ಹೊಸ ವರ್ಷದ ಮೊದಲ ಹ್ಯಾಟ್ರಿಕ್​ನೊಂದಿಗೆ ಇತಿಹಾಸ ಬರೆದ ಕ್ರಿಸ್ಟಿಯಾನೊ ರೊನಾಲ್ಡೊ

Cristiano Ronaldo: ಕ್ರಿಸ್ಟಿಯಾನೊ ರೊನಾಲ್ಡೊ ಪ್ರೀಮಿಯರ್ ಲೀಗ್, ಲಾ ಲಿಗಾ, ಸೀರಿ ಎ ಮತ್ತು ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

zahir | news18-kannada
Updated:January 7, 2020, 4:41 PM IST
ಹೊಸ ವರ್ಷದ ಮೊದಲ ಹ್ಯಾಟ್ರಿಕ್​ನೊಂದಿಗೆ ಇತಿಹಾಸ ಬರೆದ ಕ್ರಿಸ್ಟಿಯಾನೊ ರೊನಾಲ್ಡೊ
Ronaldo
  • Share this:
ವಿಶ್ವದ ಶ್ರೇಷ್ಠ ಫುಟ್​ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೊ ಇಟಾಲಿಯನ್ ಸೀರಿ ಎ ಲೀಗ್​ನಲ್ಲಿ ಮೊದಲ ಹ್ಯಾಟ್ರಿಕ್​ ಸಾಧನೆ ಮಾಡಿದ್ದಾರೆ. ಕಗ್​ಲಿಹರಿ ವಿರುದ್ಧ ನಡೆದ 2020ರ ಮೊದಲ ಪಂದ್ಯದಲ್ಲೇ ಕ್ರಿಸ್ಟಿಯಾನೊ ಶ್ರೇಷ್ಠ ಪದರ್ಶನ ನೀಡಿ ದಾಖಲೆ ಬರೆದರು.

ಪಂದ್ಯದ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದ ರೊನಾಲ್ಡೊ ಮೊದಲಾರ್ಧದಲ್ಲೇ ಕಾಲ್ಚಳಕ ತೋರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟಿದ್ದರು. ಇನ್ನು ದ್ವಿತೀಯಾರ್ಧದ 67 ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿಯಲ್ಲಿ ಚೆಂಡನ್ನು ಗೋಲು ಬಲೆಯೊಳಗೆ ತಲುಪಿಸುವ ಮೂಲಕ ಮತ್ತೊಂದು ಗೋಲು ದಾಖಲಿಸಿದರು.

81 ನೇ ನಿಮಿಷದಲ್ಲಿ ಗೊನ್ಜಾಲೊ ಯುವೆಂಟಸ್ ಪರ 3ನೇ ಗೋಲು ಗಳಿಸಿದರು. ಇದಾದ ಮುಂದಿನ ನಿಮಿಷದಲ್ಲೇ ಮತ್ತೊಂದು ಅದ್ಭುತ ಗೋಲು ದಾಖಲಿಸುವ ಮೂಲಕ ರೊನಾಲ್ಡೊ ವರ್ಷದ ಪ್ರಥಮ ಹ್ಯಾಟ್ರಿಕ್ ಗೋಲು ದಾಖಲಿಸಿದ ಹಿರಿಮೆಗೆ ಪಾತ್ರರಾದರು.

ಈ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಯುವೆಂಟಸ್ ತಂಡವು ಕಗ್​ಲಿಹರಿಯನ್ನು 4-0 ಅಂತರದಿಂದ ಸೋಲಿಸುವ ಮೂಲಕ ಸೀರಿ ಎ ಲೀಗ್​ನಲ್ಲಿ ಶುಭಾರಂಭ ಮಾಡಿದೆ.


ವಿಶ್ವ ದಾಖಲೆಯ ಹ್ಯಾಟ್ರಿಕ್:
ಕ್ರಿಸ್ಟಿಯಾನೊ ರೊನಾಲ್ಡೊ ಪ್ರೀಮಿಯರ್ ಲೀಗ್, ಲಾ ಲಿಗಾ, ಸೀರಿ ಎ ಮತ್ತು ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಅವರ ವೃತ್ತಿಜೀವನದ 56 ನೇ ಲೀಗ್ ಹ್ಯಾಟ್ರಿಕ್ ಆಗಿದ್ದು, ಸೀರಿ ಎ, ಲಾ ಲಿಗಾ ಮತ್ತು ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಹ್ಯಾಟ್ರಿಕ್ ಪಡೆದ ಎರಡನೇ ಆಟಗಾರ ಎಂಬ ದಾಖಲೆ ಕೂಡ ರೊನಾಲ್ಡೊ ಹೆಸರಿನಲ್ಲಿದೆ.ಈ ಹಿಂದೆ ರಿಯಲ್ ಮ್ಯಾಡ್ರಿಡ್ ತಂಡವನ್ನು ಪ್ರತಿನಿಧಿಸುತ್ತಿದ್ದ ಕ್ರಿಸ್ಟಿಯಾನೊ  2018ರಲ್ಲಿ ದಾಖಲೆ ಬೆಲೆಗೆ ಯುವೆಂಟಸ್​ ಕ್ಲಬ್ ಪರ ಸಹಿ ಹಾಕಿದ್ದರು. ಅಷ್ಟೇ ಅಲ್ಲದೆ ಹೊಸ ಕ್ಲಬ್​ಗೆ ಸೇರ್ಪಡೆಯಾದ ಒಂದೇ ವರ್ಷದಲ್ಲೇ ಇಟಾಲಿಯನ್ ಕ್ಲಬ್​ನ ವರ್ಷದ ಶ್ರೇಷ್ಠ ಆಟಗಾರನೆಂಬ ಗೌರವಕ್ಕೆ ಪಾತ್ರರಾಗಿದ್ದರು.
First published:January 7, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ