ರೊನಾಲ್ಡೊ, ಮೆಸ್ಸಿ ನಂತರ ಸಚಿನ್ ವಿಶ್ವದ ಮೂರನೇ ಅತಿ ಹೆಚ್ಚು ಮೆಚ್ಚುಗೆ ಪಡೆದ ಕ್ರೀಡಾಪಟು.!

ಭಾರತೀಯ ಕ್ರಿಕೆಟ್‌ನ ಮಾಜಿ ನಾಯಕ ಮತ್ತು ಸ್ಟಾರ್ ಆಟಗಾರ ಸಚಿನ್ ತೆಂಡೂಲ್ಕರ್ ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಮತ್ತೊಂದು ಬಾರಿ ತೋರಿಸಿಕೊಟ್ಟಿದ್ದಾರೆ.

ಸಚಿನ್

ಸಚಿನ್

  • Share this:


‌ಇಡೀ ವಿಶ್ವದಲ್ಲಿ ಯಾವುದೇ ದೇಶಕ್ಕೆ(Country) ಹೋದರೂ ಅಲ್ಲಿ ಕೆಲವು ಜನಪ್ರಿಯ ಕ್ರೀಡಾಪಟುಗಳಿಗೆ (Most popular) ಅವರದ್ದೇ ಆದಂತಹ ಅಭಿಮಾನಿಗಳು (Own fans) ಇದ್ದೇ ಇರುತ್ತಾರೆ. ಅದರಲ್ಲೂ ವಿಶ್ವದಲ್ಲಿಯೇ ಅತಿ ಹೆಚ್ಚು ಇಷ್ಟ ಪಡುವ ಕ್ರೀಡೆಗಳು ಎಂದರೆ ಕ್ರಿಕೆಟ್ ಮತ್ತು ಫುಟ್ಬಾಲ್. (Cricket and Football) ವಿಶ್ವಾದ್ಯಂತ ಈ 2 ಕ್ರೀಡೆಯ ಕ್ರೀಡಾಪಟುಗಳಿಗೆ ಅಭಿಮಾನಿಗಳು ಇದ್ದಾರೆ ಎಂದು ಹೇಳಬಹುದು. ಕ್ರಿಕೆಟ್ ಆಟದಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) ಹೇಗೋ ಹಾಗೆಯೇ ಫುಟ್ಬಾಲ್ ಆಟದಲ್ಲಿಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ( Cristiano Ronaldo and Lionel Messi) ಅಷ್ಟೇ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಜನಪ್ರಿಯತೆಗೆ ಹಿಡಿದ ಕೈಗನ್ನಡಿ
ಈಗೇಕೆ ಈ ಮೂವರು ಜನಪ್ರಿಯ ಕ್ರೀಡಾಪಟುಗಳ ಬಗ್ಗೆ ನಾವು ಮಾತಾಡುತ್ತಿದ್ದೇವೆ ಎಂದು ನಿಮಗೆ ಪ್ರಶ್ನೆ ಮೂಡಬಹುದು. ಭಾರತೀಯ ಕ್ರಿಕೆಟ್‌ನ ಮಾಜಿ ನಾಯಕ ಮತ್ತು ಸ್ಟಾರ್ ಆಟಗಾರ ಸಚಿನ್ ತೆಂಡೂಲ್ಕರ್ ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದು ಮತ್ತೊಂದು ಬಾರಿ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: Dog Playing Cricket: ಶ್ವಾನದ ವಿಕೆಟ್ ಕೀಪಿಂಗ್ ಸಾಮರ್ಥ್ಯ ಕಂಡು ಬೆರಗಾದ ಸಚಿನ್ ತೆಂಡೂಲ್ಕರ್

ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನ
ಹೌದು.. ಸಚಿನ್ ತೆಂಡೂಲ್ಕರ್ ವಿಶ್ವದ ಮೂರನೇ ಅತಿ ಹೆಚ್ಚು ಮೆಚ್ಚುಗೆ ಪಡೆದ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಸಚಿನ್ ನಂತರ ಭಾರತ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಖ್ಯಾತ ಫುಟ್ಬಾಲ್ ತಾರೆಗಳಾದ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಮೊದಲ 2 ಸ್ಥಾನಗಳನ್ನು ಹೊಂದಿದ್ದಾರೆ. ಈ ಇಬ್ಬರು ಫುಟ್ಬಾಲ್ ಆಟಗಾರರಿಗೆ ತುಂಬಾ ಜನ ಅಭಿಮಾನಿಗಳಿದ್ದು ಇವರು ಪಡೆದ ಸ್ಥಾನಗಳು ಇವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಬಹುದು.

ಬಿಲ್ ಗೇಟ್ಸ್ ಮತ್ತು ಕ್ಸಿ ಜಿನ್‌ಪಿಂಗ್ ಸಹ ಇದ್ದಾರೆ
ಬ್ರಿಟನ್ನಿನ ಮಾರುಕಟ್ಟೆ ಸಂಶೋಧನೆ ಮತ್ತು ದತ್ತಾಂಶ ವಿಶ್ಲೇಷಣೆ ಸಂಸ್ಥೆಯಾದ ಯೂಗೋವ್ ಸಮೀಕ್ಷೆಯೊಂದನ್ನು ನಡೆಸಿದ್ದು, ಭಾರತೀಯ ಕ್ರಿಕೆಟ್ ಮಾಜಿ ನಾಯಕ ಮತ್ತು ಪ್ರಸ್ತುತ ಭಾರತೀಯ ಟೆಸ್ಟ್ ಕ್ರಿಕೆಟ್ ನಾಯಕ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿರನ್ನು ರೊನಾಲ್ಡೊ ಮತ್ತು ಮೆಸ್ಸಿ ಹಿಂದಿಕ್ಕಿದ್ದಾರೆ ಎಂದು ಹೇಳಿದೆ.ಬ್ರಿಟಿಷ್ ಸಂಸ್ಥೆಯ ಪ್ರಕಾರಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಬೇರೆ ಕ್ಷೇತ್ರಗಳಲ್ಲಿ ಹೆಚ್ಚು ಮೆಚ್ಚುಗೆ ಪಡೆದ ವ್ಯಕ್ತಿಗಳಾಗಿದ್ದಾರೆ ಮತ್ತು ಇವರ ನಂತರದಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಮಾಲೀಕರಾದ ಬಿಲ್ ಗೇಟ್ಸ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸಹ ಪಟ್ಟಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ 8ನೇ ಸ್ಥಾನ
ಈ ಪಟ್ಟಿಯಲ್ಲಿ ಭಾರತದ ಕೆಲವು ಪ್ರಮುಖ ವ್ಯಕ್ತಿಗಳೂ ಇರುವುದು ತುಂಬಾನೇ ವಿಶೇಷವಾಗಿದೆ. ಈ ಪಟ್ಟಿಯಲ್ಲಿ ಭಾರತದ ಪ್ರಧಾನಮಂತ್ರಿ ಆದಂತಹ ನರೇಂದ್ರ ಮೋದಿ 8ನೇ ಸ್ಥಾನದಲ್ಲಿದ್ದಾರೆ. ಖ್ಯಾತ ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಅಮಿತಾಭ್ ಬಚ್ಚನ್ ಕ್ರಮವಾಗಿ 14 ಮತ್ತು 15ನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯವಾಗಿದೆ.

ಇದನ್ನೂ ಓದಿ: Half Marathon- ಡಿಸೆಂಬರ್ 19ಕ್ಕೆ ಮುಂಬೈ ಹಾಫ್ ಮ್ಯಾರಾಥಾನ್; ಶುಭಹಾರೈಸಿದ ಸಚಿನ್ ತೆಂಡೂಲ್ಕರ್

 ಸಚಿನ್ ಮೇಲಿನ ಸ್ಥಾನ
ವಿರಾಟ್ ಕೊಹ್ಲಿಗಿಂತಲೂ ಮತ್ತು ಬಾಲಿವುಡ್ ಸೂಪರ್‌ ಸ್ಟಾರ್‌ಗಳಾದ ಅಮಿತಾಭ್ ಬಚ್ಚನ್ ಮತ್ತು ಶಾರುಖ್ ಖಾನ್ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತಲೂ ಪಟ್ಟಿಯಲ್ಲಿ ಭಾರತ ರತ್ನ ಪುರಸ್ಕೃತರಾದ ಸಚಿನ್ ಮೇಲಿನ ಸ್ಥಾನದಲ್ಲಿದ್ದಾರೆ ಎಂದು ಹೇಳಬಹುದು.

Published by:vanithasanjevani vanithasanjevani
First published: