ಮಾಸ್ಟರ್ ಬ್ಲಾಸ್ಟರ್ ಅಂತಾನೆ ಖ್ಯಾತಿ ಪಡೆದಿರುವ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಸದಾ ಒಂದಲ್ಲ ಒಂದು ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ ಅಂತ ಹೇಳಬಹುದು. ಇತ್ತೀಚೆಗೆ ಅವರು ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್ ಅವರ ಪುಣ್ಯತಿಥಿಯಂದು ಹೃತ್ಪೂರ್ವಕ ಸಂದೇಶವನ್ನು ಪೋಸ್ಟ್ (Post) ಮಾಡಿದ್ದರು. ವಾರ್ನ್ ಮಾರ್ಚ್ 4, 2022 ರಂದು ಹೃದಯಾಘಾತದಿಂದ (Heart Attack) ನಿಧನರಾಗಿದ್ದರು. ವಾರ್ನ್ ಅವರ ಮೊದಲ ಪುಣ್ಯತಿಥಿಯಂದು, ಸಚಿನ್ ಅವರು ದಿವಂಗತ ಲೆಗ್ ಸ್ಪಿನ್ನರ್ ಗೆ ಟ್ವಿಟ್ಟರ್ ನಲ್ಲಿ ಹೃದಯಸ್ಪರ್ಶಿ ಶ್ರದ್ಧಾಂಜಲಿಯನ್ನು ಬರೆದಿದ್ದಾರೆ.
"ನಾವು ಮೈದಾನದಲ್ಲಿ ಕೆಲವು ಸ್ಮರಣೀಯ ಸಂದರ್ಭಗಳನ್ನು ನೋಡಿದ್ದೇವು, ಆದರೆ ಮೈದಾನದ ಹೊರಕ್ಕೆ ಸಹ ನಾವಿಬ್ಬರೂ ಅನೇಕ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದೇವೆ. ನಾನು ನಿಮ್ಮನ್ನು ಶ್ರೇಷ್ಠ ಕ್ರಿಕೆಟಿಗನಾಗಿ ಮಾತ್ರವಲ್ಲದೆ ಉತ್ತಮ ಸ್ನೇಹಿತನಾಗಿಯೂ ಮಿಸ್ ಮಾಡಿಕೊಳ್ಳುತ್ತೇನೆ. ನಿಮ್ಮ ಹಾಸ್ಯ ಪ್ರಜ್ಞೆ ಮತ್ತು ವರ್ಚಸ್ಸಿನಿಂದ ನೀವು ಸ್ವರ್ಗವನ್ನು ಹಿಂದೆಂದಿಗಿಂತಲೂ ಹೆಚ್ಚು ಆಕರ್ಷಕ ಸ್ಥಳವನ್ನಾಗಿ ಮಾಡುತ್ತಿದ್ದೀರಿ ಅಂತ ನನಗೆ ಖಾತ್ರಿಯಿದೆ, ವಾರ್ನಿ" ಎಂದು ಸಚಿನ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈಗ ಸಚಿನ್ ಮತ್ತೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ನೋಡಿ. ಲೆಜೆಂಡರಿ ಕ್ರಿಕೆಟಿಗ ಸಾಮಾಜಿಕ ಮಾಧ್ಯಮದಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಅದನ್ನು ಯಾರಾದರೂ ನೋಡಿದರೆ 2001ರಲ್ಲಿ ಬಿಡುಗಡೆಯಾದ ‘ದಿಲ್ ಚಾಹ್ತಾ ಹೈ’ ಸಿನೆಮಾದ ಒಂದು ದೃಶ್ಯದಂತೆಯೇ ಇದೆ ಅಂತ ಹೇಳುವುದು ಗ್ಯಾರೆಂಟಿ.
ಸಚಿನ್ ಹಂಚಿಕೊಂಡಿರುವ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್
ಈಗ ವೈರಲ್ ಆಗಿರುವ ಪೋಸ್ಟ್ ಅನ್ನು ಸಚಿನ್ ತೆಂಡೂಲ್ಕರ್ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಮತ್ತು ಯುವರಾಜ್ ಸಿಂಗ್ ಅವರೊಂದಿಗೆ ಸಚಿನ್ ಸಹ ಇರುವುದನ್ನು ನಾವು ನೋಡಬಹುದು. ಈ ಮೂವರು ಗೋವಾದಲ್ಲಿ ‘ದಿಲ್ ಚಾಹ್ತಾ ಹೈ’ ಕ್ಷಣವನ್ನು ಮರು ಸೃಷ್ಟಿಸಿದರು ಅಂತಾನೆ ಹೇಳಬಹುದು. ಸಚಿನ್ ಮತ್ತು ಅನಿಲ್ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರೆ, ಯುವರಾಜ್ ಫ್ಲೋರಲ್ ಶರ್ಟ್ ಮತ್ತು ಶಾರ್ಟ್ಸ್ ನಲ್ಲಿ ತುಂಬಾನೇ ಕೂಲ್ ಆಗಿ ಕಾಣುತ್ತಿದ್ದರು.ಈ ಫೋಟೋಗೆ 15 ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಗಳು ಸಿಕ್ಕಿವೆ ಮತ್ತು ಸುಮಾರು 3000ಕ್ಕೂ ಹೆಚ್ಚು ಕಾಮೆಂಟ್ ಗಳು ಸಹ ಬಂದಿವೆ.
ಇದನ್ನೂ ಓದಿ: ನಿಸರ್ಗದ ನಡುವೆ 7 ಎಕ್ರೆ ಮನೆ, ಬೈಕ್ ಕಾರುಗಳಿಗಾಗೇ ಇದೆ ಎರಡಂತಸ್ತಿನ ಬಿಲ್ಡಿಂಗ್! ಇದು ಧೋನಿ ಮನೆಯಲ್ಲ, 'ಕೈಲಾಸಪತಿ' ಕೋಟೆ!
‘ದಿಲ್ ಚಾಹ್ತಾ ಹೈ’ ಚಿತ್ರದಲ್ಲಿ ಬಾಲಿವುಡ್ ನಟ ಅಮೀರ್ ಖಾನ್, ಸೈಫ್ ಅಲಿ ಖಾನ್, ಅಕ್ಷಯ್ ಖನ್ನಾ ಮತ್ತು ನಟಿಯರಾದ ಪ್ರೀತಿ ಜಿಂಟಾ ಮತ್ತು ಡಿಂಪಲ್ ಕಪಾಡಿಯಾ ನಟಿಸಿದ್ದರು. ಇದನ್ನು ಫರ್ಹಾನ್ ಅಖ್ತರ್ ಅವರು ನಿರ್ದೇಶಿಸಿದ್ದರು.
ಫೋಟೋಗೆ ಏನಂತ ಶೀರ್ಷಿಕೆ ಬರೆದಿದ್ದಾರೆ ನೋಡಿ ಸಚಿನ್?
"ಗೋವಾದಲ್ಲಿ ನಮ್ಮ ದಿಲ್ ಚಾಹ್ತಾ ಹೈ ಕ್ಷಣ! ಇದರಲ್ಲಿ ಆಕಾಶ್, ಸಮೀರ್ ಮತ್ತು ಸಿದ್ ಯಾರು ಎಂದು ನೀವು ಊಹಿಸಿ" ಎಂದು ಕ್ರಿಕೆಟಿಗ ತಮ್ಮ ಪೋಸ್ಟ್ ಗೆ ಶೀರ್ಷಿಕೆಯನ್ನು ನೀಡಿದ್ದಾರೆ.
ಇದನ್ನು ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ಸೂಪರ್" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ನಮ್ಮ ಬಾಲ್ಯದ ಹೀರೋಗಳು" ಎಂದು ಕಾಮೆಂಟ್ ಮಾಡಿದ್ದಾರೆ. ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್ ಕೂಡ ಸಚಿನ್ ಅವರ ಈ ಪೋಸ್ಟ್ ಗೆ ಪ್ರತಿಕ್ರಿಯಿಸಿ ಆಕಾಶ್, ಸಮೀರ್ ಮತ್ತು ಸಿದ್ ಚೆನ್ನಾಗಿದ್ದಾರೆ ಅಂತ ಕಾಮೆಂಟ್ ಮಾಡಿದ್ದಾರೆ.
ಹಲವು ಬಳಕೆದಾರರು ಕೆಲ ಪ್ರೀತಿ ತುಂಬಿದ ಎಮೋಜಿಗಳನ್ನು ಕಳುಹಿಸುವ ಮೂಲಕ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ