2019ರ ಐಪಿಎಲ್​​ಗೆ ಆರ್​ಸಿಬಿ ಕ್ಯಾಪ್ಟನ್ ಇವರೆ: ತಂಡದ ವಕ್ತಾರ ಸ್ಪಷ್ಟನೆ

news18
Updated:September 10, 2018, 1:36 PM IST
2019ರ ಐಪಿಎಲ್​​ಗೆ ಆರ್​ಸಿಬಿ ಕ್ಯಾಪ್ಟನ್ ಇವರೆ: ತಂಡದ ವಕ್ತಾರ ಸ್ಪಷ್ಟನೆ
news18
Updated: September 10, 2018, 1:36 PM IST
ನ್ಯೂಸ್ 18 ಕನ್ನಡ

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ನಾಯಕತ್ವದ ವಿಚಾರ ಬಗ್ಗೆ ಎದ್ದಿದ್ದ ಊಹಾಪೊಹಗಳಿಗೆ ಸ್ವತಃ ಆರ್​​ಸಿಬಿ ತಂಡದ ವಕ್ತಾರರೆ ತೆರೆ ಎಳೆದಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಒಂದಲ್ಲಾ ಒಂದು ಬದಲಾವಣೆಯಾಗುತ್ತಿದೆ. ಇತ್ತೀಚೆಗಷ್ಟೆ ಆರ್​ಸಿಬಿಯ ನೂತನ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ಆಯ್ಕೆಯಾಗಿದ್ದು, ಇವರ ಜೊತೆಗೆ ಆಶೀಶ್ ನೆಹ್ರಾ ಕೂಡ ಸ್ಥಾನ ಪಡೆದಯಕೊಂಡಿದ್ದಾರೆ. ಈ ಮಧ್ಯೆ 2019ರ ಐಪಿಎಲ್ ಆವೃತ್ತಿಗೆ ಪ್ರಸ್ತುತ ಆರ್​ಸಿಬಿ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ ಅವರನ್ನು ಕೆಳಗಿಳಿಸಿ, ಸ್ಪೋಟಕ ಬ್ಯಾಟ್ಸ್​ಮನ್​​ ಎಬಿ ಡಿವಿಲಿಯರ್ಸ್ ಅವರಿಗೆ ನಾಯಕನ ಪಟ್ಟ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಆರ್​ಸಿಬಿ ಸ್ಪಷ್ಟನೆ ನೀಡಿದೆ.

‘ಮುಂದಿನ 2019ರ ಐಪಿಎಲ್​​​​​​​ ಆವೃತ್ತಿಯಲ್ಲೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ಅವರೆ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ’ ಎಂದು ಆರ್​ಸಿಬಿ ತಂಡದ ವಕ್ತಾರ ತಿಳಿಸಿದ್ದಾರೆ.
First published:September 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...