ಗ್ಯುಯೆನ್ ವಿರುದ್ಧ 21-15, 21-16 ಅಂರತದಲ್ಲಿ ಗೆಲುವು ಕಂಡಿದ್ದಾರೆ. ಶ್ರೀಕಾಂತ್ ಅವರು ಮುಂದಿನ ಸುತ್ತಿನಲ್ಲಿ ಸ್ಪೇನ್​​ನ ಪಾಬ್ಲೊ ಅಬಿಯನ್​​​ ಅವರನ್ನು ಎದುರಿಸಲಿದ್ದಾರೆ.
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...