ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಈಗಂತೂ ಎಲ್ಲ ಹಣ್ಣು (Fruit), ತರಕಾರಿ (Vegetable) ಬೆಳೆಗಳಿಗೆ ರಾಸಾಯನಿಕ ಸಿಂಪಡಿಸುತ್ತಾರೆ. ರಾಸಾಯನಿಕ ಗೊಬ್ಬರ ಹಾಕಿಯೇ ಬೆಳೆಗಳನ್ನು ಬೆಳೆಯುತ್ತಾರೆ. ಹೊರಗಿನಿಂದ ನೋಡಲು ಚೆನ್ನಾಗಿಯೇ ಕಂಡರೂ ಅದರು ಅಕ್ಷರಶಃ ರಾಸಾಯನಿಕ (Chemical ) ಬೆಳೆಯಾಗಿರುತ್ತದೆ. ಆದರೆ ನಗರಗಳಲ್ಲಿ ಬೇರೆ ಆಯ್ಕೆಗಳಿರುವುದಿಲ್ಲ. ಹಾಗಾಗಿ ಬಹಳಷ್ಟು ಜನರು ರಾಸಾಯನಿಕಯುಕ್ತ ಉತ್ಪನ್ನಗಳನ್ನೇ ಖರೀದಿಸುತ್ತಾರೆ. ಆದ್ರೆ ಈಗೀಗ ಸ್ವಲ್ಪ ಮಟ್ಟಿಗೆ ಸಾವಯವ ಉತ್ಪನ್ನಗಳ ಬಗ್ಗೆ ಜನರು ಜಾಗೃತರಾಗಿದ್ದಾರೆ. ಸಾವಯವ ವಿಧಾನಗಳಲ್ಲಿ ಬೆಳೆದ ಬೆಳೆಗಳನ್ನು ಖರೀದಿಸುತ್ತಾರೆ. ಆದರೆ ನೀವು ತೆಗೆದುಕೊಳ್ಳುವ ಎಲ್ಲಾ ತರಕಾರಿಗಳು ಮತ್ತು ಹಣ್ಣುಗಳು ವಿಷ ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ತುಂಬಾ ಅಗತ್ಯ.
ಸಾವಯವ ತರಕಾರಿಗಳು ಸಾಂಪ್ರದಾಯಿಕವಾಗಿ ಬೆಳೆದವುಗಳಿಗಿಂತ ಹೆಚ್ಚು ತಾಜಾ ಆಗಿರುತ್ತವೆ. ಅವುಗಳಲ್ಲಿ ಕೀಟನಾಶಕಗಳು ಮತ್ತು ಇತರ ರಾಸಾಯನಿಕಗಳು ಇಲ್ಲದೇ ಹೋದ್ದರಿಂದ ರುಚಿಯೂ ಉತ್ತಮವಾಗಿರುತ್ತದೆ. ಇದೇ ರೀತಿ ಕ್ರಿಕೆಟ್ ದಿಗ್ಗಜ ಸಚಿನ್ ಸಹ ತಾವೇ ಸ್ವತಃ ತರಕಾರಿಗಳನ್ನು ಬೆಳೆದುಕೊಂಡಿದ್ದಾರೆ.
ತೆಂಡೂಲ್ಕರ್ ಅವರ ಗಾರ್ಡನ್:
ತಾಜಾ ಮತ್ತು ರಾಸಾಯನಿಕ ಮುಕ್ತ ತರಕಾರಿಗಳನ್ನು ತಿನ್ನುವುದು ಒಂದು ವರವಾಗಿದೆ. ನೀವು ಕೂಡ ನಿಮ್ಮ ಸ್ವಂತ ಹಿತ್ತಲಿನಲ್ಲಿ ತರಕಾರಿಗಳನ್ನು ಬೆಳೆಯುವ ಕನಸು ಕಾಣುತ್ತಿದ್ದರೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ನಿಮಗೆ ಸ್ಫೂರ್ತಿ ನೀಡುತ್ತಾರೆ.
View this post on Instagram
ಮನೆಯ ಹಿತ್ತಲಿನಲ್ಲೇ ಬಗೆ ಬಗೆಯ ಬೆಳೆ:
ಸಚಿನ್ ತೆಂಡೂಲ್ಕರ್ ತನ್ನ ತೋಟದಲ್ಲಿ ಮೂಲಂಗಿಯನ್ನು ಕಿತ್ತು ನಂತರ ಕಡಲೆ ಬೆಳೆಗಳ ಕಡೆಗೆ ತೋರಿಸುತ್ತಿರುವುರಿಂದ ವಿಡಿಯೋ ಆರಂಭವಾಗುತ್ತದೆ. ಅವರು ಕ್ಯಾಪ್ಸಿಕಂ ಅನ್ನು ಪ್ರತ್ಯೇಕ ಕುಂಡಗಳಲ್ಲಿ ಮತ್ತು ಅವುಗಳ ಪಕ್ಕದಲ್ಲಿ ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿಯನ್ನು ಬೆಳೆದಿದ್ದಾರೆ.
ಇದನ್ನೂ ಓದಿ: ICC ODI Ranking: ಭಾರತದ ಗೆಲುವಿನಿಂದ ಆಸ್ಟ್ರೇಲಿಯಾಕ್ಕೆ ಬಿಗ್ ಶಾಕ್, ಕಿವೀಸ್ ಸೋಲಿನಿಂದ ಬದಲಾಯ್ತು ಆಂಗ್ಲರ ಲಕ್!
ಅವರ ತೋಟದಲ್ಲಿ ನಾವು ಬದನೆಗಳ ಸಾಲುಗಳನ್ನು ಸಹ ಕಾಣಬಹುದು. ಸಚಿನ್ ತೆಂಡೂಲ್ಕರ್ ಅವರು ಕಳೆದ ಬಾರಿ "ಬೈಗಾನ್ ಕಾ ಭರ್ತಾ" ಮತ್ತು ಅರಿಶಿನ ಮತ್ತು ಮಸಾಲೆ ಲೇಪಿಸಿ ಬದನೆಕಾಯಿಗಳ ಹೋಳುಗಳನ್ನು ಬೇಯಿಸಿದ ಭಕ್ಷ್ಯವನ್ನು ತಯಾರಿಸಿದ್ದರು.
ನಂತರ ಸಚಿನ್ ಅವರು ತಮ್ಮ ಪಾಲಕ್ ತೋಟದ ಕಡೆಗೆ ಹೋಗುತ್ತಾರೆ. ಅಲ್ಲದೇ ಯೇ ಅಭಿ ಮೈ ಘರ್ ಪರ್ ಲೆಕರ್ ಜಾವುಂಗಾ. ಔರ್ ಪಕಾವುಂಗಾ ಇಸ್ಕೋ (ಈಗ ನಾನು ಇದನ್ನು ಮನೆಗೆ ತೆಗೆದುಕೊಂಡು ಹೋಗಿ ಅಡುಗೆ ಮಾಡುತ್ತೇನೆ) ಎಂದು ಸಚಿನ್ ತೆಂಡೂಲ್ಕರ್ ಹೇಳುತ್ತಾರೆ. ಅಲ್ಲದೇ ಅವರು ತಮ್ಮ ತಾಯಿಯ ಪಾಕವಿಧಾನವನ್ನು ಬಳಸುವುದಾಗಿ ಹೇಳಿಕೊಂಡಿದ್ದಾರೆ.
ಮನೆಯಲ್ಲಿ ಹಿತ್ತಲು ಆರಂಭಿಸಿದ ಸಚಿನ್:
ಸಚಿನ್ ತೆಂಡೂಲ್ಕರ್ ಅವರು ತಮ್ಮ ತೋಟದಲ್ಲಿ ಅನೇಖ ರೀತಿಯ ತರಕಾರಿಗಳಿಗಳನ್ನು ಬೆಳೆದಿದ್ದಾರೆ. ಅದರಲ್ಲಿ ಬಿಳಿ ಮೂಲಂಗಿ, ಕೆಂಪು ಮೂಲಂಗಿ ಮತ್ತು ಪಾಲಕ್ ಬೆಳೆದಿದ್ದು, ಅದನ್ನು ಬುಟ್ಟಿಯಲ್ಲಿ ತುಂಬಿಕೊಂಡು ಮನೆಗೆ ತೆಗೆದುಕೊಂಡು ಹೋಗುವುದನ್ನು ವಿಡಿಯೋದಲ್ಲಿ ನಾವು ನೋಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ