T20 World Cup 2022: ಟಿ20 ವಿಶ್ವಕಪ್‌ಗೂ ಮುನ್ನ ಬದಲಾಗುತ್ತಾ ರೋಹಿತ್​ ಸ್ಥಾನ? ಏನು ಹೇಳುತ್ತೆ ಅಂಕಿಅಂಶ

T20 World Cup 2022: ಅಫ್ಘಾನಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ವಿರಾಟ್ ಕೊಹ್ಲಿ ಮತ್ತು ರಾಹುಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಅಲ್ಲದೇ ಉತ್ತಮ ಆರಂಭವನ್ನೂ ನೀಡಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಟೀಂ ಇಂಡಿಯಾದ ಏಷ್ಯಾಕಪ್ (Asia Cup 2022) ಸವಾಲು ಈಗಾಗಲೇ ಮುಗಿದಿದೆ. ತನ್ನ ಏಷ್ಯಾ ಕಪ್​ 2022ರ ಕೊನೆಯ ಪಂದ್ಯವನ್ನು ಭಾರತ ತಂಡ ಅಫ್ಗಾನಿಸ್ತಾನದ (IND vs AFG) ವಿರುದ್ಧ ಆಡಿತು. ಈ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲವುದರ ಮೂಲಕ ಟೀಂ ಇಂಡಿಯಾ ಏಷ್ಯಾ ಕಪ್​ 2022 ಟೂರ್ನಿಗೆ ಗೆಲುವಿನ ವಿದಾಯ ಹೇಳಿದೆ. ಅಲ್ಲದೇ  ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಪ್ರದರ್ಶನ ಉತ್ತಮವಾಗಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಭರ್ಜರಿ ಪ್ರದರ್ಶನ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಅದರಲ್ಲಿಯೂ ಕೊಹ್ಲಿ ಶತಕ ಹೆಚ್ಚು ಸೌಂಡ್​ ಮಾಡಿತು. ಆದರೆ ಇದೇ ಈಗ ಭಾರತ ತಂಡದಲ್ಲಿ ಕೆಲವು ಬದಲಾವಣೆಗಳು ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  ಮುಂಬರುವ T20 ವಿಶ್ವಕಪ್‌ಗೆ (T20 World Cup )ಮುಂಚಿತವಾಗಿ ಈ ಬದಲಾವಣೆ ಆಗುವ ಸಾಧ್ಯತೆ ಇದೆ.

ಆರಂಭಿಕರಲ್ಲಿ ಬದಲಾವಣೆ:

ಹೌದು, ಈ ಬಾರಿ ಏಷ್ಯಾ ಕಪ್​ ಟೂರ್ನಿಯಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲಾಗಿತ್ತು. ಆದರೆ ಈ ಜೋಡಿ ಅಷ್ಟಾಗಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಕೊನೆಯ ಪಂದ್ಯದಲ್ಲಿ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಕಣಕ್ಕಿಳಿದರು. ಈ ಜೋಡಿ ಭರ್ಜರಿ ಓಫನಿಂಗ್ ನೀಡುವ ಮೂಲಕ ಭಾರತ ತಂಡದ ಆರಂಭಿಕರ ಸಮಸ್ಯೆಗೆ ಕೊಂಚ ಬದಲಾವಣೆಯ ಗಾಳಿಯನ್ನು ಬೀಸಿದ್ದಾರೆ.

ಅದರಲ್ಲಿಯೂ ಕೊಹ್ಲಿ-ರಾಹುಲ್ ಜೊತೆಗೂಡಿ 119 ರನ್ ಗಳಿಸಿ ಓಪನಿಂಗ್ ಮಾಡಿದರು. ಹೀಗಾಗಿ ಮುಂಬರುವ ವಿಶ್ವಕಪ್ ಹಿನ್ನಲೆಯಲ್ಲಿ ಟೀಂ ಇಂಡಿಯಾಕ್ಕೆ ಇದೊಂದು ಪರೀಕ್ಷೆಯಾಗಿದ್ದು, ರೋಹಿತ್ ಶರ್ಮಾ ಓಪನಿಂಗ್ ಬದಲು ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ. ಅಲ್ಲದೇ ಕಳೆದ ಕೆಲ ಸರಣಿಗಳಲ್ಲಿ ಈ ಆರಂಬಿಕ ಜೋಡಿಯ ಮೊತ್ತವೇ ಹೆಚ್ಚಿದ್ದು, ಇದೇ ಜೋಡಿ ಮುಂಬರುವ ವಿಶ್ವಕಪ್​ನಲ್ಲಿ ಆರಂಭಿಕರಾದರೆ ಉತ್ತಮ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟಿಸಲು ದಿನಾಂಕ ನಿಗದಿ, ಯಾರಿಗೆ ಅವಕಾಶ, ಯಾರು ಔಟ್?

ವಿಶ್ವಕಪ್‌ಗೂ ಮುನ್ನ ಫಾರ್ಮ್‌ನಲ್ಲಿರುವ ವಿರಾಟ್:

ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಏಷ್ಯಾಕಪ್ ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದ್ದರೂ ವಿಶ್ವಕಪ್ ಗೂ ಮುನ್ನ ವಿರಾಟ್ ಕೊಹ್ಲಿ ಫಾರ್ಮ್ ಗೆ ಮರಳಿರುವುದು ಟೀಂ ಇಂಡಿಯಾಗೆ ತೃಪ್ತಿ ತಂದಿದೆ. ವಿರಾಟ್ ಏಷ್ಯಾ ಕಪ್​ನಲ್ಲಿ 4 ಪಂದ್ಯಗಳಲ್ಲಿ 1 ಶತಕ ಮತ್ತು 2 ಅರ್ಧಶತಕಗಳೊಂದಿಗೆ 254 ರನ್ ಗಳಿಸಿದ್ದಾರೆ.

ಇನ್ನೊಂದು ವಾರದಲ್ಲಿ ವಿಶ್ವಕಪ್​ಗೆ ಟಿಂ ಇಂಡಿಯಾ ಪ್ರಕಟ:


 ಹೌದು, ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಲಿದೆ. ಇದರ ನಡುವೆ ಬಿಸಿಸಿಐ ಸೆಪ್ಟೆಂಬರ್ 16 ರಂದು ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾವನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಹೀಗಾಗಿ ರವೀಂದ್ರ ಜಡೇಜಾ, ಬುಮ್ರಾ ಬೇಗ ಗುಣಮುಖರಾಗಿ ಮೈದಾನಕ್ಕೆ ಮರಳಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ರವೀಂದ್ರ ಜಡೇಜಾ ಇತ್ತೀಚೆಗೆ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಅವರು ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Virat Kohli: ಶತಕದ ನಂತರ ಮುತ್ತಿಕ್ಕಿದ ಉಂಗುರಕ್ಕೂ ವಿರಾಟ್​ಗೂ ಏನು ಸಂಬಂಧ? ಕೊನೆಗೂ ರಿವೀಲ್​ ಆಯ್ತು ರಿಂಗ್​ ಹಿಂದಿನ ಕಹಾನಿ

ಇನ್ನು, ಜಸ್ಪ್ರೀತ್ ಬುಮ್ರಾ ಅವರ ಬೆನ್ನು ನೋವಿನ ಕಾರಣದಿಂದ ಟಿ20 ವಿಶ್ವಕಪ್ ಆಡುತ್ತಾರೋ ಇಲ್ಲವೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಅಕ್ಟೋಬರ್ 16 ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ನವೆಂಬರ್ 13 ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

Published by:shrikrishna bhat
First published: