news18-kannada Updated:December 18, 2020, 3:49 PM IST
ಸಾಂದರ್ಭಿಕ ಚಿತ್ರ
ಮುಂದಿನ ಎರಡು ಒಲಿಂಪಿಕ್ಸ್ನಲ್ಲಿ ರಾಷ್ಟ್ರದ ಹೆಸರನ್ನು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಬಳಸದಂತೆ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ ರಷ್ಯಾಗೆ ನಿಷೇಧ ಹೇರಿದೆ. ಹೀಗಾಗಿ ಮುಂಬರುವ ಟೋಕಿಯೊ ಒಲಿಂಪಿಕ್ಸ್, ಬೀಜಿಂಗ್ನಲ್ಲಿ ನಡೆಯುವ 2022 ರ ಕ್ರೀಡಾಕೂಟದಲ್ಲಿ ಹಾಗೂ ಕತಾರ್ನಲ್ಲಿ ನಡೆಯಲಿರುವ 2022ರ ವಿಶ್ವಕಪ್ನಲ್ಲಿ ರಷ್ಯಾದ ಹೆಸರನ್ನು ಬಳಸುವಂತಿಲ್ಲ. ಇದಾಗ್ಯೂ ರಷ್ಯಾದ ಕ್ರೀಡಾಪಟುಗಳು ಮತ್ತು ತಂಡಗಳಿಗೆ ಸ್ವತಂತ್ರವಾಗಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
2014ರಲ್ಲಿ ನಡೆದ ಸೋಚಿ ವಿಂಟರ್ ಒಲಿಂಪಿಕ್ಸ್ನಲ್ಲಿ ರಷ್ಯಾದ ಹೆಚ್ಚಿನ ಕ್ರೀಡಾಪಟುಗಳು ಉದ್ದೀಪನ ಸೇವಿಸಿದ್ದರು. ಇದನ್ನು ನಿಯಂತ್ರಿಸಲು ಅಲ್ಲಿನ ಆ್ಯಂಟಿ ಡೋಪಿಂಗ್ ಏಜೆನ್ಸಿ ರುಸಾಡ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ (ಸಿಎಎಸ್) ಹಾಗೂ ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ (ವಾಡಾ) ವಿಚಾರಣೆ ನಡೆಸಿತ್ತು. ಅಂತಿಮವಾಗಿ ಮುಂದಿನ 2 ವರ್ಷಗಳ ಕಾಲ ಪ್ರಮುಖ ಕ್ರೀಡಾಕೂಟದಲ್ಲಿ ತನ್ನ ರಾಷ್ಟ್ರದ ಹೆಸರನ್ನು ಬಳಸದಂತೆ ರಷ್ಯಾಗೆ ನಿಷೇಧ ಹೇರಲಾಗಿದೆ.
ಈ ವರ್ಷದ ಆರಂಭದಲ್ಲಿ ರಷ್ಯಾದ 298 ಕ್ರೀಡಾಪಟುಗಳನ್ನು ಡೋಪಿಂಗ್ ತನಿಖೆಗೆ ಒಳಪಡಿಸಲಾಗಿತ್ತು. "ಆಪರೇಷನ್ ಲಿಮ್ಸ್" ಹೆಸರಿನ ಕೋಡ್, ವಾಡಾದ ಗುಪ್ತಚರ ಮತ್ತು ತನಿಖಾ ಸಮಿತಿಯು ನಡೆಸಿದ ತನಿಖೆಯಿಂದ ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವಿಸಿರುವುದು ಪತ್ತೆಯಾಗಿತ್ತು. ಇದೇ ಕಾರಣಕ್ಕೆ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ ಮುಂದಿನ ಕ್ರೀಡಾಕೂಟಗಳಲ್ಲಿ ರಷ್ಯಾ ಹೆಸರು, ಧ್ವಜ ಹಾಗೂ ರಾಷ್ಟ್ರಗೀತೆಯನ್ನು ಬಳಸುವಂತಿಲ್ಲ ಎಂದು ಸೂಚಿಸಿದೆ.
Published by:
zahir
First published:
December 18, 2020, 3:49 PM IST