• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Shardul Thakur Wedding: ಶಾರ್ದೂಲ್​ ಮದ್ವೆಯಲ್ಲಿ ಟೀಂ ಇಂಡಿಯಾ ಪ್ಲೇಯರ್ಸ್​ ಭರ್ಜರಿ ಡ್ಯಾನ್ಸ್​, ರೋಹಿತ್ ಸ್ಟೆಪ್ ಹೈಲೆಟ್​!

Shardul Thakur Wedding: ಶಾರ್ದೂಲ್​ ಮದ್ವೆಯಲ್ಲಿ ಟೀಂ ಇಂಡಿಯಾ ಪ್ಲೇಯರ್ಸ್​ ಭರ್ಜರಿ ಡ್ಯಾನ್ಸ್​, ರೋಹಿತ್ ಸ್ಟೆಪ್ ಹೈಲೆಟ್​!

ಶಾರ್ದೂಲ್​ ಠಾಕೂರ್ ವಿವಾಹ

ಶಾರ್ದೂಲ್​ ಠಾಕೂರ್ ವಿವಾಹ

Shardul Thakur Wedding: ಭಾರತದ ಸ್ಟಾರ್ ಕ್ರಿಕೆಟಿಗ ಶಾರ್ದೂಲ್ ಠಾಕೂರ್ ತಮ್ಮ ಬಾಲ್ಯದ ಗೆಳತಿ ಮಿಥಾಲಿ ಪಾರೂಲ್ಕರ್​ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಲವು ವರ್ಷಗಳಿಂದ ತನ್ನ ಸ್ನೇಹಿತೆ ಮಿಥಾಲಿ ಪರುಲ್ಕರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

  • Share this:

ಭಾರತದ ಸ್ಟಾರ್ ಕ್ರಿಕೆಟಿಗ ಶಾರ್ದೂಲ್ ಠಾಕೂರ್ (Shardul Thakur Wedding) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಲವು ವರ್ಷಗಳಿಂದ ತನ್ನ ಸ್ನೇಹಿತೆಯಾಗಿದ್ದ ಮಿಥಾಲಿ ಪಾರುಲ್ಕರ್ ಜೊತೆ ಡೇಟಿಂಗ್ ಮಾಡಿದ ಶಾರ್ದೂಲ್ ಇದೀಗ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆ.25ರಿಂದ ಶಾರ್ದೂಲ್ ಮದುವೆ (Wedding) ಕಾರ್ಯಕ್ರಮಗಳು ಜೋರಾಗಿ ನಡೆಡೆದವು. ನಿನ್ನೆ ಅವರ ಮದುವೆ ಕಾರ್ಯಕ್ರಮ ಮತ್ತು ಸಂಗೀತ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು. ಈ ಕಾರ್ಯಕ್ರಮದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma), ಶ್ರೇಯಸ್ ಅಯ್ಯರ್ ಸೇರಿದಂತೆ ಹಲವು ಕ್ರಿಕೆಟ್ ತಾರೆಯರು ಭಾಗವಹಿಸಿದ್ದರು.


ಶಾರ್ದೂಲ್​ ಮದ್ವೆಯಲ್ಲಿ ಟೀಂ ಇಂಡಿಯಾ ಪ್ಲೇಯರ್ಸ್:


ಶಾರ್ದೂಲ್ ಠಾಕೂರ್ ಅವರ ವಿವಾಹವು ಕರ್ಜತ್‌ನಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಸಂಭ್ರಮದಿಂದ ನಡೆಯಿತು. ಅವರ ಎರಡೂ ಕುಟುಂಬದ 200 ರಿಂದ 250 ಜನರು ಭಾಗವಹಿಸಿದ್ದಾರೆ. ನಿನ್ನೆ ಮೊನ್ನೆ ಶಾರ್ದೂಲ್ ಮತ್ತು ಮಿಥಾಲಿ ಮದುವೆ ನಿಮಿತ್ತ ಸಂಗೀತ ಕಾರ್ಯಕ್ರಮ ನಡೆಯಿತು. ಇದರಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಅವರ ಪತ್ನಿ ರಿತಿಕಾ ಸಜ್ದೇ ಭಾಗವಹಿಸಿದ್ದರು. ಅಲ್ಲದೆ ಶಾರ್ದೂಲ್ ಅವರ ವಿಶೇಷ ಸ್ನೇಹಿತ ಶ್ರೇಯಸ್ ಅಯ್ಯರ್, ಅರ್ಜುನ್ ತೆಂಡೂಲ್ಕರ್, ಹಾರ್ದಿಕ್ ತೋಮರ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವೇಳೆ ಮಿಥಾಲಿ ಮತ್ತು ಶಾರ್ದೂಲ್ ಅವರ ಸಂಗೀತ ಕಾರ್ಯಕ್ರಮಗಳ ವಿಡಿಯೋಗಳು ವೈರಲ್ ಆಗುತ್ತಿವೆ. ಇದರಲ್ಲಿ ಇವರಿಬ್ಬರು ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಶಾರ್ದೂಲ್ ಠಾಕೂರ್ ಗಾಗಿ ಶ್ರೇಯಸ್ ಅಯ್ಯರ್ ಕೂಡ 'ದೋಸ್ತಿ' ಹಾಡೊಂದನ್ನು ಹಾಡಿದ್ದಾರೆ. ಶಾರ್ದೂಲ್ ಮದುವೆ ಕಾರ್ಯಕ್ರಮಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


ಸ್ಟಾರ್​ ಆಟಗಾರರ ಫೋಟೋ ವೈರಲ್:


ಶಾರ್ದೂಲ್ ಠಾಕೂರ್ ಅವರ ಮದುವೆ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಶ್ರೇಯಸ್ ಅಯ್ಯರ್ ಮತ್ತು ತಂಡದ ಇತರ ಆಟಗಾರರು ಕೂಡ ಕಾಣಿಸಿಕೊಂಡಿದ್ದರು. ಆದರೆ ಶ್ರೇಯಸ್ ಅಯ್ಯರ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇದಕ್ಕೆ ಕಾರಣ ಯುಜುವೇಂದ್ರ ಚಾಹಲ್ ಪತ್ನಿ ಧನಶ್ರೀ. ಹೌದು, ವಾಸ್ತವವಾಗಿ, ಧನಶ್ರೀ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ, ಅವರ ಪತ್ನಿ ರಿತಿಕಾ, ಧನಶ್ರೀ, ಶಾರ್ದೂಲ್ ಮತ್ತು ಶ್ರೇಯಸ್ ಅಯ್ಯರ್ ಕಾಣಿಸಿಕೊಂಡಿದ್ದಾರೆ. ಫೋಟೋದಲ್ಲಿ ಯುಜ್ವೇಂದ್ರ ಚಹಾಲ್ ಅವರನ್ನು ನೋಡದ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ.
ಅದ್ಧೂರಿಯಾಗಿ ನಡೆದ ವಿವಾಹ ಕಾರ್ಯಕ್ರಮ:


ಟೀಂ ಇಂಡಿಯಾದ ಓಪನರ್ ಕೆಎಲ್ ರಾಹುಲ್ ನಂತರ ಇದೀಗ ಶಾರ್ದೂಲ್ ಠಾಕೂರ್ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ತನ್ನ ಗೆಳತಿ ಮಿಥಾಲಿ ಪಾರುಲ್ಕರ್ ಅವರನ್ನು ವಿವಾಹವಾದರು. ಇಬ್ಬರ ಮದುವೆಯೂ ಮರಾಠಿ ಪದ್ಧತಿಯಂತೆ ನೆರವೇರಿತು. ಶಾರ್ದೂಲ್ ಮದುವೆಯ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ  ಹರಿದಾಡುತ್ತಿವೆ.


ಇದನ್ನೂ ಓದಿ: Shardul Thakur Marriage: ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಸ್ಟಾರ್​​ ಆಟಗಾರ, ನವಜೋಡಿಯ ಕ್ಯೂಟ್​ ಫೋಟೋಸ್ ನೀವೂ ನೋಡಿ​


ಶಾರ್ದೂಲ್​ ವೃತ್ತಿ ಜೀವನ:


ಟೀಂ ಇಂಡಿಯಾ ಪರ ಶಾರ್ದೂಲ್ ಠಾಕೂರ್ 24 ಏಕದಿನ ಪಂದ್ಯಗಳನ್ನು ಆಡಿದ್ದು, 33 ವಿಕೆಟ್​ಗಳನ್ನು ಉರುಳಿಸಿದ್ದಾರೆ. 31 ಏಕದಿನ ಪಂದ್ಯಗಳಿಂದ 44 ವಿಕೆಟ್ ಹಾಗೂ 8 ಟೆಸ್ಟ್ ಪಂದ್ಯಗಳಿಂದ 27 ವಿಕೆಟ್ ಗಳಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 3 ಅರ್ಧ ಶತಕಗಳೊಂದಿಗೆ 254 ರನ್ ಕೂಡ ಗಳಿಸಿದ್ದಾರೆ.
ಇನ್ನು, ಐಪಿಎಲ್​ನಲ್ಲಿ ಶಾರ್ದೂಲ್ ಠಾಕೂರ್​ ಅವರು ಶ್ರೇಯಸ್ ಅಯ್ಯರ್​ ನಾಯಕತ್ವದ ಕೆಕೆಆರ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ಮಿತಾಲಿ ಪಾರುಲ್ಕರ್ ಅವರು ಉದ್ಯಮಿಯಾಗಿದ್ದಾರೆ. ಅವರು ದಿ ಬೇಕ್ಸ್​ ಎಂಬ ಸಂಸ್ಥೆಯ ಸ್ಥಾಪಕಿಯಾಗಿದ್ದಾರೆ. ಇದರ ಜೊತೆ ಬೇಕರಿ ತಿನಿಸುಗಳ ಉದ್ಯಮವನ್ನು ಹೊಂದಿದ್ದಾರೆ. ಇವುಗಳೊಂದಿಗೆ ಮಿಥಾಲಿ ಅವರು ತಮ್ಮದೇ ಆದ, ಮಿಥಾಲಿ ಆಲ್ ದಿ ಜಾಝ್ ಎಂಬ ಐಷಾರಾಮಿ ಬೇಕರ್ಸ್ ಸಂಸ್ಥೆ ನಡೆಸುತ್ತಿದ್ದಾರೆ.

Published by:shrikrishna bhat
First published: