ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ(Indian premier league) ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ತಂಡಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ (Royal challengers Bangalore)ಮೊದಲ ಸ್ಥಾನ.. ಕಳೆದ 14 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ (Cup)ಗೆಲ್ಲದೆ ಇದ್ರೂ ಅಭಿಮಾನಿಗಳು ಮಾತ್ರ ಪ್ರತಿಬಾರಿಯೂ 'ಈ ಸಲ ಕಪ್ ನಮ್ದೇ' (Campaign)ಅಂತ ಅಭಿಯಾನ ಮಾಡುತ್ತಲೇ ಇರುತ್ತಾರೆ.. RCB ಅಭಿಮಾನಿಗಳ ಪ್ರೀತಿಗೆ ಮಾರುಹೋಗಿರುವ ಆಟಗಾರರು(Players) ಕೂಡ ಅಭಿಮಾನಿಗಳೇ ನಮ್ ದೇವ್ರು ಅಂತ, ಹೇಳುತ್ತಲೇ ಇರುತ್ತಾರೆ..
ಮೈದಾನದಲ್ಲಿ ಹಾಗೂ ಮೈದಾನದಿಂದ ಹೊರಗೆ ಪ್ರತಿಬಾರಿಯೂ ಅಭಿಮಾನಿಗಳಿಗೆ ರಂಜಿಸುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್.. ವಿಭಿನ್ನ ವಿಡಿಯೋಗಳನ್ನು ಮೂಲಕ ಅಭಿಮಾನಿಗಳ ಮನಸ್ಸು ಗೆದ್ದ ತಂಡ, ಕಪ್ ಗೆಲ್ಲದಿದ್ದರೂ, ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾ ಅಭಿಮಾನಿಗಳಿಗೆ ಧೈರ್ಯ ತುಂಬುತ್ತಲೇ ಬರುತ್ತಿದೆ.. ಈಗ ಇದೇ RCB ತಂಡ ಹೊಸ ಮ್ಯೂಸಿಕಲ್ ವಿಡಿಯೋ ಹಾಕಿ ಈ ಬಾರಿ ಕಪ್ ಗೆಲ್ಲದಿದ್ದರೆ ಏನಂತೆ, ಮುಂದಿನ ಬಾರಿ ಕಪ್ ನಮ್ಮದೇ ಎನ್ನುವ ಸಂದೇಶ ನೀಡಿದೆ..
ಇದನ್ನೂ ಓದಿ :RCB ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟ ಆಪತ್ಬಾಂಧವ : ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ
Never give up ಎಂದ ಆರ್ ಸಿಬಿ ಪ್ಲೇಯರ್ಸ್..
ದುಬೈನಲ್ಲಿ ನಡೆದ 14ನೇ ಆವೃತ್ತಿಯ ಐಪಿಎಲ್ ನಲ್ಲಿ ಈ ಬಾರಿ ಯಾದ್ರು ಬೆಂಗಳೂರು ತಂಡ ಕಪ್ ಗೆದ್ದು 14ವರ್ಷಗಳ ವನವಾಸಕ್ಕೆ ಹಾಕಲಿದೆ ಅಂತ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ರು. ಆದ್ರೆ ಕೋಲ್ಕತ್ತಾ ವಿರುದ್ಧ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತು ಸುಣ್ಣವಾಗುವ ಮೂಲಕ RCB ಅಭಿಮಾನಿಗಳ ಕನಸನ್ನು ನುಚ್ಚುನೂರು ಗೊಳಿಸಿತು.. ಆದ್ರೂ ಅಭಿಮಾನಿಗಳು ಮುಂದಿನ ವರ್ಷದ ಐಪಿಎಲ್ ನಲ್ಲಿ ಆರ್ ಸಿ ಬಿ ಕಪ್ ಗೆಲ್ಲಲಿದೆ ಅಂತ ಕಾಯ್ತಾ ಇದ್ದಾರೆ.. ಅಭಿಮಾನಿಗಳ ಜೊತೆಯ ಆರ್ಸಿಬಿ ಆಟಗಾರರು ಕೂಡ ಮುಂದಿನ ವರ್ಷ ಕಪ್ ಗೆಲ್ಲುವ ನಿರೀಕ್ಷೆಯಲ್ಲಿ ಇದ್ದಾರೆ.. ಇದರ ಮಧ್ಯೆ ಇನ್ನೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಟಗಾರರು ನೆವರ್ ಗಿವ್ ಅಪ್ ಅಂತ ಹಾಡಿರೋ ಹೊಸ ಮ್ಯೂಸಿಕಲ್ ವಿಡಿಯೋ ಬಿಡುಗಡೆ ಮಾಡಿದೆ..
ಅಲ್ಲದೆ ಪ್ರತಿಬಾರಿ ಒಂದುಗೂಡಿ ಆರ್ಸಿಬಿ ಜರ್ಸಿ ಧರಿಸಿ ಮೈದಾನಕ್ಕೆ ಕಾಲಿಟ್ಟಾಗ ತಮ್ಮ ಆಟದಲ್ಲಿ ಶೇ.100ರಷ್ಟು
ಎಫರ್ಟ್ ನೀಡುವ ಎಲ್ಲಾ ಆಟಗಾರರಿಗೆ ಧನ್ಯವಾದ ಅಂತ ಈ ಸ್ಪೆಷಲ್ ವಿಡಿಯೋ ಮೂಲಕ ಆರ್ಸಿಬಿ ಮ್ಯಾನೇಜ್ಮೆಂಟ್ ಸಂದೇಶ ನೀಡಿದೆ
ಚಹಾಲ್ ಪತ್ನಿ ಧನಶ್ರೀ ಕೊರಿಯೋಗ್ರಫಿ ಮಾಡಿರುವ ಮ್ಯೂಸಿಕಲ್ ವಿಡಿಯೋ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬೌಲರ್ ಯಜುವೇಂದ್ರ ಚಹಾಲ್ ಪತ್ನಿ ಧನಶ್ರೀ Never give up, Don't back down ಮ್ಯೂಸಿಕಲ್ ವಿಡಿಯೋಗೆ ಕೊರಿಯೋಗ್ರಾಫಿ ಮಾಡಿ ಡೈರೆಕ್ಷನ್ ಕೂಡ ಮಾಡಿದ್ದಾರೆ..ಈ ಹಾಡಿನ ವಿಡಿಯೋದಲ್ಲಿ ಆರ್ಸಿಬಿ ಸ್ಟಾರ್ ಪ್ಲೇಯರ್ಸ್ ಗಳಾದ ಗ್ಲೆನ್ ಮ್ಯಾಕ್ಸ್ವೆಲ್, ದೇವದತ್ ಪಡಿಕಲ್, ಮೊಹಮ್ಮದ್ ಸಿರಾಜ್, ನವ್ದೀಪ್ ಸೈನಿ, ಗ್ಲೆನ್ ಮ್ಯಾಕ್ಸ್ವೆಲ್, ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಯಜುವೇಂದ್ರ ಚಹಾಲ್ ಜನಶ್ರೀ ಕೊರಿಯೋಗ್ರಫಿಯಲ್ಲಿ ಮೂಡಿಬಂದಿರುವ ಹಾಡಿಗೆ ಕುಣಿದಿದ್ದಾರೆ.
ಇದನ್ನೂ ಓದಿ :ಟೀಮ್ ಇಂಡಿಯಾ ಮಾಜಿ ಕೋಚ್ ಸಂಜಯ್ ಬಂಗಾರ್ ಈಗ ಆರ್ಸಿಬಿ ಮುಖ್ಯ ಕೋಚ್
ಮ್ಯೂಸಿಕಲ್ ವಿಡಿಯೋದಲ್ಲಿ ಕಾಣಿಸಿಕೊಂಡ ಎಬಿಡಿ
ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದ ಎಬಿ ಡಿವಿಲಿಯರ್ಸ್ ಇತ್ತೀಚಿಗಷ್ಟೇ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ರು. ಜೊತೆಗೆ ನಾನು ಆರ್ಸಿಬಿ ಕುಟುಂಬದಲ್ಲಿ ಇರ್ತೀನಿ ಅಂತ ಹೇಳಿದ್ರು.. ಇದಕ್ಕೆ ಸಾಕ್ಷಿಯೆಂಬಂತೆ ಬಿಡುಗಡೆ ಮಾಡಿರುವ ಹೊಸ ಮ್ಯೂಸಿಕಲ್ ವಿಡಿಯೋದಲ್ಲಿ ತಂಡದ ಇತರ ಆಟಗಾರರ ಜೊತೆಗೆ ಕುಣಿದು ಕುಪ್ಪಳಿಸಿದ್ದಾರೆ..
ಇನ್ನು ಐಪಿಎಲ್ 14ನೇ ಆವೃತ್ತಿಯ ವೇಳೆಯಲ್ಲಿ ವಿರಾಟ್ ಕೊಹ್ಲಿ, RCB ನಾಯಕತ್ವಕ್ಕೆ ರಾಜೀನಾಮೆ ನೀಡಿದರು..ಜೊತೆಗೆ ಸದ್ಯದಲ್ಲಿಯೇ ಐಪಿಎಲ್ ಮೆಗಾ ಆಕ್ಷನ್ ಕೂಡ ನಡೆಯಲಿದೆ.. ಹೀಗಾಗಿ ಐಪಿಎಲ್ ಅಭಿಮಾನಿಗಳು ಆರ್ಸಿಬಿ ಮುಂದಿನ ನಾಯಕ ಯಾರು..? ಮೆಗಾ ಆಕ್ಷನ್ ನಲ್ಲಿ ಬೆಂಗಳೂರು ತಂಡ ಯಾವ ಆಟಗಾರರನ್ನು ಖರೀದಿ ಮಾಡಬಹುದು ಎಂಬ ಕುತೂಹಲದಲ್ಲಿ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ