• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Rohit Sharma: ಹುಡುಗನಿಗೆ ಪ್ರಪೋಸ್ ಮಾಡಿದ ರೋಹಿತ್ ಶರ್ಮಾ! ವಿಲ್ ಯೂ ಮ್ಯಾರಿ ಮೀ ಅಂದ್ರಾ ಹಿಟ್​ಮ್ಯಾನ್?

Rohit Sharma: ಹುಡುಗನಿಗೆ ಪ್ರಪೋಸ್ ಮಾಡಿದ ರೋಹಿತ್ ಶರ್ಮಾ! ವಿಲ್ ಯೂ ಮ್ಯಾರಿ ಮೀ ಅಂದ್ರಾ ಹಿಟ್​ಮ್ಯಾನ್?

ರೋಹಿತ್ ಶರ್ಮಾ

ರೋಹಿತ್ ಶರ್ಮಾ

Rohit Sharma: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ಸರಣಿ ನಡೆಯುತ್ತಿದೆ. ಇದರ ನಡುವೆ ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಅವರು ತಮ್ಮ ಅಭಿಮಾನಿಗೆ ಹೇಳಿದ ಆ ಒಂದು ಮಾತಿನ ವಿಡಿಯೋ ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.

  • Share this:

ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವೆ ಏಕದಿನ ಸರಣಿ ನಡೆಯುತ್ತಿದ್ದು, ಈ ಸರಣಿಯ ಎರಡನೇ ಪಂದ್ಯ ವಿಶಾಖಪಟ್ಟಣಂನ ಕ್ರೀಡಾಂಗಣದಲ್ಲಿ ನಡೆಯಿತು. ನಾಯಕ ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಂ ಇಂಡಿಯಾ (Team India) ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲನ್ನು ಕಂಡಿತು. ಆದರೆ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಅವರ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ತಮ್ಮ ಅಭಿಮಾನಿಗೆ ಮದುವೆಯ ಪ್ರಸ್ತಾಪ ಮಾಡಿದ್ದಾರೆ.


ಅಭಿಮಾನಿಗೆ ಪ್ರಪೋಸ್​ ಮಾಡಿದ ರೋಹಿತ್:


ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾದ ಭಾಗವಾಗಿರಲಿಲ್ಲ. ರೋಹಿತ್ ಶರ್ಮಾ ತಮ್ಮ ಪತ್ನಿ ರಿತಿಕಾ ಸಜ್ದೇಹ್ ಅವರ ಸಹೋದರನ ವಿವಾಹಕ್ಕಾಗಿ ODI ಸರಣಿಯಿಂದ ಕೆಲವು ದಿನಗಳ ವಿರಾಮ ತೆಗೆದುಕೊಂಡಿದ್ದರು. ಹೀಗಾಗಿ ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಆದರೆ ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯಕ್ಕೆ ರೋಹಿತ್ ಶರ್ಮಾ ಟೀಂ ಇಂಡಿಯಾಗೆ ಮರಳಿದ್ದರು. ಏತನ್ಮಧ್ಯೆ, ರೋಹಿತ್ ವಿಮಾನ ನಿಲ್ದಾಣದಲ್ಲಿ ಬರುವ ವೇಳೆಯ ವೀಡಿಯೋ ಇದೀಗ ವೈರಲ್ ಆಗುತ್ತಿದೆ. ಇದರಲ್ಲಿ ಅವರು ತಮ್ಮ ಅಭಿಮಾನಿಯನ್ನು ಮದುವೆಯ ಪ್ರಸ್ತಾಪ ಮಾಡಿದ್ದಾರೆ.ರೋಹಿತ್ ಶರ್ಮಾ ತಂಡದೊಂದಿಗೆ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಬಸ್ಸಿನ ಕಡೆಗೆ ಹೋಗುತ್ತಿದ್ದರು. ಹೀಗಾಗಿಯೇ ಟೀಂ ಇಂಡಿಯಾ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನ ದರ್ಶನ ಪಡೆಯಲು ಅಲ್ಲಿಗೆ ಆಗಮಿಸಿದ್ದರು. ಈ ವೇಳೆ ರೋಹಿತ್ ಶರ್ಮಾ ಅಭಿಮಾನಿಯೊಬ್ಬರು ಅವರ ವಿಡಿಯೋ ಮಾಡುತ್ತಿದ್ದರು. ಈ ವೇಳೆ ರೋಹಿತ್ ಆ ಕಡೆ ಹೋಗುತ್ತಿದ್ದಾಗ ಅಭಿಮಾನಿಯ ಬಳಿಗೆ ಹೋಗಿ ಕೈಯಲ್ಲಿದ್ದ ಗುಲಾಬಿ ಹೂವನ್ನು ಅಭಿಮಾನಿಗೆ ಅರ್ಪಿಸಿ ‘ನನ್ನನ್ನು ಮದುವೆಯಾಗುತ್ತೀರಾ? ಎಂದು ಕೇಳಿದರು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಇದಕ್ಕೆ ತಮಾಷೆಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.


ಇದನ್ನೂ ಓದಿ: IND vs AUS: ಆಸೀಸ್​​ ವಿರುದ್ಧದ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್ ರೋಹಿತ್​; ಟೀಂ ಇಂಡಿಯಾ ಎಡವಿದ್ದೆಲ್ಲಿ?


ಆಸೀಸ್​ ವಿರುದ್ಧ ಭಾರತಕ್ಕೆ ಸೋಲು:


ಇನ್ನು, ಇಂದು ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಆಸೀಸ್​ ವಿರುದ್ಧ ಹೀನಾಯವಾಗಿ ಸೋಲನ್ನಪ್ಪಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡ 10 ವಿಕೆಟ್​ ಕಳೆದುಕೊಂಡು ಕೇವಲ 118 ರನ್​ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಆಸೀಸ್​ ಕೇವಲ 55 ನಿಮಿಷದಲ್ಲಿ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದೆ.
ಸೋಲಿನ ಕಾರಣ ಬಿಚ್ಚಿಟ್ಟ ರೋಹಿತ್:


ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಈ ಸೋಲು ನಿಜವಾಗಿಯೂ ನಿರಾಶಾದಾಯಕವಾಗಿದೆ, ಅದರಲ್ಲಿ ಯಾವುದೇ ಅನುಮಾನವಿಲ್ಲ. ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ನಾವು ಪರಿಸ್ಥಿತಿಯನ್ನು ಗ್ರಹಿಸಿ ಬ್ಯಾಟಿಂಗ್ ಮಾಡಲಿಲ್ಲ. ಪಿಚ್ ಮತ್ತು ಸ್ಥಿತಿ ಅರ್ಥವಾಗಲಿಲ್ಲ. 117 ರನ್​ ಸಾಕಾಗುವುದಿಲ್ಲ ಎಂದು ನಮಗೆ ಮೊದಲಿನಿಂದಲೂ ತಿಳಿದಿತ್ತು. ಅಂದಹಾಗೆ, ವೈಜಾಗ್‌ನ ಮೈದಾನದಲ್ಲಿ ಇಷ್ಟು ಕಡಿಮೆ ರನ್​ ದೊಡ್ಡದಲ್ಲ ಎಂದು ತಿಳಿದಿತ್ತು. ನಾವು ಬ್ಯಾಟಿಂಗ್ ಉತ್ತಮವಾಗಿ ಮಾಡಲಿಲ್ಲ. ಮೊದಲ ಓವರ್ ನಲ್ಲೇ ಶುಭಮನ್ ಗಿಲ್ ವಿಕೆಟ್ ಕಳೆದುಕೊಂಡಿದ್ದೆವು. ಇದಾದ ನಂತರ ವಿರಾಟ್ ಕೊಹ್ಲಿ ಮತ್ತು ನಾನು ಬೇಗನೆ ಔಟ್​ ಆದೆವು. ನಂತರ ನಾವು ಸತತ ಎರಡು ವಿಕೆಟ್ ಕಳೆದುಕೊಂಡೆವು. ಇಂದು ನಮಗೆ ಉತ್ತಮ ದಿನವಾಗಿರಲಿಲ್ಲ ಎಂದು ಹೇಳುವ ಮೂಲಕ ಸೋಲಿಗೆ ಕಾರಣ ತಿಳಿಸಿದ್ದಾರೆ.

Published by:shrikrishna bhat
First published: