ಮುಂದಿನ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಹೆಚ್ಚು ಪದಕ ತಂದುಕೊಡಲು ಹೊಸ ಕೋರ್ ಗ್ರೂಪ್ ಅಂತಿಮಗೊಳಿಸಲಿರುವ  SAI    

TOPS ಕೋರ್ ಗುಂಪಿನ ಪಟ್ಟಿಯನ್ನು ಅಂತಿಮಗೊಳಿಸಿದ ನಂತರ, ಯೋಜನೆಯ ನಿಯಮಾವಳಿಯಂತೆ ಆಯ್ದ ಕ್ರೀಡಾಪಟುಗಳಿಗೆ ಎಲ್ಲಾ ಬೆಂಬಲ ನೀಡಲಾಗುವುದು ಎಂದು SAI ಹೇಳಿದೆ.

ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ ಸಭೆ.

ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ ಸಭೆ.

 • Share this:
  ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಇದೇ ರೀತಿ ಮುಂದಿನ ಒಲಿಂಪಿಕ್ಸ್‌ಗಾಗಿ ಇನ್ನೂ ಹೆಚ್ಚಿನ ಪದಕಗಳನ್ನು ಬಾಚಿಕೊಳ್ಳಲು ಹೊಸ ಕೋರ್‌ ಗ್ರೂಪ್‌ ಅನ್ನು SAI ರಚಿಸಲಿದೆ. ಮುಂದಿನ ಒಲಿಂಪಿಕ್ಸ್‌ ಸೈಕಲ್‌ಗಾಗಿ ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (TOPS) ನ ಹೊಸ ಕೋರ್ ಗ್ರೂಪ್ ಅನ್ನು ದೇಶದ ಗಣ್ಯ ಕ್ರೀಡಾಪಟುಗಳ ನಡುವೆ ರಚಿಸಲಾಗುವುದು ಎಂದು ಭಾರತದ ಕ್ರೀಡಾ ಪ್ರಾಧಿಕಾರ (SAI) ಬುಧವಾರ ಹೇಳಿದೆ. ಟೋಕಿಯೋ ಕ್ರೀಡಾಕೂಟದ ನಂತಗರ ಹಳೆಯ ತಂಡವನ್ನು ವಿಸರ್ಜಿಸಲಾಗಿದ್ದು, ಅಕ್ಟೋಬರ್‌ನಲ್ಲಿ ಹೊಸ ತಂಡ ರಚನೆಯಾಗಲಿದೆ ಎಂದು ತಿಳಿದುಬಂದಿದೆ. ಟೋಕಿಯೋ ಕ್ರೀಡಾಕೂಟದಲ್ಲಿ ಭಾರತವು ಈ ವರ್ಷ ಅಭೂತಪೂರ್ವ ಯಶಸ್ಸನ್ನು ಗಳಿಸಿದ್ದು, ಅಥ್ಲೆಟಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನ ಸೇರಿದಂತೆ 2 ಬೆಳ್ಳಿ ಹಾಗೂ 4 ಕಂಚು ಸೇರಿ ಏಳು ಪದಕಗಳನ್ನು ಗೆದ್ದಿದೆ. ಪ್ರಮುಖವಾಗಿ 2014ರಲ್ಲಿ ಸ್ಥಾಪಿಸಲಾದ TOPS ಅಡಿಯಲ್ಲಿ ಕ್ರೀಡಾಪಟುಗಳ ಧನಸಹಾಯ ಮತ್ತು ಬೆಂಬಲದಿಂದಾಗಿ ಈ ಯಶಸ್ಸು ದೊರೆತಿದೆ ಎಂದು ತಿಳಿದುಬಂದಿದೆ.

  ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳೊಂದಿಗೆ (NSFs) ಮುಂದಿನ ತಿಂಗಳು ನಡೆಯಲಿರುವ TOPS ಕೋರ್ ಗುಂಪಿನಲ್ಲಿರುವ ಕ್ರೀಡಾಪಟುಗಳ ಹೊಸ ಪಟ್ಟಿಯನ್ನು ಅಂತಿಮಗೊಳಿಸಲು ಚರ್ಚಿಸುತ್ತಿದೆ ಎಂದು SAI ಹೇಳಿದೆ. "ಮುಂದಿನ ಒಲಿಂಪಿಕ್ಸ್ ಸೈಕಲ್‌ಗೆ ಭಾರತದ ಗಣ್ಯ ಕ್ರೀಡಾಪಟುಗಳನ್ನು TOPSನ ಕೋರ್ ಗ್ರೂಪ್‌ನಲ್ಲಿ ಸೇರಿಸಿಕೊಳ್ಳುವ ಬಗ್ಗೆ SAI NSFಗಳೊಂದಿಗೆ ಚರ್ಚಿಸುತ್ತಿದೆ. ಅಕ್ಟೋಬರ್‌ನಲ್ಲಿ ನಿಗದಿಯಾಗಿರುವ ಸಭೆಯಲ್ಲಿ TOPS ಕೋರ್ ಗ್ರೂಪ್‌ನಲ್ಲಿರುವ ಹೊಸ ಕ್ರೀಡಾಪಟುಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು" ಎಂದೂ SAI ಹೇಳಿದೆ.

  "ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನ ಕೊನೆಯಲ್ಲಿ ವಿಸರ್ಜಿಸಿದ ಕೋರ್ ಗ್ರೂಪ್ ಪಟ್ಟಿಯನ್ನು ಮತ್ತೊಮ್ಮೆ ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳು ಮತ್ತು ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಶನ್‌ನ ಪ್ರತಿನಿಧಿಗಳು ಹೊಂದಿರುವ ಸಭೆಯಲ್ಲಿ ರಚಿಸಲಾಗುವುದು" ಎಂದೂ ಹೇಳಿದೆ.

  TOPS ಕೋರ್ ಗುಂಪಿನ ಪಟ್ಟಿಯನ್ನು ಅಂತಿಮಗೊಳಿಸಿದ ನಂತರ, ಯೋಜನೆಯ ನಿಯಮಾವಳಿಯಂತೆ ಆಯ್ದ ಕ್ರೀಡಾಪಟುಗಳಿಗೆ ಎಲ್ಲಾ ಬೆಂಬಲ ನೀಡಲಾಗುವುದು ಎಂದು SAI ಹೇಳಿದೆ.

  "ಟೋಕಿಯೋ 2020 ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ವೈಯಕ್ತಿಕ ಬೆಂಬಲ ವಿಸ್ತರಿಸುವಲ್ಲಿ TOPS ಪ್ರಮುಖ ಯೋಜನೆಯಾಗಿದೆ ಮತ್ತು ಮುಂದಿನ ಒಲಿಂಪಿಕ್ಸ್‌ ಸೈಕಲ್‌ನಲ್ಲೂ ಇದೇ ರೀತಿ ಕ್ರೀಡಾಪಟುಗಳನ್ನು ಬೆಂಬಲಿಸುತ್ತದೆ.

  TOPSನ ಅಭಿವೃದ್ಧಿ ಗುಂಪಿನಲ್ಲಿರುವ ಮತ್ತು ಒಲಿಂಪಿಕ್ಸ್ 2024 ಮತ್ತು 2028 ಗೆ ತರಬೇತಿ ಪಡೆಯುತ್ತಿರುವ ಕೆಲವು ಕ್ರೀಡಾಪಟುಗಳನ್ನು ಸಹ ಕೋರ್ ಗ್ರೂಪ್‌ನಲ್ಲಿ ಸೇರಿಸಲು ಪರಿಗಣಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

  ಭವಿಷ್ಯದ ಒಲಿಂಪಿಕ್ಸ್‌ಗಾಗಿ ಭರವಸೆಯ ಕ್ರೀಡಾಪಟುಗಳನ್ನು ರೂಪಿಸಲು ಕಳೆದ ವರ್ಷ TOPSನ ಅಭಿವೃದ್ಧಿ ಗುಂಪನ್ನು ಸೇರಿಸಲಾಯಿತು. ಮುಂದಿನ ಒಲಿಂಪಿಕ್ಸ್ 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿದೆ.

  ಇದನ್ನೂ ಓದಿ: IPL 2021- MI vs DC- ಅಕ್ಷರ್ ಪಟೇಲ್ ಸ್ಪಿನ್ ಗಾಳಕ್ಕೆ ಸಿಕ್ಕು ಮುಂಬೈ ತತ್ತರ

  2016ರ ಬ್ರೆಜಿಲ್‌ನ ರಿಯೋನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಒಂದು ಬೆಳ್ಳಿ ಹಾಗೂ ಒಂದು ಕಂಚು ಪದಕ ಪಡೆದಿದ್ದ ಭಾರತ ತಂಡ, 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕೊರೊನಾ ವೈರಸ್‌, ಲಾಕ್‌ಡೌನ್‌ ಮುಂತಾದ ಅಡೆ ತಡೆಗಳ ನಡುವೆಯೂ ಅತ್ಯುತ್ತಮ ಪ್ರದರ್ಶನ ನೀಡಿದೆ.
  First published: