Half Marathon- ಡಿಸೆಂಬರ್ 19ಕ್ಕೆ ಮುಂಬೈ ಹಾಫ್ ಮ್ಯಾರಾಥಾನ್; ಶುಭಹಾರೈಸಿದ ಸಚಿನ್ ತೆಂಡೂಲ್ಕರ್

Sachin Tendulkar brand ambassador of Mumbai Half Marathon- ಎನ್ಇಬಿ ಸ್ಪೋಟ್ಸ್ ಆಯೋಜಿಸುತ್ತಿರುವ ಮುಂಬೈ ಹಾಫ್ ಮ್ಯಾರಥಾನ್ ಓಟದ ಸ್ಪರ್ಧೆ ಎಲ್ಲಾ ಕೋವಿಡ್ ಮುಂಜಾಗ್ರತಾ ವ್ಯವಸ್ಥೆಯೊಂದಿದೆ. ಇದೇ ಡಿಸೆಂಬರ್ 19ಕ್ಕೆ ನಡೆಯಲಿದೆ.

ಮುಂಬೈ ಹಾಫ್ ಮ್ಯಾರಥಾನ್ ಸಚಿನ್ ತೆಂಡೂಲ್ಕರ್ ಉದ್ಘಾಟಿಸುತ್ತಿರುವ ಫೈಲ್ ಚಿತ್ರ

ಮುಂಬೈ ಹಾಫ್ ಮ್ಯಾರಥಾನ್ ಸಚಿನ್ ತೆಂಡೂಲ್ಕರ್ ಉದ್ಘಾಟಿಸುತ್ತಿರುವ ಫೈಲ್ ಚಿತ್ರ

 • Share this:
  ಮುಂಬೈ: ಕೋವಿಡ್ ಕಾರಣದಿಂದ ಎರಡು ವರ್ಷಗಳ ಬಳಿಕ ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ಮುಂಬೈ ಹಾಫ್ ಮ್ಯಾರಾಥಾನ್ (Ageas Federal Life Insurance Mumbai Half Marathon 2021) ಮತ್ತೆ ಬಂದಿದ್ದು, ಡಿಸೆಂಬರ್ 19ರಂದು ನಡೆಯಲಿದೆ. ಈ ಜನಪ್ರಿಯ ಕ್ರೀಡಾ ಕಾರ್ಯಕ್ರಮದ ಸಂಘಟಕರಾಗಿರುವ ಎನ್ಇಬಿ ಸ್ಪೋರ್ಟ್ಸ್ (NEB Sports, ಈ ಬಗ್ಗೆ ಮಾಹಿತಿ ನೀಡಿದ್ದು, ದೇಶಾದ್ಯಂತ ವಿವಿಧ ಮ್ಯಾರಥಾನ್​​​ಗಳನ್ನು ಸಂಘಟಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಅನುಮತಿಗಳು ಸದ್ಯದಲ್ಲೇ ಸಿಗಲಿದೆ ಎಂದು ತಿಳಿಸಿದೆ.

  "ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯ ಕೋವಿಡ್ ವ್ಯಾಕ್ಸಿನೇಷನ್ ಅಥವಾ RT-PCR ನೆಗೆಟಿವ್ ಪರೀಕ್ಷೆ, ಪ್ಯಾಕಿಂಗ್ ಮಾಡಲಾಗಿರುವ ಶುದ್ಧ ಉಪಾಹಾರ, ಸ್ಯಾನಿಟೈಸರ್ ಮತ್ತು ಬಳಸಿ ಎಸೆಯಬಹುದಾದ ಮಾಸ್ಕ್ ಸಹಿತ ಹಲವಾರು ಹೊಸ ಶಿಷ್ಟಾಚಾರಗಳು, ಸುರಕ್ಷತಾ ಕ್ರಮಗಳು ಈ ವರ್ಷ ರೇಸ್‌ಗಾಗಿ ಜಾರಿಯಲ್ಲಿರುತ್ತವೆ," ಎಂದು ರೇಸ್ ಡೈರೆಕ್ಟರ್ ನಾಗರಾಜ್ ಅಡಿಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಸಚಿನ್ ತೆಂಡೂಲ್ಕರ್ ಶುಭಹಾರೈಕೆ:

  "ಓಟ, ವ್ಯಾಯಾಮದ ಒಂದು ರೂಪ. ದೈಹಿಕ ಹಾಗೂ ಮಾನಸಿಕ ಫಿಟ್ನೆಸ್ ಸಹಿತ ಇದರಿಂದ ಹಲವಾರು ಪ್ರಯೋಜನಗಳಿವೆ. ಏಜೀಸ್ ಪೆಡರಲ್ ಲೈಫ್ ಇನ್ಶೂರೆನ್ಸ್ ಮ್ಯಾರಥಾನ್​​​ಗಳು ಮುಂಬೈ ಮತ್ತು ಭಾರತದಾದ್ಯಂತ ಹಲವಾರು ವರ್ಷಗಳಿಂದ ನಿಧಾನವಾಗಿ ಮತ್ತು ಖಚಿತವಾಗಿ ಫಿಟ್ನೆಸ್ ಆಂದೋಲನಗಳನ್ನು ನಡೆಸುತ್ತಿದೆ. ಕೋವಿಡ್ ಮಹಾಮಾರಿಯ ನಂತರ ಫಿಟ್ನೆಸ್ ಕುರಿತಾದ ಆಸಕ್ತಿ, ಗಮನ ಹೆಚ್ಚಾಗಿದೆ. ಸಕ್ರಿಯ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಜನರು ಅರಿತುಕೊಂಡಿದ್ದಾರೆ. ಮುಂಬೈ ಹಾಫ್ ಮ್ಯಾರಥಾನ್‌ನಲ್ಲಿ ಭಾಗವಹಿಸುವವರಿಗೆ ನಾನು ಶುಭಹಾರೈಸುತ್ತೇನೆ ಮತ್ತು ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಅವರಲ್ಲಿ ಮನವಿ ಮಾಡುತ್ತೇನೆ. ಎಲ್ಲಾ ಸ್ಪರ್ಧಿಗಳು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮ್ಯಾರಥಾನ್‌ನಲ್ಲಿ ಭಾಗವಹಿಸುವಂತೆ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ಏಜೀಸ್ ಫೆಡರಲ್ ಇನ್ಶೂರೆನ್ಸ್'ನ ಬ್ರಾಂಡ್ ಅಂಬಾಸಿಡರ್ ಕೂಡ ಆಗಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.

  "ಏಜೀಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ಮುಂಬೈ ಹಾಫ್ ಮ್ಯಾರಾಥಾನ್'ಗೆ ಜನ ಈಗಾಗಲೇ ಅಪಾರ ಆಸಕ್ತಿಯನ್ನು ತೋರಿಸಿದ್ದಾರೆ. 200ಕ್ಕೂ ಹೆಚ್ಚು ನಗರಗಳಿಂದ ಪ್ರವೇಶ ಅರ್ಜಿಗಳು ಬಂದಿವೆ. ಜನರನ್ನು ದೈಹಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಇದು ಮೊದಲ ಹಾಗೂ ದೊಡ್ಡ ಮ್ಯಾರಥಾನ್ ಆಗಲಿದೆ," ಎಂದು ಏಜೀಸ್ ಫೆಡರಲ್ ಇನ್ಶೂರೆನ್ಸ್'ನ ಚೀಫ್ ಮಾರ್ಕೆಟಿಂಗ ಆಫೀಸರ್ ಆಗಿರುವ ಕಾರ್ತಿಕ್ ರಾಮನ್ ಅಭಿಪ್ರಾಯಪಟ್ಟಿದ್ದಾರೆ.

  ಇದನ್ನೂ ಓದಿ: Harbhajan Singh: 17 ಕೋಟಿಗೆ ಮನೆ ಮಾರಾಟ ಮಾಡಿದ ಹರ್ಭಜನ್ ಸಿಂಗ್, ಹೇಗಿದೆ ಗೊತ್ತಾ ಆ ಮನೆ?

  "ಕೋವಿಡ್ ಪರಿಸ್ಥಿತಿ ಸುಧಾರಿಸಿದಂತೆ, ಹೆಚ್ಚಿನ ಜನರು ದೈಹಿಕ ಓಟಗಳತ್ತ ಗಮನ ಹರಿಸುತ್ತಿದ್ದಾರೆ ಮತ್ತು ಓಟದ ಉತ್ಸಾಹಿಗಳಿಂದ ನಾವು ನಗರದಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತೇವೆ," ಎಂದು ಕಾರ್ತಿಕ್ ರಾಮನ್ ಹೇಳಿದ್ದಾರೆ.

  ಏಜೆಸ್ ಫೆಡರಲ್ ಲೈಫ್ ಇನ್ಶುರೆನ್ಸ್ ಮುಂಬೈ ಹಾಫ್ ಮ್ಯಾರಥಾನ್ ಈ ವರ್ಷ ನಗರದಲ್ಲಿ ವಿಂಗ್ಸ್ ಸ್ಪೋರ್ಟ್ಸ್ ಸೆಂಟರ್ (ಬಾಂದ್ರಾ ಪಶ್ಚಿಮದಲ್ಲಿ ಮರುಸ್ಥಾಪನೆ) ರೂಪದಲ್ಲಿ ಹೊಸ ಮನೆಯನ್ನು ಹೊಂದಿದೆ. ಎಂದಿನಂತೆ ಈ ಬಾರಿಯ ರೇಸ್ ದೊಡ್ಡ ಮ್ಯಾರಥಾನ್, ಹಾಫ್ ಮ್ಯಾರಥಾನ್ (21.1 ಕಿ.ಮೀ.), 10ಕೆ ಮ್ಯಾರಥಾನ್ ಮತ್ತು 5ಕೆ ಮ್ಯಾರಥಾನ್'ಗಳನ್ನು ಹೊಂದಿದೆ.

  ಇದನ್ನೂ ಓದಿ: Pro Kabaddi ಗೆ ಇನ್ನೊಂದೇ ತಿಂಗಳು; ಬೆಂಗಳೂರಲ್ಲೇ ಏಕೆ ಪಂದ್ಯಗಳು? Live Streaming ಇತ್ಯಾದಿ ವಿವರ

  "ಸರ್ಕಾರದಿಂದ ಅನುಮತಿಗಳನ್ನು ಆಧರಿಸಿ ಭಾಗವಹಿಸುವವರ ಸಂಖ್ಯೆಗಳನ್ನು ಮಿತಿಗೊಳಿಸಲು ಸಂಘಟಕರು ಉದ್ದೇಶಿಸಿದ್ದಾರೆ. ನಾವು ಈಗಾಗಲೇ ನಮ್ಮ ಗುರಿಯನ್ನು ತಲುಪಲು ತುಂಬಾ ಹತ್ತಿರದಲ್ಲಿದ್ದೇವೆ. ಆದಾಗ್ಯೂ, ನೋಂದಣಿಗಳು ಡಿಸೆಂಬರ್ 4 ರವರೆಗೆ ತೆರೆದಿರುತ್ತವೆ," ಎಂದು ರೇಸ್ ಡೈರೆಕ್ಟರ್ ನಾಗರಾಜ್ ಅಡಿಗ ತಿಳಿಸಿದ್ದಾರೆ.
  Published by:Vijayasarthy SN
  First published: