ರೊನಾಲ್ಡೋ ಅವರಿಗೆ ಟ್ಯಾಟು ಅಂದರೆ ಬಲು ದೂರ: ರಕ್ತದಾನ ಅಂದರೆ ಬಲು ಇಷ್ಟ

  • News18
  • 5-MIN READ
  • Last Updated :
  • Share this:

    ನ್ಯೂಸ್ 18 ಕನ್ನಡ


    ಇತ್ತೀಚೆಗಷ್ಟೇ ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಪೋರ್ಚುಗಲ್ ತಂಡದ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಅಬ್ಬರಕ್ಕೆ ಸ್ಪೇನ್ ತಂಡ ನಲುಗಿ ಹೋಗಿತ್ತು. ವಿಶ್ವಕಪ್ ಇತಿಹಾಸದಲ್ಲಿ 5ನೇ ಹ್ಯಾಟ್ರಿಕ್ ದಾಖಲಿಸಿದ ರೊನಾಲ್ಡೋ ಅವರ ಆಟಕ್ಕೆ ಮನಸೋಲದವರಿಲ್ಲ.


    ಆದರೆ ಪೋರ್ಚುಗಲ್​ನ ಸ್ಟಾರ್ ಆಟಗಾರನಿಗೆ ಟ್ಯಾಟು ಅಂದರೆ ಮಾತ್ರ ಬಲು ದೂರ. ಯಾಕೆಂದರೆ ರೊನಾಲ್ಡೋ ಅವರ ಸ್ನೇಹಿತನ ಮಗನೊಬ್ಬ ಕ್ಯಾನ್ಸರ್​​ನಿಂದ ಬಳಲುತ್ತಿದ್ದಾರೆ. ಅವರಿಗೆ ರಕ್ತ ಬೇಕಾದಾಗ ಸ್ವತಃ ರೊನಾಲ್ಡೋ ಅವರೆ ಡೊನೇಟ್ ಮಾಡುತ್ತಾರೆ. ಟ್ಯಾಟೂ ಹಾಕಿಸಿಕೊಂಡರೆ ಶಾಯಿ ರಕ್ತದೊಳಗೆ ಸೇರಿಕೊಳ್ಳತ್ತದೆ. ಒಂದು ವರ್ಷಗಳ ಕಾಲ ರಕ್ತ ದಾನ ಮಾಡುವುದಕ್ಕೆ ಆಗುವುದಿಲ್ಲ. ಹೀಗಾಗಿ ರಕ್ತ ದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇತ್ತೀಚೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ರೊನಾಲ್ಡೋ ಅವರು ನೀವು ರಕ್ತ ದಾನ ಮಾಡುತ್ತೀರಾ? ಎಂದು ಬರೆದು, ತಾವು ಬ್ಲಡ್ ಡೊನೇಟ್ ಮಾಡಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದರು.


     


    ಇಷ್ಟಲ್ಲದೆ ಹಿಂದೆ ರೊನಾಲ್ಡೋ ಅವರು ತಮ್ಮ ಅಭಿಮಾನಿಯಾಗಿದ್ದ ಕ್ಯಾನ್ಸರ್​​ ಪೀಡಿತ ಮಗುವಿನ ಆಪರೇಷನ್​​ಗೆ​​​ ಲಕ್ಷಗಟ್ಟರೆ ಸಹಾಯ ಮಾಡಿದ್ದರು. ಇದರ ಜೊತೆಗೆ ತನ್ನ ಸಾಮಾಜಿಕ ಕಳಕಳಿಯಿಂದ ಯಾವಾಗಲೂ ಸುದ್ದಿಯಲ್ಲೇ ಇರುತ್ತಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ರೊನಾಲ್ಡೋ ಅವರು ರಕ್ತ ದಾನ ಮಾಡುತ್ತಾರಂತೆ. ಹೀಗಾಗೆ ರೊನಾಲ್ಡೋ ಮೈದಾನದಲ್ಲಷ್ಟೇ ಅಲ್ಲದೆ ಅಭಿಮಾನಿಗಳ ಮನದಲ್ಲಿ  ಶಾಶ್ವತ ಸ್ಥಾನ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

    First published: