• Home
  • »
  • News
  • »
  • sports
  • »
  • Sachin Tendulkar: ಸ್ಫೂರ್ತಿ ಎಲ್ಲಿಂದಲೂ ಸಿಗಬಹುದು, ಈ ಆಟಗಾರನನ್ನು ತೋರಿಸಿ ಆ ಮಾತು ಹೇಳಿದ್ರು ಸಚಿನ್ ತೆಂಡುಲ್ಕರ್...ಯಾರಿವನು?

Sachin Tendulkar: ಸ್ಫೂರ್ತಿ ಎಲ್ಲಿಂದಲೂ ಸಿಗಬಹುದು, ಈ ಆಟಗಾರನನ್ನು ತೋರಿಸಿ ಆ ಮಾತು ಹೇಳಿದ್ರು ಸಚಿನ್ ತೆಂಡುಲ್ಕರ್...ಯಾರಿವನು?

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

“ಅಸಾಧ್ಯ ಮತ್ತು ಸಾಧ್ಯ ನಡುವಿನ ವ್ಯತ್ಯಾಸವು ಆ ವ್ಯಕ್ತಿಯ ನಿರ್ಧಾರದಲ್ಲಿದೆ. ನನಗೆ ಸಾಧ್ಯ ಎಂಬುದನ್ನು ತನ್ನ ಧ್ಯೇಯವಾಕ್ಯವಾಗಿ ಆಯ್ಕೆ ಮಾಡಿದ ಹರ್ಷದ್ ಗೋಥಂಕರ್ ಈ ವಾಕ್ಯಕ್ಕೆ ಅಪ್ರತಿಮ ಉದಾಹರಣೆ. ಯಾವುದೇ ವಿಚಾರಗಳನ್ನು ಸಾಧ್ಯವಾಗಿಸಲು ಪ್ರೀತಿಯೇ ಸ್ಪೂರ್ತಿ ಎಂಬುದನ್ನು ನಾವು ಆತನಿಂದ ಕಲಿಯಬಹುದು ಎಂಬ ಅಡಿಬರಹದಡಿ ಈ ವಿಡಿಯೋವನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರೀಯರಾಗಿದ್ದಾರೆ. ಕೆಲವೊಂದು ಅವರು ಅಪ್‍ಲೋಡ್ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನರ ಮೆಚ್ಚುಗೆಗೂ ಪಾತ್ರವಾಗುತ್ತಿದೆ. ಕೆಲವು ದಿನಗಳ ಹಿಂದೆ ವಿಕಲಚೇತನ ವ್ಯಕ್ತಿಯೊಬ್ಬರು ಕಾಲುಗಳಿಂದ ಕೇರಮ್ ಆಟ ಆಡುತ್ತಿರುವ ಸ್ಪೂರ್ತಿದಾಯಕವಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹರ್ಷದ್ ಗೋಥಂಕರ್ ಎಂಬ ವ್ಯಕ್ತಿಗೆ ಕೈಗಳಿಲ್ಲ ಆದರೆ ತನ್ನ ಪಾದಗಳಿಂದ ಕ್ಯಾರೆಮ್ ಆಟ ಆಡುವಲ್ಲಿ ಅಸಾಧಾರಣ ಪ್ರತಿಭಾವಂತ. ಅವರ ಕೌಶಲ್ಯ ಮತ್ತು ದೃಢ ನಿಶ್ಚಯದಿಂದ ಪ್ರಭಾವಿತರಾದ ಸಚಿನ್ ವಿಡಿಯೊವನ್ನು ಹಂಚಿಕೊಂಡಿದ್ದಾರೆ.


ವೀಡಿಯೊದಲ್ಲಿ, ಗೋಥಂಕರ್ ತನ್ನ ಪಾದಗಳಿಂದ ಕ್ಯಾರಮ್ ಆಟ ಆಡುತ್ತಾರೆ ಮತ್ತು ಕ್ಯಾರಮ್ ಪಾನ್‍ಗಳನ್ನು ತಮ್ಮ ಕಾಲುಗಳಿಂದ ಬೋರ್ಡಿನ ನಾಲ್ಕು ಸುತ್ತಲೂ ಇರುವ ಸಣ್ಣ ಬಲೆಯಂತಹ ಬ್ಯಾಗ್ ಒಳಗೆ ಹೋಗುವಂತೆ ಮಾಡುತ್ತಾನೆ. ಕೊನೆಯಲ್ಲಿ, ಇತರ ಆಟಗಾರರು ಗೌರವದ ಸಂಕೇತವಾಗಿ ಅವನ ಪಾದಗಳನ್ನು ಸ್ಪರ್ಶಿಸುವುದನ್ನು ಕಾಣಬಹುದು.


“ಅಸಾಧ್ಯ ಮತ್ತು ಸಾಧ್ಯ ನಡುವಿನ ವ್ಯತ್ಯಾಸವು ಆ ವ್ಯಕ್ತಿಯ ನಿರ್ಧಾರದಲ್ಲಿದೆ. ನನಗೆ ಸಾಧ್ಯ ಎಂಬುದನ್ನು ತನ್ನ ಧ್ಯೇಯವಾಕ್ಯವಾಗಿ ಆಯ್ಕೆ ಮಾಡಿದ ಹರ್ಷದ್ ಗೋಥಂಕರ್ ಈ ವಾಕ್ಯಕ್ಕೆ ಅಪ್ರತಿಮ ಉದಾಹರಣೆ. ಯಾವುದೇ ವಿಚಾರಗಳನ್ನು ಸಾಧ್ಯವಾಗಿಸಲು ಪ್ರೀತಿಯೇ ಸ್ಪೂರ್ತಿ ಎಂಬುದನ್ನು ನಾವು ಆತನಿಂದ ಕಲಿಯಬಹುದು ಎಂಬ ಅಡಿಬರಹದಡಿ ಈ ವಿಡಿಯೋವನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: ಇವರ ಮನೆಯಲ್ಲಿ 100 ಹಸುಗಳು, ಎಲ್ಲವಕ್ಕೂ ಮಧ್ಯಾಹ್ನ ಬಿಸಿಯೂಟ - ಹಬ್ಬಕ್ಕೆ ಹೋಳಿಗೆ ಊಟ..ಇದು ಗೋ ಪ್ರೀತಿ!

ಈ ವಿಡಿಯೋವನ್ನು 106 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹದಿಮೂರು ಸಾವಿರಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಜನರು ಗೋಥಂಕರ್ ಅವರ ಡ್ರೈವ್ ಮತ್ತು ದೃಢ ನಿರ್ಧಾರವನ್ನು ಶ್ಲಾಘಿಸಿದರು, ಆದರೆ ಇತರರು ತೆಂಡೂಲ್ಕರ್ ಅವರು ಈ ವ್ಯಕ್ತಿಯ ಕಥೆಯನ್ನು ಬೆಳಕಿಗೆ ತಂದಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.


ಒಬ್ಬ ಬಳಕೆದಾರರು, ”ಅದ್ಭುತ. ಪ್ರತಿಭೆ ಮಾತ್ರ ಅಸಾಧಾರಣತೆಯನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂಬುದಕ್ಕೆ ಇದು ಒಂದು ಪುರಾವೆಯಾಗಿದೆ. ಅಭ್ಯಾಸ, ಅಸಾಧಾರಣವಾದ ಕಠಿಣ ಪರಿಶ್ರಮ, ತಮ್ಮನ್ನು ತಾವು ಸುಧಾರಿಸಿಕೊಳ್ಳುವ ಛಲ ಅತ್ಯಗತ್ಯ ಎಂದು ಹೇಳಿದ್ದಾರೆ. ಇನ್ನೊಬ್ಬರು ”ಜೀವನಕ್ಕೆ ಪ್ರೇರಣೆ! ಒಟ್ಟು ಗೌರವ ಕ್ಯಾರಮ್ ಆಟವನ್ನು ಪ್ಯಾರಾ ಒಲಂಪಿಕ್‍ಗೆ ಸೇರಿಸಿದರೆ ಇವರು ಭಾರತಕ್ಕೆ ಬಂಗಾರದ ಪದಕ ತಂದುಕೊಡುತ್ತಾರೆ ಎಂದು ಹೇಳಿದ್ದಾರೆ. ಇದಲ್ಲದೇ ಸಚಿನ್ ಅವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿ ಮತ್ತೊಂದು ಘಟನೆ ನಡೆದಿದೆ. ಅಂದರೆ ಒಬ್ಬ ಯುವತಿಯ ಜೀವನದ ಕನಸನ್ನು ನನಸಾಗಿಸಲು ಆ ಯುವತಿ ಹಾಗೂ ಕುಟುಂಬದ ಜೊತೆ ನಿಂತಿದ್ದಾರೆ.


ಇದನ್ನೂ ಓದಿ: Afghanistan ನಲ್ಲಿ ಷರಿಯಾ ಕಾನೂನು: ಹೆಣ್ಮಕ್ಕಳು ಶಾಲೆಗೆ ಹೋಗುವಂತಿಲ್ಲ, ಸಾಯುತ್ತಿದ್ರೂ ಪುರುಷ ವೈದ್ಯರ ಬಳಿ ಹೋಗುವಂತಿಲ್ಲ..ಹೇಗಿರಲಿದೆ ಅವರ ಬದುಕು?

ನಿಜ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಝಾರಿ ಗ್ರಾಮದ ಬಡ ಯುವತಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಹಣಕಾಸಿನ ನೆರವು ಒದಗಿಸುವುದಾಗಿ ಖುದ್ದಾಗಿ ಸಚಿನ್ ತೆಂಡೂಲ್ಕರ್ ಅವರೇ ಒಪ್ಪಿದ್ದಾರೆ.


ತಮ್ಮ ಗ್ರಾಮದ ಮೊದಲ ವೈದ್ಯೆ ಎಂದು ಕರೆಸಿಕೊಳ್ಳುವುದು ಯುವತಿ ದೀಪ್ತಿ ವಿಶ್ವಾಸ್ ಕನಸು. ಈ ಕನಸಿಗೆ ನೀರೆರುದು ಹೆಮ್ಮರವಾಗಿ ಬೆಳೆಸಿ ನಾಲ್ಕರು ಜನಕ್ಕೆ ಸೇವೆ ಮಾಡುವಂತಹ ಯುವತಿಯ ಆಸೆಗೆ ಇಂಡಿಯಾ ದಿಗ್ಗಜ ಸಚಿನ್ ತೆಂಡೂಲ್ಕರ್ ಬೆಂಬಲವಾಗಿ ನಿಂತಿದ್ದಾರೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

Published by:Soumya KN
First published: