• Home
  • »
  • News
  • »
  • sports
  • »
  • T20 World Cup: ನೆದರ್ಲೆಂಡ್ಸ್ ಗೆಲುವಿಗೆ ಕ್ರಿಕೆಟ್​ ದೇವರ ಸಖತ್ ಟ್ವೀಟ್​, ಈ ವಿಶ್ವಕಪ್​ ನಿಜವಾಗಿಯೂ ಮಜವಾಗಿದೆ ಎಂದ ಸೆಹ್ವಾಗ್

T20 World Cup: ನೆದರ್ಲೆಂಡ್ಸ್ ಗೆಲುವಿಗೆ ಕ್ರಿಕೆಟ್​ ದೇವರ ಸಖತ್ ಟ್ವೀಟ್​, ಈ ವಿಶ್ವಕಪ್​ ನಿಜವಾಗಿಯೂ ಮಜವಾಗಿದೆ ಎಂದ ಸೆಹ್ವಾಗ್

ಸಚಿನ್

ಸಚಿನ್

T20 World Cup: ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ಸ್ ಗೆಲುವು ಭಾರತಕ್ಕೆ T20 ವಿಶ್ವಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸಲು ಸಹಾಯ ಮಾಡಿತು. ದಕ್ಷಿಣ ಆಫ್ರಿಕಾದಂತಹ ಪ್ರಬಲ ತಂಡವನ್ನು ಸೋಲಿಸಿದ ನೆದರ್ಲೆಂಡ್ಸ್ ದಂತಕತೆಯಾಗಿ ಮಾರ್ಪಟ್ಟಿತು.

  • Share this:

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾವನ್ನು (Team India) ಸೆಮಿ ಫೈನಲ್‌ ಗೆ ತಲುಪಿದ್ದರ ಜೊತೆ ಮೊನ್ನೆಯ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ಪ್ರಬಲ ದಕ್ಷಿಣ ಆಫ್ರಿಕಾವನ್ನು (NED vs SA) ಸೋಲಿಸಿಸಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ದಕ್ಷಿಣ ಆಫ್ರಿಕಾ ನೆದರ್ಲೆಂಡ್ಸ್ ವಿರುದ್ಧ ಸೋತಿದ್ದು, ಜಿಂಬಾಬ್ವೆ ವಿರುದ್ಧ ಆಡುವ ಮೊದಲೇ ಭಾರತ ತಂಡ ಸೆಮಿಗೆ ಅರ್ಹತೆ ಗಳಿಸುವಂತೆ ಮಾಡಿತು. ನೆದರ್ಲೆಂಡ್ಸ್ ಗೆಲುವಿನ ನಂತರ ದಕ್ಷಿಣ ಆಫ್ರಿಕಾದ ಹೀನಾಯ ಸೋಲು ಟಿ20 ವಿಶ್ವಕಪ್​ನ (T20 World Cup) ಗ್ರೂಪ್ 2ರ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿತ್ತು. ಈ ಸಂದರ್ಭದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಮಾಡಿದ ಟ್ವೀಟ್ ಸಖತ್ ವೈರಲ್ ಆಗಿತ್ತು. 


ಭಾರತಕ್ಕೆ ಸೆಮೀಸ್​ ಪ್ರವೇಶಿಸಲು ಸಹಾಯ ಮಾಡಿದ ನೆದರ್ಲೆಂಡ್ಸ್ :


ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್ಸ್ ಗೆಲುವು ಭಾರತಕ್ಕೆ T20 ವಿಶ್ವಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸಲು ಸಹಾಯ ಮಾಡಿತು. ದಕ್ಷಿಣ ಆಫ್ರಿಕಾದಂತಹ ಪ್ರಬಲ ತಂಡವನ್ನು ಸೋಲಿಸಿದ ನೆದರ್ಲೆಂಡ್ಸ್ ದಂತಕತೆಯಾಗಿ ಮಾರ್ಪಟ್ಟಿದ್ದು ಈ ಸಮಯದಲ್ಲಿ ಬವುಮಾ ತಂಡದ ಹೀನಾಯ ಸೋಲಿಗೆ ಸಚಿನ್ ತಮಾಷೆಯಾಗಿಯೇ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಟಿ20 ವಿಶ್ವಕಪ್‌ನ ಅಂತಿಮ ಪಂದ್ಯದಲ್ಲಿ ನೆದರ್ಲೆಂಡ್ಸ್ ಪ್ರೋಟೀಯಾಸ್ ತಂಡವನ್ನು ಸೋಲಿಸಿದ ನಂತರ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಂತರ ನನ್ನ ಬೆಂಬಲ ಡಚ್ ತಂಡಕ್ಕೆ ಎಂದು ಬರೆದುಕೊಂಡಿದ್ದಾರೆ.


ಕ್ರಿಕೆಟ್ ದೇವರ ತಮಾಷೆಯ ಕಮೆಂಟ್:


ಟ್ವಿಟರ್ ಖಾತೆಯಲ್ಲಿ ತಮಾಷೆಯಾಗಿ ಆಟದ ವೈಖರಿಯ ಬಗ್ಗೆ ಬರೆದುಕೊಂಡಿರುವ ಕ್ರಿಕೆಟ್ ದೇವರು, ಸ್ನೇಹಿತನೊಂದಿಗೆ ಬೆಳಗ್ಗಿನ ಉಪಹಾರ ಸೇವಿಸಲು ಹೋಗಿದ್ದೆ. ಡಚ್‌ ಆಯ್ಕೆಮಾಡೋಣ ಎಂದು ಆತನಿಗೆ ಹೇಳಿದೆ. ನನ್ನ ಪ್ರಸ್ತಾಪ ಆತನನ್ನು ಕಕ್ಕಾಬಿಕ್ಕಿಯಾಗಿಸಿದೆ! ಎಂದು ಬರೆದುಕೊಂಡಿದ್ದು ದಕ್ಷಿಣ ಆಫ್ರಿಕಾ ವರ್ಸಸ್ ನೆದರ್ಲೆಂಡ್ಸ್ ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಈ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ.





ಎಂದಿನಂತೆಯೇ ಈ ಟ್ವೀಟ್ ಅನ್ನು ತಮ್ಮ ಹಾಸ್ಯಮಯ ಹಾಗೂ ಕಾಲ್ಪನಿಕ ಶೈಲಿಯಲ್ಲೇ ತೆಂಡೂಲ್ಕರ್ ಹಂಚಿಕೊಂಡಿದ್ದು ತೆಂಡೂಲ್ಕರ್ ದಕ್ಷಿಣ ಆಫ್ರಿಕಾದೆಡೆಗೆ ಮಾಡಿದ ಕಾಮೆಂಟ್ ಅವರ ಅಭಿಮಾನಿಗಳು ಹಾಗೂ ಫಾಲೋವರ್‌ಗಳಲ್ಲಿ ಕೂಡ ನಗೆಯ ಕಾರಂಜಿಯನ್ನು ಚಿಮ್ಮಿಸಿದೆ.


ಇದನ್ನೂ ಓದಿ: T20 World Cup 2022: ಸೆಮೀಸ್‌ಗೂ ಮುನ್ನ ಟೀಂ ಇಂಡಿಯಾಗೆ ಟೆನ್ಷನ್, ರೋಹಿತ್ ಜೊತೆ ಫಾರ್ಮ್‌ ಕಳೆದುಕೊಂಡ ಮತ್ತೋರ್ವ ಆಟಗಾರ

ವೀರೇಂದ್ರ ಸೆಹ್ವಾಗ್ ಅವರ ಟ್ವೀಟ್ ಹೇಗಿತ್ತು?:


ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಭಾರತ ಪ್ರವೇಶ ಪಡೆದುಕೊಂಡ ನಂತರ ಮಾಜಿ ಓಪನಿಂಗ್ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಕೂಡ ತೆಂಡೂಲ್ಕರ್ ಶೈಲಿಯಲ್ಲಿಯೇ ಟ್ವೀಟ್ ಒಂದನ್ನು ಹಂಚಿಕೊಂಡಿದ್ದಾರೆ. ಒಂದು ರೀತಿ ತಿರುವುಗಳಿಂದ ತುಂಬಿರುವ ವಿಶ್ವಕಪ್ ಇದಾಗಿದೆ. ನೆದರ್ಲೆಂಡ್ಸ್ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ನಿಜಕ್ಕೂ ಮೋಜನ್ನುಂಟು ಮಾಡುತ್ತಿದೆ ಎಂದು #NedvSA ಎಂಬ ಹ್ಯಾಶ್‌ಟ್ಯಾಗ್ ನೀಡಿದ್ದಾರೆ.


ದಕ್ಷಿಣ ಆಫ್ರಿಕಾ ಹಾಗೂ ನೆದರ್ಲೆಂಡ್ಸ್ ಪಂದ್ಯಾಟ


ಪಂದ್ಯದ ಬಗೆಗೆ ಮಾತನಾಡುವುದಾದರೆ ಕಾಲಿನ್ ಅಕರ್‌ಮನ್ ಪೇರಿಸಿದ 41 ರನ್ ಮತ್ತು ಟಾಮ್ ಕೂಪರ್ ಅವರ 35 (19 ಎಸೆತಗಳು) ರನ್‌ಗಳ ನಿರ್ಣಾಯಕ ಆಟದಿಂದ ನೆದರ್ಲೆಂಡ್ಸ್ 20 ಓವರ್‌ಗಳಲ್ಲಿ 158-4 ರನ್ನುಗಳ ಸವಾಲಿನ ಮೊತ್ತವನ್ನು ದಾಖಲಿಸಲು ನೆರವಾಯಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 145-8 ರನ್ ಗಳಿಸಿ ಸೋಲನ್ನಪ್ಪಿತು. ಅಕರ್‌ಮನ್ ಅವರ ಸ್ಫೋಟಕ ಬ್ಯಾಟಿಂಗ್ ವೈಖರಿಯಿಂದ ಪ್ಲೇಯರ್ ಆಫ್ ಮ್ಯಾಚ್ ಗೆ ಪಾತ್ರರಾದರು.


ಇದನ್ನೂ ಓದಿ: Ind Vs Eng T20 World Cup 2022: ಭಾರತ - ಇಂಗ್ಲೆಂಡ್ ಪಂದ್ಯ; ದಿನಾಂಕ, ಸ್ಥಳ, ಲೈವ್ ಸ್ಟ್ರೀಮಿಂಗ್ ವಿವರ

ಅಡಿಲೇಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ನೆದರ್ಲೆಂಡ್ಸ್ ಹಾಗೂ ದಕ್ಷಿಣ ಆಫ್ರಿಕಾಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಮೊದಲು ಬ್ಯಾಟಿಂಗ್ ಆಯ್ಕೆಮಾಡಿದ ನೆದರ್ಲೆಂಡ್ಸ್ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. 159 ರನ್‌ಗಳ ಸುಲಭ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 145 ರನ್‌ಗಳಿಸಿ 13 ರನ್‌ಗಳಿಂದ ಸೋಲುಂಡಿತು.

Published by:shrikrishna bhat
First published: