• Home
  • »
  • News
  • »
  • sports
  • »
  • Sachin Tendulkar: ಗೋವಾದಲ್ಲಿ ಮೀನು ಹಿಡಿದ ಸಚಿನ್, ಕ್ರಿಕೆಟ್​ ದೇವರ ಹೊಸ ವಿಡಿಯೋ ಸಖತ್ ವೈರಲ್

Sachin Tendulkar: ಗೋವಾದಲ್ಲಿ ಮೀನು ಹಿಡಿದ ಸಚಿನ್, ಕ್ರಿಕೆಟ್​ ದೇವರ ಹೊಸ ವಿಡಿಯೋ ಸಖತ್ ವೈರಲ್

ಸಚಿನ್

ಸಚಿನ್

Sachin Tendulkar: ಸಚಿನ್‌ ತೆಂಡೂಲ್ಕರ್‌ ಅವರು ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆ ಅಗಾಧ. ಅವರ ಆ ಸಾಧನೆಗೆ ಅವರಿಗೆ ಕ್ರಿಕೆಟ್‌ನ ದೇವರು ಎನ್ನೋ ಬಿರುದನ್ನು ನೀಡಿ ವಿಶ್ವವೇ ಗೌರವಿಸುತ್ತದೆ. ಅವರು ಕ್ರಿಕೆಟ್‌ನಿಂದ ನಿವೃತ್ತಿ ಪಡೆದು ಹಲವು ವರ್ಷಗಳೇ ಕಳೆದರು ಸಹ, ಅವರು ಇಂದಿಗೂ ಎಲ್ಲರ ಮನದಲ್ಲಿ ಇರುವ ಕ್ರಿಕೆಟ್‌ ದೇವರು ಆಗಿದ್ದಾರೆ.

ಮುಂದೆ ಓದಿ ...
  • Trending Desk
  • Last Updated :
  • New Delhi, India
  • Share this:

ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರು ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆ ಅಗಾಧ. ಅವರ ಆ ಸಾಧನೆಗೆ ಅವರಿಗೆ ಕ್ರಿಕೆಟ್‌ನ (Cricket) ದೇವರು ಎನ್ನೋ ಬಿರುದನ್ನು ನೀಡಿ ವಿಶ್ವವೇ ಗೌರವಿಸುತ್ತದೆ. ಅವರು ಕ್ರಿಕೆಟ್‌ನಿಂದ ನಿವೃತ್ತಿ ಪಡೆದು ಹಲವು ವರ್ಷಗಳೇ ಕಳೆದರು ಸಹ, ಅವರು ಇಂದಿಗೂ ಎಲ್ಲರ ಮನದಲ್ಲಿ ಇರುವ ಕ್ರಿಕೆಟ್‌ ದೇವರು ಆಗಿದ್ದಾರೆ. ಅವರು ಬಗ್ಗೆ ಈಗ ಯಾಕೆ ಮಾತನಾಡ್ತಿದಾರೆ ಅಂತ ನಿಮ್ಗೆ ಅನಿಸಬಹುದು? ಅದಕ್ಕೂ ಕಾರಣವಿದೆ. ಅವರು ಇತ್ತಿಚೀಗೆ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಒಂದು ಅಪರೂಪದ ಘಟನೆಯನ್ನು ಹಂಚಿಕೊಂಡಿದ್ದಾರೆ. ಆ ಸ್ಟೋರಿ ಈಗ ಎಲ್ಲೆಡೆ ವೈರಲ್‌ (Viral) ಆಗಿ, ಸೋಷಿಯಲ್‌ ಮೀಡಿಯಾದ ಟ್ರೆಂಡ್‌ ನಲ್ಲಿ ಟಾಪ್‌ ಲಿಸ್ಟ್‌ನಲ್ಲಿದೆ.


ಗೋವಾದಲ್ಲಿ ಮೀನು ಹಿಡಿದ ಸಚಿನ್:


ಸಚಿನ್‌ ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಆ ಸ್ಟೋರಿ ಯಾವುದು ಅಂದ್ರೆ? ಅದು ಗೋವಾದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯೊಂದಿಗೆ ತಮ್ಮ ಅವಿಸ್ಮರಣೀಯ ಅನುಭವವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಕಡಲತೀರದ ಸಾಂಪ್ರದಾಯಿಕ ಮೀನುಗಾರರೊಂದಿಗೆ ಮೀನುಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ದೋಣಿಯ ಮೂಲಕ ಸಮುದ್ರಕ್ಕೆ ತೆರಳಿ ಮೀನುಗಾರಿಕೆಯನ್ನು ಮಾಡಿದ್ದಾರೆ. ಅದರ ನಂತರ ಸಮುದ್ರ ತೀರದ ಅತ್ಯುತ್ತಮ ಆಹಾರವನ್ನು ಸಹ ಸೇವನೆ ಮಾಡಿದ್ದಾರೆ.




ಇನ್ಸ್ಟಾಗ್ರಾಮ್‌ ವಿಡಿಯೋದಲ್ಲಿ ಏನಿದೆ?:


ಈ ವಿಡಿಯೋ ಕ್ಲಿಪ್‌ನಲ್ಲಿ, ಶಾರ್ಟ್ಸ್ ಮತ್ತು ಟಿ-ಶರ್ಟ್ ಅನ್ನು ಧರಿಸಿ, ತೆಂಡೂಲ್ಕರ್ ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾರೆ. ಆ ವ್ಯಕ್ತಿಯು ಸಾಂಪ್ರದಾಯಿಕ ಮೀನುಗಾರಿಕೆಯನ್ನು ವಿವರಿಸುತ್ತಾರೆ. ಆ ವ್ಯಕ್ತಿಯು ನಾನು ಕೂಡ ಇಂದಿಗೂ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಮುಂದುವರಿಸುತ್ತಿದ್ದೇನೆ. ಇದರ ಜೊತೆಗೆ ಯುವ ಪೀಳಿಗೆಯು ಸಾಂಪ್ರದಾಯಿಕ ಮೀನುಗಾರಿಕೆಯನ್ನು ಮುಂದುವರಿಸಬೇಕೆಂದು ತಿಳಿಸುತ್ತಾರೆ. ಇದಕ್ಕೆ ಸಮ್ಮತಿ ಸೂಚಿಸಿದ ಸಚಿನ್‌ “ಹೌದು ಸಾಂಪ್ರದಾಯಿಕ ಮೀನುಗಾರಿಕೆ ಮುಂದುವರಿಯಬೇಕು" ಎಂದು ಹೇಳುತ್ತಾರೆ.


ಗೋವಾಕ್ಕೆ ಯಾರೇ ಬರಲಿ ಮೊದಲು ಯೋಚ್ನೆ ಮಾಡೋ ಏಕೈಕ ವಿಷಯವೆಂದರೆ ಸಮುದ್ರಾಹಾರ, ಸಮುದ್ರಾಹಾರವನ್ನು ಪಡೆಯಲು ಮೀನುಗಾರರು ಎಷ್ಟು ಕಷ್ಟಪಡಬೇಕು ಎಂದು ಯಾರು ಸಹ ಯೋಚ್ನೆ ಮಾಡೋದೆ ಇಲ್ಲ” ಎಂದು ಸಚಿನ್‌ ಹೇಳಿದ್ದಾರೆ.


ಇದನ್ನೂ ಓದಿ: FIFA World Cup 2022: ಒಂದೇ ಒಂದು ಪಂದ್ಯ ಗೆದ್ದಿದ್ದಕ್ಕೆ ದೇಶಕ್ಕೆ ರಜೆ ಘೋಷಿಸಿದ ದೊರೆ, ಇನ್ನು ಕಪ್​ ಗೆದ್ರೆ ಏನ್​ ಕಥೆ ಎಂದ ನೆಟ್ಟಿಗರು


ಸಚಿನ್‌ ಅವರಿಗೆ ʼನಿಮ್ಮ ಅನುಭವ ಏನುʼ ಎಂದು ಕೇಳಿದಾಗ, ಆಗ ಸಚಿನ್‌ ಅವರು ನನ್ನ ಅನುಭವಕ್ಕೆ ಮೀನುಗಾರಿಕೆ ಹೊಸ ಸೆರ್ಪಡೆ ಎಂದು ಹೇಳುತ್ತಾ, ಅವರು ದೋಣಿಯನ್ನು ಏರಿ ಮೀನನ್ನು ಹಿಡಿಯಲು ಮೀನುಗಾರರ ಜೊತೆ ಹೋಗುವ ದೃಶ್ಯ ವಿಡಿಯೋದಲ್ಲಿ ಅಮೋಘವಾಗಿ ಸೆರೆ ಆಗಿದೆ. ಮೀನನ್ನು ಹಿಡಿದ ನಂತ್ರ ಸಚಿನ್‌ ಅವರು ಗೋವಾದ ರೆಸ್ಟೊರೆಂಟ್‌ನಲ್ಲಿ ಅವರ ಮಗ ಅರ್ಜುನ್‌ ಜೊತೆ ಅನೇಕ ವಿಧದ ಸಮುದ್ರಾಹಾರವನ್ನು ಸೇವಿಸುತ್ತಾ, ತಮ್ಮ ಗೋವಾದ ಟ್ರಿಪ್‌ ಅನ್ನು ಸಕತ್‌ ಎಂಜಾಯ್‌ ಮಾಡಿದ್ದಾರೆ.


ವಿಡಿಯೋ ಸಖತ್ ವೈರಲ್:


ಸಚಿನ್ ಅವರು ಹಂಚಿಕೊಂಡ ವಿಡಿಯೋ ಕ್ಲಿಪ್ ಇನ್ಸ್ಟಾಗ್ರಾಮ್ನಲ್ಲಿ 2.4 ಮಿಲಿಯನ್ಗಿಂತ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿದೆ.


ನೆಟಿಜನ್‌ಗಳ ಪ್ರತಿಕ್ರಿಯೆ ಹೇಗಿತ್ತು?:


ಈ ವಿಡಿಯೋ ಕ್ಲಿಪ್‌ ನೋಡಿದ ಅನೇಕ ನೆಟಿಜನ್‌ ಕ್ರಿಕೆಟ್‌ ದೈತ್ಯನ ನಮ್ರತೆಯನ್ನು ಶ್ಲಾಘಿಸಿದ್ದಾರೆ. ಒಬ್ಬ ಬಳಕೆದಾರರು “ಗೋವಾದಲ್ಲಿ ಮೀನುಗಾರರೊಂದಿಗೆ ಸಚಿನ್‌ ಅವರ ಇಂಟ್ರೆಸ್ಟಿಂಗ್‌ ಮಾರ್ನಿಂಗ್‌” ಅಂತ ಬರೆದಿದ್ಧಾರೆ. ಇನ್ನೊಬ್ಬ ಬಳಕೆದಾರರು “ಬೆಸ್ಟ್‌ ವಿಡಿಯೋ ಇದಾಗಿದೆ” ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು “ಈ ಮುನುಷ್ಯ ಭೂಮಿಗೆ ಇಳಿದ ದೇವರು, ಇವರ ಮುಖದಲ್ಲಿ ಇರೋ ನಗು, ಸ್ನೇಹಪರತೆ ನಿಜಕ್ಕೂ ಅದ್ಭುತ” ಎಂದು ಬರೆದುಕೊಂಡಿದ್ದಾರೆ. “ಮಗ ಅರ್ಜುನ್‌ ಕ್ಯಾಮೆರಾ ಕಂಡು ತುಂಬಾ ನಾಚುತ್ತಿದ್ದಾರೆ. ಎಂತಹ ವಿನಮ್ರ ಕುಟುಂಬ. ದೇವರು ನಿಮ್ಮನ್ನು ಸದಾ ಹೀಗೆ ಕಾಪಾಡಲಿ, ಪ್ರೀತಿಯ ಲೋಡ್‌ ಸಚಿನ್‌ ಸರ್‌” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

Published by:shrikrishna bhat
First published: