ಕೊಹ್ಲಿ vs ರೋಹಿತ್​: ಟೀಂ ಇಂಡಿಯಾ ಆಟಗಾರರ ನಡುವೆ ವೈಮನಸ್ಸು?

news18
Updated:September 5, 2018, 7:53 PM IST
ಕೊಹ್ಲಿ vs ರೋಹಿತ್​: ಟೀಂ ಇಂಡಿಯಾ ಆಟಗಾರರ ನಡುವೆ ವೈಮನಸ್ಸು?
news18
Updated: September 5, 2018, 7:53 PM IST
-ನ್ಯೂಸ್ 18 ಕನ್ನಡ

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಆಟಗಾರರ ನಡುವೆ ವೈಮನಸ್ಸು ಮೂಡಿದೆಯೇ? ಹೀಗೊಂದು ಪ್ರಶ್ನೆ ರೋಹಿತ್ ಶರ್ಮಾ ಅವರ ನಡೆಯಿಂದ ಹುಟ್ಟಿಕೊಂಡಿದೆ. ಮೊದಲು ಏಕದಿನ ಸರಣಿಯನ್ನು ಸೋತ ಭಾರತ ತಂಡ ಈಗ ಟೆಸ್ಟ್​ ಸರಣಿಯನ್ನು ಕೈಚೆಲ್ಲಿಕೊಂಡಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಸಾಮಾಜಿಕ ತಾಣದಲ್ಲಿ ರೋಹಿತ್ ಶರ್ಮಾ ಅನ್ ಫಾಲೋ ಮಾಡಿದ್ದಾರೆ. ತಂಡದ ಉಪನಾಯಕನಾಗಿರುವ ರೋಹಿತ್ ಶರ್ಮಾ ದಿಢೀರನೇ ನಾಯಕನನ್ನು ಅನ್ ಫಾಲೋ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಟ್ವೀಟರ್ ಹಾಗೂ ಇನ್​ಸ್ಟಾಗ್ರಾಂನಲ್ಲಿ ಕೊಹ್ಲಿಯನ್ನು ಹಿಂಬಾಲಿಸುತ್ತಿದ್ದ ರೋಹಿತ್ ಅನ್ ಫಾಲೋ ಮಾಡಿರುವುದು ಸರಣಿ ಸೋಲಿನ ನಂತರ ಆಟಗಾರರ ನಡುವೆ ವೈಮಸ್ಯ ಮೂಡಿದೆ ಎನ್ನಲಾಗಿದೆ. ಇಂಗ್ಲೆಂಡ್​ ವಿರುದ್ಧದ 5 ಟೆಸ್ಟ್​ ಸರಣಿಯ ಮೊದಲ ಮೂರು ಟೆಸ್ಟ್​ನಲ್ಲಿ ರೋಹಿತ್​ಗೆ ಅವಕಾಶ ನೀಡಲಾಗಿರಲಿಲ್ಲ. ಹಾಗೆಯೇ ಕೊನೆಯ ಎರಡು ಟೆಸ್ಟ್​ಗಳಿಂದ  ಕೂಡ ತಂಡದ ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾರನ್ನು ಹೊರಗಿಟ್ಟು ಯುವ ಆಟಗಾರರಿಗೆ ಕೊಹ್ಲಿ ಅವಕಾಶ ನೀಡಿದ್ದರು. ನಾಯಕನ ಈ ನಡೆಯ ವಿರುದ್ದ ರೋಹಿತ್​ ಶರ್ಮಾ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ. ಸಾಮಾಜಿಕ ತಾಣಗಳಲ್ಲಿ ಸದಾ ಸಕ್ರೀಯರಾಗಿರುವ ರೋಹಿತ್​ ಅವರ ಈ ನಡೆಯ ಬಗ್ಗೆ ಕ್ರಿಕೆಟ್​ ಪ್ರೇಮಿಗಳು ಸರಣಿ ಟ್ವೀಟ್ ಮಾಡುವ ಮೂಲಕ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಸೆಪ್ಟಂಬರ್ 15 ರಿಂದ ಪ್ರಾರಂಭವಾಗಲಿರುವ ಏಷ್ಯಾ ಕಪ್​ ಪಂದ್ಯಗಳಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು,​ ಬದಲಿಗೆ ಟೀಂ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...