IPL 2022: ಮಾರ್ಚ್ 12ಕ್ಕೆ ಅಭಿಮಾನಿಗಳಿಗೆ ಬಿಗ್ ಸರ್​ಪ್ರೈಸ್ ನೀಡಲಿದೆ RCB

ಬೆಂಗಳೂರು ಫ್ರಾಂಚೈಸಿ ಇದೀಗ ದೊಡ್ಡ ಘೋಷಣೆಯೊಂದನ್ನು ಮಾಡಿದ್ದು, ತಂಡದ ಮುಂದಿನ ನಾಯಕ ಯಾರೆಂಬುದನ್ನು ಮಾರ್ಚ್ 12 ರಂದು ಸಂಜೆ 4 ಗಂಟೆಗೆ ಘೋಷಿಸುವುದಾಗಿ ತಿಳಿಸಿದೆ. ಜೊತೆಗೆ ಹೊಸ ಜೆರ್ಸಿ ಕೂಡ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.

ಆರ್​ಸಿಬಿ (ಟ್ವಿಟರ್ ಪೋಟೋ)

ಆರ್​ಸಿಬಿ (ಟ್ವಿಟರ್ ಪೋಟೋ)

  • Share this:
ಐಪಿಎಲ್ 15ನೇ (IPL) ಆವೃತ್ತಿಗೆ ಎಲ್ಲಾ ತಂಡಗಳು ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಅದರಲ್ಲಿಯೂ ಮೊದಲ ಪ್ರಶಸ್ತಿಗಾಗಿ ಎದುರು ನೋಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಈ ಋತುವಿನಲ್ಲಿ ಹೊಸ ನಾಯಕನ (Captain) ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಐಪಿಎಲ್ 2022ರ 15ನೇ ಆವೃತ್ತಿಯು ಇದೆ ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ. ಆದರೆ ಈವರೆಗೂ ಆರ್ ಸಿಬಿ ಫ್ರಾಂಚೈಸಿ ಇನ್ನೂ ನಾಯಕನನ್ನು ಘೋಷಿಸಿಲ್ಲ. ಇದು ಅಭಿಮಾನಿಗಳಲ್ಲಿ ಕುತೂಹಲದ ಜೊತೆಗೆ ಬೇಸರವನ್ನು ಹೆಚ್ಚಿಸಿದೆ. ಹೀಗಾಗಿ ಬೆಂಗಳೂರು ಫ್ರಾಂಚೈಸಿ ಇದೀಗ ದೊಡ್ಡ ಘೋಷಣೆಯೊಂದನ್ನು ಮಾಡಿದ್ದು, ತಂಡದ ಮುಂದಿನ ನಾಯಕನನ್ನು ತಿಳಿಸುವುದಾಗಿ ತನ್ನ ಅಧಿಕೃತ ಟ್ವಿಟರ್ (Twitter) ಮೂಲಕ ಘೋಷಿಸಿದೆ.

ನಾಯಕತ್ವದಿಂದ ಹಿಂದೆ ಸರಿದ ಕೊಹ್ಲಿ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವೆರೆಗೂ ಒಮ್ಮೆಯೂ ಐಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಿಲ್ಲ. ಕಳೆದ ಋತುವಿನವರೆಗೆ, ತಂಡವನ್ನು ವಿರಾಟ್ ಕೊಹ್ಲಿ ನಿರ್ವಹಿಸುತ್ತಿದ್ದರು. ಆದರೆ ಈ ಬಾರಿ ತಾವು ನಾಯಕತ್ವದಿಂದ ಹಿಂದೆ ಸರಿಯುತ್ತಿರುವುದಾಗಿ ಈಗಾಗಲೇ ಕೊಹ್ಲಿ ತಿಳಿಸಿದ್ದಾರೆ. ಹೀಗಾಗಿ ಬೆಂಗಳೂರು ತಂಡಕ್ಕೆ ಹೊಸ ನಾಯಕನ ಆಗಮನವಾಗಲಿದ್ದು, ಇನ್ನು ಮುಂದೆ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.

ಮಾರ್ಚ್ 12ಕ್ಕೆ RCB ಅಭಿಮಾನಿಗಳಿಗೆ ಬಿಗ್ ಸರ್​ಪ್ರೈಸ್:

ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಪ್ರಾರಂಭವಾಗಲಿದೆ. ಈ ನಡುವೆ ಆರ್​ ಸಿಬಿ ತಂಡವು 12 ಮಾರ್ಚ್ 2022 ರಂದು ಸಂಜೆ 4 ಗಂಟೆಗೆ ಹೊಸ ನಾಯಕನನ್ನು ಘೋಷಿಸುವುದಾಗಿ ತಿಳಿಸಿದೆ. ಅದೇ ದಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಮ್ಯೂಸಿಯಂ ಕ್ರಾಸ್ ರೋಡ್‌ನಲ್ಲಿ ಫ್ರಾಂಚೈಸಿ ತಂಡದ 14 ವರ್ಷಗಳನ್ನು ಆಚರಿಸಲಿದೆ. ಹೊಸ ನಾಯಕನ ಹೊರತಾಗಿ ಹೊಸ ಜೆರ್ಸಿ ಕೂಡ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರ್ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಮರುನಾಮಕರಣ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.ಇದ್ನನೂ ಓದಿ: RCB New Captain: ಇವರೇ ನೋಡಿ RCB ತಂಡದ ಮುಂದಿನ ನಾಯಕ

ಯಾರಗಬಹದು RCB ನಾಯಕ?:

ಈ ಪ್ರಕಟಣೆ ಹೊರಡಿಸಿದ ಬೆನ್ನಲ್ಲೆ ಕ್ರಿಕೆಟ್ ವಲಯದಲ್ಲಿ ಆರ್ ಸಿಬಿ ತಂಡದ ಮುಂದಿನ ನಾಯಕ ಯಾರಗಬಹುದು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭವಾಗಿದೆ. ಸದ್ಯದ ಮಾಹಿತಿ ಪ್ರಕಾರ ನಾಯಕರ ಪಟ್ಟಿಯಲ್ಲಿ ಮುಂಚುಣಿಯಲ್ಲಿ ಇಬ್ಬರ ಹೆಸರು ಕೇಳಿಬರುತ್ತಲಿವೆ. ಹೌದು, ಫಾಫ್ ಡು ಪ್ಲೆಸಿಸ್ ಹಾಗೂ ದಿನೇಶ್ ಕಾರ್ತಿಕ್ ಹೆಸರುಗಳು ಮುಂಚುಣಿಯಲ್ಲಿದ್ದು, ಇವರಿಬ್ಬರಲ್ಲಿ ಒಬ್ಬರು ನಾಯಕರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅದರಲ್ಲಿಯೂ ಪ್ರಮುಖವಾಗಿ ಫಾಫ್ ಡು ಪ್ಲೆಸಿಸ್ ನಾಯಕನಾಗಬಹುದೆಂದು ಹೆಚ್ಚು ಚರ್ಚಿತವಾಗಿದೆ.

ಎಬಿ ಡಿವಿಲಿಯರ್ಸ್‌ಗೆ ಹೊಸ ಜವಾಬ್ದಾರಿ:

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಎಬಿ ಡಿವಿಲಿಯರ್ಸ್‌ಗೆ ಹೊಸ ಜವಾಬ್ದಾರಿಯನ್ನು ನೀಡಬಹುದು ಮತ್ತು ಅವರನ್ನು ತಂಡದ ಮಾರ್ಗದರ್ಶಕರನ್ನಾಗಿ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಲಿವೆ.

ಇದನ್ನೂ ಓದಿ: IPL 2022: RCB ನಾಯಕ ಯಾರು ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಯಾವಾಗ?

ಎಬಿ ಡಿವಿಲಿರ್ಸ್ 2008ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಸುಮಾರು  2010ರ ವರೆಗೆ ಡಿವಿಲಿರ್ಸ್ ಡೆಲ್ಲಿ ಕ್ಯಾಪಿಟಲ್ಸ್‌ನ ಪರ ಆಟವಾಡಿದ್ದರು. ನಂತರ 2011 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡ ಇವರು 2021ರ ವರೆಗೆ ಆರ್​ ಸಿಬಿ ತಂಡವನ್ನು ಪ್ರತಿನಿಧಿಸಿದ್ದರು. ಹೀಗಾಗಿ ಆರ್​ ಸಿಬಿ ಫ್ರಾಂಚೈಸಿ ತಂಡದ ಮೆಂಟರ್ ಆಗಿ ಎಬಿ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಪಂಜಾಬ್ ಕಿಂಗ್ಸ್ ಜೊತೆ ಮೊದಲ ಪಂದ್ಯ:

ಐಪಿಎಲ್ ಸೀಸನ್ 15 ರಲ್ಲಿ ಬೆಂಗಳೂರು ತಂಡವು ಮಾರ್ಚ್ 27 ರಂದು ತನ್ನ ಮೊದಲ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯದೊಂದಿಗೆ ಆರ್​ಸಿಬಿ ಐಪಿಎಲ್ 2022 ರ ತನ್ನ ಅಭಿಯಾನವನ್ನು ಆರಂಭಿಸಲಿದೆ.
Published by:shrikrishna bhat
First published: