• Home
  • »
  • News
  • »
  • sports
  • »
  • SA vs NED: ನೆದರ್ಲ್ಯಾಂಡ್ಸ್ ವಿರುದ್ಧ ಸೋತ ಆಫ್ರಿಕಾ, ಸೆಮೀಸ್​ಗೆ ಟೀಂ ಇಂಡಿಯಾ ಎಂಟ್ರಿ

SA vs NED: ನೆದರ್ಲ್ಯಾಂಡ್ಸ್ ವಿರುದ್ಧ ಸೋತ ಆಫ್ರಿಕಾ, ಸೆಮೀಸ್​ಗೆ ಟೀಂ ಇಂಡಿಯಾ ಎಂಟ್ರಿ

ನೆದರ್ಲ್ಯಾಂಡ್ಸ್ ತಂಡಕ್ಕೆ ಜಯ

ನೆದರ್ಲ್ಯಾಂಡ್ಸ್ ತಂಡಕ್ಕೆ ಜಯ

SA vs NED: ಇಂದು ನಡೆದ ಟಿ20 ವಿಶ್ವಕಪ್‌ನಲ್ಲಿ (T20 WC 2022) ನೆದರ್ಲೆಂಡ್ಸ್ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆ ಮಾಡಿದೆ. ನೆದರ್ಲೆಂಡ್ಸ್  ತಂಡವು ದಕ್ಷಿಣ ಆಫ್ರಿಕಾವನ್ನು (SA vs NED)  13 ರನ್‌ಗಳಿಂದ ಸೋಲಿಸಿತು.

  • Share this:

ಇಂದು ನಡೆದ ಟಿ20 ವಿಶ್ವಕಪ್‌ನಲ್ಲಿ (T20 WC 2022) ನೆದರ್ಲೆಂಡ್ಸ್ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆ ಮಾಡಿದೆ. ನೆದರ್ಲೆಂಡ್ಸ್  ತಂಡವು ದಕ್ಷಿಣ ಆಫ್ರಿಕಾವನ್ನು (SA vs NED)  13 ರನ್‌ಗಳಿಂದ ಸೋಲಿಸಿತು. ಸೋಲಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇದರೊಂದಿಗೆ ಟೀಂ ಇಂಡಿಯಾ (Team India) ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಸ್ವಲ್ಪ ಸಮಯದ ನಂತರ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮುಖಾಮುಖಿ ಆಗಲಿದೆ. ಈ ಪಂದ್ಯವನ್ನು ಗೆಲ್ಲುವ ತಂಡವು ಸೆಮಿಫೈನಲ್ ತಲುಪಿದ ಗುಂಪಿನಿಂದ ಎರಡನೇ ತಂಡವಾಗಲಿದೆ. 4-4 ಪಂದ್ಯಗಳಲ್ಲಿ ಇಬ್ಬರೂ 4-4 ಅಂಕಗಳನ್ನು ಹೊಂದಿದ್ದಾರೆ. ಪಂದ್ಯದಲ್ಲಿ ಮೊದಲು ಆಡಿದ ನೆದರ್ಲೆಂಡ್ಸ್ 4 ವಿಕೆಟ್‌ಗೆ 158 ರನ್‌ಗಳ ಉತ್ತಮ ಸ್ಕೋರ್ ಗಳಿಸಿತು. ಕಾಲಿನ್ ಅಕರ್ಮನ್ 26 ಎಸೆತಗಳಲ್ಲಿ 41 ರನ್ ಗಳಿಸಿದರು. ಉತ್ತರವಾಗಿ ದಕ್ಷಿಣ ಆಫ್ರಿಕಾ ತಂಡ 8 ವಿಕೆಟ್‌ಗೆ 145 ರನ್ ಗಳಿಸಲಷ್ಟೇ ಶಕ್ತವಾಯಿತು.


ಸೆಮೀಸ್​ಗೆ ಭಾರತ ಎಂಟ್ರಿ, ಪಾಕ್​ ಕನಸು ಇನ್ನೂ ಜೀವಂತ:


ಇನ್ನು, ನೆದರ್ಲೆಂಡ್ಸ್ ವರಿದ್ಧ ದಕ್ಷಿಣ ಆಫ್ರಿಕಾ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಅಲ್ಲದೇ ಆಫ್ರಿಕಾಗೆ ಈಗಾಗಲೇ 5 ಪಂದ್ಯಗಳೂ ಮುಗಿದಿದ್ದು, ಕೇವಲ 5 ಅಂಕಗಳನ್ನು ಹೊಂದಿರುವ ಕಾರಣ ಇಂದಿನ ಪಾಕಿಸ್ತಾನ ಮತ್ತು ಬಾಂಗ್ಲಾ ಪಂದ್ಯದಲ್ಲಿ ಯಾವುದೇ ತಂಡ ಗೆಲುವು ಸಾಧಿಸಿದರೂ 6 ಅಂಕಗಳನ್ನು ಪಡೆದು 2 ಅಥವಾ 1ನೇ ಸ್ಥಾನಕ್ಕೇರುವ ಮೂಲಕ ಸೆಮೀಸ್​ಗೆ ಹಾರಲಿದೆ. ಅದರಂತೆ ಭಾರತ ತಂಡ ಇಂದು ಜಿಂಬಾಬ್ವೆ ವಿರುದ್ಧ ಸೋತರೂ ನೇರವಾಗಿ ಸೆಮೀಸ್​ಗೆ ತಲುಪಲಿದೆ. ಹೀಗಾಗಿ ಬಾಂಗ್ಲಾ ಮತ್ತು ಪಾಕ್​ಗೆ ಸೆಮೀಸ್​ಗೆ ತಲುಪುವ ಅವಕಾಶವಿದೆ.



ಮಹತ್ವದ ಪಂದ್ಯದಲ್ಲಿ ಎಡವಿದ ಆಫ್ರಿಕಾ:


ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. 39 ರನ್‌ಗಳಿಗೆ ತಂಡ ಆರಂಭಿಕರಿಬ್ಬರ ವಿಕೆಟ್‌ ಕಳೆದುಕೊಂಡಿತು. ಕ್ವಿಂಟನ್ ಡಿ ಕಾಕ್ 13 ಮತ್ತು ನಾಯಕ ಟೆಂಬಾ ಬವುಮಾ ಕೇವಲ 20 ರನ್ ಗಳಿಸಲಷ್ಟೇ ಶಕ್ತರಾದರು. ಪ್ರಸಕ್ತ ಟಿ20 ವಿಶ್ವಕಪ್ ನಲ್ಲಿ ಮೊದಲ ಶತಕ ಸಿಡಿಸಿರುವ ರಿಲೆ ರುಸ್ಸೋಗೆ ಅದ್ಭುತ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಅವರೂ 25 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಏಡೆನ್ ಮಾರ್ಕ್ರಾಮ್ ಮತ್ತು ಡೇವಿಡ್ ಮಿಲ್ಲರ್ ಇಬ್ಬರೂ 15-15 ರನ್ ಗಳಿಸಿ ಔಟಾದರು. 112 ರನ್ ಗಳಿಸುವಷ್ಟರಲ್ಲಿ ತಂಡ 5 ವಿಕೆಟ್ ಕಳೆದುಕೊಂಡಿತು.



ಮಿಲ್ಲರ್ ಔಟಾದ ನಂತರ, ಹೆನ್ರಿಕ್ ಕ್ಲಾಸೆನ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಅವರಿಗೂ ಅದ್ಭುತವಾದುದನ್ನು ಮಾಡಲು ಸಾಧ್ಯವಾಗಲಿಲ್ಲ. 18 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. ಇದರೊಂದಿಗೆ ತಂಡದ ಭರವಸೆಯೂ ಕೊನೆಗೊಂಡಿತು. ಕೇಶವ್ ಮಹಾರಾಜ್ 13 ರನ್ ಗಳಿಸಿ ಔಟಾದರು. ಕಗಿಸೊ ರಬಾಡ 9 ಮತ್ತು ಎನ್ರಿಕ್ ನಾರ್ಸಿಯಾ 4 ರನ್ ಗಳಿಸಿ ಅಜೇಯರಾಗಿ ಉಳಿದರು. ವೇಗಿ ಬ್ರೆಂಡನ್ ಗ್ಲೋವರ್ 2 ಓವರ್ ಗಳಲ್ಲಿ 9 ರನ್ ನೀಡಿ 3 ವಿಕೆಟ್ ಪಡೆದರು.


ಇದನ್ನೂ ಓದಿ: ENG vs SL: ಟಿ20 ವಿಶ್ವಕಪ್‌ನಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಔಟ್, ಸೆಮೀಸ್​ಗೆ ಎಂಟ್ರಿಕೊಟ್ಟ ಆಂಗ್ಲರು


 ಬಾಂಗ್ಲಾದೇಶ ಬ್ಯಾಟಿಂಗ್​ ಆಯ್ಕೆ:


ಇಂದಿನ 2ನೇ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪಂದ್ಯದ ಟಾಸ್​ ಈಗಾಗಲೇ ಆಗಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ತಂಡವು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಸೆಮಿಫೈನಲ್​ಗೆ ಎಂಟ್ರಿ ನೀಡಲಿದೆ.

Published by:shrikrishna bhat
First published: