ದಾಖಲೆ ಮೇಲೆ ದಾಖಲೆ: ಸಾಧನೆಯ ಶಿಖರವನ್ನೇರುತ್ತಿರುವ ವಿರಾಟ್ ಕೊಹ್ಲಿ

news18
Updated:August 3, 2018, 6:05 PM IST
ದಾಖಲೆ ಮೇಲೆ ದಾಖಲೆ: ಸಾಧನೆಯ ಶಿಖರವನ್ನೇರುತ್ತಿರುವ ವಿರಾಟ್ ಕೊಹ್ಲಿ
news18
Updated: August 3, 2018, 6:05 PM IST
ನ್ಯೂಸ್ 18 ಕನ್ನಡ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆದ ಬಳಿಕ ತನ್ನ ಸಾಧನೆಯ ಶಿಖರವನ್ನು ಇನ್ನಷ್ಟು ಏರುತ್ತಿದ್ದಾರೆ. ಈ ವರೆಗೆ ಟೆಸ್ಟ್​ ಪಂದ್ಯದಲ್ಲಿ ಆಂಗ್ಲರ ನಾಡಲ್ಲಿ ಒಂದೇ ಒಂದು ಶತಕ ಬಾರಿಸದ ಕೊಹ್ಲಿ ಮೊದಲ ಟೆಸ್ಟ್​ನಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ತಾನು ಏನು ಎಂಬುದನ್ನು ಸಾಬೀತು ಪಡಿಸಿದ್ದಾರೆ.2014ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ, ಇಲ್ಲಿ ಕೊಹ್ಲಿ 5 ಟೆಸ್ಟ್​ ಪಂದ್ಯಗಳಲ್ಲಿ ಒಟ್ಟು ಗಳಿಸಿದ್ದು ಕೇವಲ 134 ರನ್​. ಇದರಲ್ಲಿ ಕೊಹ್ಲಿ ಗರಿಷ್ಠ ಸ್ಕೋರ್ 39 ಆಗಿತ್ತು. ಆದರೆ ಈಗೀನ ಇಂಗ್ಲೆಂಡ್ ಪ್ರವಾಸದಲ್ಲಿ ಮೊದಲ ಟೆಸ್ಟ್​ನಲ್ಲೇ 149 ರನ್ ಸಿಡಿಸಿದ್ದಾರೆ. 4 ವರ್ಷದ ಹಿಂದಿನ 5 ಪಂದ್ಯಗಳ ಒಟ್ಟು ಸ್ಕೋರ್ ಅನ್ನು ಕೊಹ್ಲಿ ಇಲ್ಲಿ ಒಂದೇ ಇನ್ನಿಂಗ್ಸ್​ನಲ್ಲಿ ಮಾಡಿ ಸಾಧನೆ ಮೆರೆದಿದ್ದಾರೆ.ಟೀಂ ಇಂಡಿಯಾದ ನಾಯಕರ ಸಾಲಿನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಟೆಸ್ಟ್​ ಪಂದ್ಯದಲ್ಲಿ ಗರಿಷ್ಠ ರನ್ ಗಳಿಸಿದ ಪಟ್ಟಿಯಲ್ಲಿ ಸದ್ಯ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಮೊದಲನೇ ಸ್ಥಾನದಲ್ಲಿ 179 ರನ್ ಬಾರಿಸಿ ಮೊಹಮ್ಮದ್ ಅಜರುದ್ದೀನ್ ಇದ್ದಾರೆ.


Loading...

ವಿದೇಶದಲ್ಲೂ ಕೊಹ್ಲಿ ದಾಖಲೆ ಸದ್ಯ ಮುಂದುವರೆಯುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ 8 ಟೆಸ್ಟ್ ಪಂದ್ಯವನ್ನಾಡಿದ್ದು 992 ರನ್ ಗಳಿಸಿದ್ದಾರೆ. ಇದರಲ್ಲಿ 169 ಇವರ ಗರಿಷ್ಠ ಸ್ಕೋರ್ ಆಗಿದೆ. ವೆಸ್ಟ್​ ಇಂಡೀಸ್ ವಿರುದ್ಧ ಅವರ ನೆಲದಲ್ಲೇ ಕೊಹ್ಲಿ ದ್ವಿಶತಕ ಬಾರಿಸಿ ಸಾಧನೆ ಮಾಡಿದ್ದರು.ಇನ್ನು ನಾಯಕನಾಗಿ ಅರ್ಧಶತಕ ಗಳಿಸಿ, ಬಳಿಕ ಕಲೆಹಾಕಿದ ಸ್ಕೋರ್​​​ಗಳ ಪೈಕಿ ಕೊಹ್ಲಿ ಮೊದಲಿಗರಾಗಿದ್ದಾರೆ. ಕೊಹ್ಲಿ ಅವರ ಕನ್​​​ವರ್ಶನ್ ರೇಟ್ 71.43 ಆಗಿದ್ದು 36 ಟೆಸ್ಟ್​ ಪಂದ್ಯದಲ್ಲಿ 3605 ರನ್​​ ಬಾರಿಸಿದ್ದಾರೆ.
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...