ರ‍್ಯಾಂಕಿಂಗ್​ನಲ್ಲೂ ವಿರಾಟ್​ಗೆ ಪೈಪೋಟಿ ನೀಡಿದ ರೋಹಿಟ್: ಕೊಹ್ಲಿ ಸ್ಥಾನದ ಮೇಲೆ ಹಿಟ್​​ಮ್ಯಾನ್ ಕಣ್ಣು?

news18
Updated:September 30, 2018, 4:18 PM IST
ರ‍್ಯಾಂಕಿಂಗ್​ನಲ್ಲೂ ವಿರಾಟ್​ಗೆ ಪೈಪೋಟಿ ನೀಡಿದ ರೋಹಿಟ್: ಕೊಹ್ಲಿ ಸ್ಥಾನದ ಮೇಲೆ ಹಿಟ್​​ಮ್ಯಾನ್ ಕಣ್ಣು?
news18
Updated: September 30, 2018, 4:18 PM IST
ನ್ಯೂಸ್ 18 ಕನನ್ನಡ

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ತನ್ನ ನೂತನ ಏಕದಿನ ರ‍್ಯಾಂಕಿಂಗ್ ಪಟ್ಟಿ ಪಕ್ರಕಟಿಸಿದ್ದು, ಏಷ್ಯಾ ಕಪ್​​ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ತನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿ 2ನೇ ಸ್ಥಾನಕ್ಕೆ ಏರಿರುವ ರೋಹಿತ್ ಶರ್ಮಾ 842 ಅಂಕದೊಂದಿಗೆ ನಂಬರ್ 1 ಪಟ್ಟದ ಸನಿಯದಲ್ಲಿದ್ದಾರೆ. ಕೊಹ್ಲಿ 884 ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ರೋಹಿತ್ ಏಷ್ಯಾ ಕಪ್​ನಲ್ಲಿ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವ ಜೊತೆಗೆ ಒಂದು ಶತಕ ಹಾಗೂ 2 ಅರ್ರಧಶತಕ ಸಹಿತ 317 ರನ್ ಕಲೆಹಾಕಿದ್ದರು.

ಇನ್ನು ಮೊನ್ನೆಯಷ್ಟೇ ಮುಕ್ತಾಯಗೊಂಡ 14ನೇ ಏಷ್ಯಾ ಕಪ್​ ಟೂರ್ನಿಯಲ್ಲಿ ಭಾರತ 7ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇದು ರೋಹಿತ್ ನಾಯಕನಾಗಿ ಸಾಧಿಸಿದ ಶ್ರೇಷ್ಠ ಸಾಧನೆಯಾಗಿದೆ. ತನ್ನ ನಾಯಕತ್ವದ ಬಗ್ಗೆ ಸ್ವತಃ ರೋಹಿತ್ ಅವರೇ ಮಾತನಾಡಿದ್ದು, ತಂಡದ ನಾಯಕತ್ವ ವಹಿಸಿಕೊಳ್ಳುವಂತಹ ಪರಿಸ್ಥಿತಿ ಬಂದರೆ ಖಂಡಿತ ನಾನು ಭಾರತ ಕ್ರಿಕೆಟ್ ತಂಡದ ನೇತೃತ್ವ ವಹಿಸಲು ತಯಾರಾಗಿದ್ದೇನೆ ಎಂದಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಕ್ಯಾಪ್ಟನ್ ಆಗಲು ನಾನು ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. ಸದ್ಯ ಕ್ಯಾಪ್ಟನ್ಸಿಯಲ್ಲಿ ರೋಹಿತ್-ಕೊಹ್ಲಿ ನಡುವೆ ಜಟಾಪಟಿ ನಡೆಯುವ ಲಕ್ಷಣಗಳು ಎದ್ದು ಕಾಣುತ್ತಿದ್ದು, ಈ ಮದ್ಯೆ ರೋಹಿತ್ ಐಸಿಸಿ ರ‍್ಯಾಂಕಿಂಗ್​ನಲ್ಲೂ 2ನೇ ಸ್ಥಾನಕ್ಕೆ ಏರಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಿದೆ.

ಇನ್ನು ಬೌಲರ್​ಗಳ ಪೈಕಿ ಜಸ್​ಪ್ರೀತ್ ಬುಮ್ರಾ ಮೊದಲ ಸ್ಥಾನದಲ್ಲೇ ಇದ್ದರೆ, ಕುಲ್ದೀಪ್ ಯಾದವ್ 3ನೇ ಸ್ಥಾನ ತಮ್ಮದಾಗಿಸಿದ್ದಾರೆ. ಅಂತೆಯೆ ಆಲ್ರೌಂಡರ್ ಪಟ್ಟಿಯಲ್ಲಿ ಅಫ್ಘಾನಿಸ್ತಾದ ರಶೀದ್ ಖಾನ್ ನಂಬರ್ 1 ಪಟ್ಟಕ್ಕೇರಿದ್ದಾರೆ. 20 ವರ್ಷ ಪ್ರಾಯದ ರಶೀದ್ ಖಾನ್ ಅವರು 353 ಅಂಕದೊಂದಿಗೆ ಬಾಂಗ್ಲಾದೇಶ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅವರನ್ನು ಕೆಳಗಿಳಿಸಿದ್ದಾರೆ.
First published:September 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...