ಸ್ಯಾಫ್ ಕಪ್: ಮಾಲ್ಡೀವ್ಸ್ ವಿರುದ್ಧ ಗೆದ್ದ ಭಾರತಕ್ಕೆ ಸೆಮಿಫೈನಲ್​ನಲ್ಲಿ ಪಾಕ್ ಮುಖಾಮುಖಿ


Updated:September 10, 2018, 1:18 PM IST
ಸ್ಯಾಫ್ ಕಪ್: ಮಾಲ್ಡೀವ್ಸ್ ವಿರುದ್ಧ ಗೆದ್ದ ಭಾರತಕ್ಕೆ ಸೆಮಿಫೈನಲ್​ನಲ್ಲಿ ಪಾಕ್ ಮುಖಾಮುಖಿ
ಭಾರತ ಫುಟ್ಬಾಲ್ ತಂಡ

Updated: September 10, 2018, 1:18 PM IST
- ನ್ಯೂಸ್18 ಕನ್ನಡ

ಢಾಕಾ(ಸೆ. 10): ದಕ್ಷಿಣ ಏಷ್ಯಾ ಫುಟ್ಬಾಲ್ ಒಕ್ಕೂಟಗಳ ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾ, ನೇಪಾಳ ಮತ್ತು ಮಾಲ್ಡೀವ್ಸ್ ತಂಡಗಳು ಸೆಮಿಫೈನಲ್ ತಲುಪಿವೆ. ನಿನ್ನೆ ನಡೆದ ಬಿ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಸತತ ಎರಡನೇ ಗೆಲುವು ಪಡೆಯಿತು. ಮಾಲ್ಡೀವ್ಸ್ ವಿರುದ್ಧ ಭಾರತ 2-0 ಗೋಲುಗಳಿಂದ ಸೋಲಿಸಿತು. ಭಾರತದ ಪರ 36 ಮತ್ತು 45ನೇ ನಿಮಿಷದಲ್ಲಿ ನಿಖಿಲ್ ಪೂಜಾರಿ ಮತ್ತು ಮನ್ವೀರ್ ಸಿಂಗ್ ಗೋಲು ಗಳಿಸಿದರು.

ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನೂ ಇಷ್ಟೇ ಗೋಲುಗಳ ಅಂತರದಿಂದ ಸೋಲಿಸಿತ್ತು. ಬಿ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಭಾರತ ಸೆಮಿಫೈನಲ್​ಗೆ ನೇರವಾಗಿ ಎಂಟ್ರಿಕೊಟ್ಟಿತು. ಮಾಲ್ಡೀವ್ಸ್ ಮತ್ತು ಶ್ರೀಲಂಕಾ ತಂಡಗಳು ತಲಾ ಒಂದು ಅಂಕದೊಂದಿಗೆ ಟೈ ಆದವು. ಅಂಕಗಳು, ಗೋಲ್ ವ್ಯತ್ಯಾಸ, ಪರಸ್ಪರ ಗೋಲು ಇತ್ಯಾದಿ ವಿಚಾರಗಳಲ್ಲೂ ಎರಡೂ ತಂಡಗಳು ಸಮಾನವಾಗಿದ್ದ ಹಿನ್ನೆಲೆಯಲ್ಲಿ ಟಾಸ್ ಮೂಲಕ ವಿನ್ನರ್ ಆಯ್ಕೆ ನಡೆಯಿತು. ಅದರಲ್ಲಿ ಮಾಲ್ಡೀವ್ಸ್​​ಗೆ ಸೆಮಿಸ್ ದಾರಿಯ ಅದೃಷ್ಟ ಖುಲಾಯಿಸಿತು.

ಇನ್ನು, ಎ ಗುಂಪಿನಲ್ಲಿ ಭೂತಾನ್ ತಂಡ ಸೊನ್ನೆ ಅಂಕದೊಂದಿಗೆ ತಳ ಸೇರಿತು. ಇನ್ನುಳಿದ ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭೂತಾನ್ ತಂಡಗಳು ತಲಾ 3 ಅಂಕ ಪಡೆದವು. ಅಧಿಕ ಗೋಲು ವ್ಯತ್ಯಾಸದ ಆಧಾರದ ಮೇಲೆ ನೇಪಾಳ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್ ತಲುಪಿದವು.

ಸೆ. 12, ಬುಧವಾರದಂದು ಸೆಮಿಫೈನಲ್ ನಡೆಯಲಿದೆ. ಮೊದಲ ಸೆಮಿಸ್​ನಲ್ಲಿ ನೇಪಾಳ ಮತ್ತು ಮಾಲ್ಡೀವ್ಸ್ ಮುಖಾಮುಖಿಯಾದರೆ, ಭಾರತ ಮತ್ತು ಪಾಕಿಸ್ತಾನ ನಡುವೆ ಎರಡನೇ ಸೆಮಿಫೈನಲ್ ನಡೆಯಲಿದೆ. ಸೆ. 15ರಂದು ಫೈನಲ್ ಪಂದ್ಯ ನಡೆಯಲಿದೆ.

ಸ್ಯಾಫ್ ಸುಜುಕಿ ಕಪ್ ಟೂರ್ನಿಯ ಹಾಲಿ ಚಾಂಪಿಯನ್ ಭಾರತ ತಂಡ ವಿಶ್ವ ಫುಟ್ಬಾಲ್ ಶ್ರೇಯಾಂಕದಲ್ಲಿ 96ನೇ ಸ್ಥಾನದಲ್ಲಿದೆ. ಟೂರ್ನಿಯಲ್ಲಿ ಆಡುತ್ತಿರುವ ಉಳಿದ ತಂಡಗಳಿಗೂ ಭಾರತಕ್ಕೂ ರ್ಯಾಂಕಿಂಗ್​ನಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಮಾಲ್ಡೀವ್ಸ್ 150ನೇ ಸ್ಥಾನದಲ್ಲಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು 200ರ ಗಡಿದಾಟಿ ಕುಸಿದಿವೆ.
First published:September 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ