Rohit Sharma: ಕಳಪೆ ಆಟದಿಂದ ಔಟಾದ ರಿಷಬ್ ಮೇಲೆ ರೋಹಿತ್ ಗರಂ? ವಿಡಿಯೋ ವೈರಲ್

ರೋಹಿತ್ ಶರ್ಮಾ  ಮತ್ತು ರಿಷಭ್ ಪಂತ್

ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್

ತಮ್ಮ ವಿಕೆಟ್ ಒಪ್ಪಿಸಿ ಡ್ರೆಸ್ಸಿಂಗ್ ರೂಮ್ ಗೆ ಹೋದ ರಿಷಭ್ ಪಂತ್ ಅವರನ್ನು ಅಂತಹ ಕಳಪೆ ಶಾಟ್ ಆಡಿದ್ದೇಕೆ? ಅಂತ ನಾಯಕ ರೋಹಿತ್ ಶರ್ಮಾ ಅವರು ಪ್ರಶ್ನೆ ಮಾಡಿದ್ದಾರೆ. ರೋಹಿತ್ ಶರ್ಮಾ ಕಳಪೆ ಶಾಟ್ ಆಡಿ ಔಟ್ ಆಗಿ ಬಂದು ಡ್ರೆಸ್ಸಿಂಗ್ ರೂಮ್ ನಲ್ಲಿ ಕುಳಿತ ರಿಷಭ್ ಪಂತ್ ಅವರಿಂದ ವಿವರಣೆ ಕೇಳುತ್ತಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮುಂದೆ ಓದಿ ...
  • Share this:

ಮೊನ್ನೆ ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಭಾರತ (India) ಮತ್ತು ಪಾಕಿಸ್ತಾನ (Pakistan) ಕ್ರಿಕೆಟ್ ಪಂದ್ಯವನ್ನು ನೀವು ನೋಡಿದ್ದರೆ, ಅಲ್ಲಿ ನಿಮಗೆ ಭಾರತದ ತಂಡದ ಬ್ಯಾಟ್ಸ್ಮನ್ ಗಳು ಒಬ್ಬರಾದ ಮೇಲೆ ಒಬ್ಬರಂತೆ ಕಳಪೆ ಶಾಟ್ ಆಡಿ ಪೆವಿಲಿಯನ್ (Pavilion) ಪರೇಡ್ ಮಾಡುವುದನ್ನು ನೋಡಿ ನಿಮಗೂ ಸ್ವಲ್ಪ ಬೇಸರ ಆಗಿರುತ್ತದೆ. ಹೀಗೆ ತಂಡಕ್ಕೆ ಒಂದು ಜೊತೆಯಾಟದ ಅಗತ್ಯವಿರುವಾಗ ಒಂದು ಕಡೆಯಲ್ಲಿ ವಿರಾಟ್ ಕೊಹ್ಲಿ (Virat Kohli) ಅವರು ಚೆನ್ನಾಗಿ ಆಟವಾಡುತ್ತಿದ್ದು, ಇನ್ನೊಂದು ಕಡೆಯಲ್ಲಿ ನಿಂತು ಬ್ಯಾಟ್ ಮಾಡುತ್ತಿದ್ದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಅವರು ಬೇಡವಾದ ರಿವರ್ಸ್ ಸ್ವೀಪ್ ಹೊಡೆಯಲು ಹೋಗಿ ಸುಲಭವಾದ ಕ್ಯಾಚ್ ನೀಡಿ ಪೆವಿಲಿಯನ್ ಗೆ ಹೋದರು.


ರಿಷಭ್ ಪಂತ್ ಅವರನ್ನು ಪ್ರಶ್ನೆ ಮಾಡಿದ ರೋಹಿತ್ ಶರ್ಮಾ
ತಮ್ಮ ವಿಕೆಟ್ ಒಪ್ಪಿಸಿ ಡ್ರೆಸ್ಸಿಂಗ್ ರೂಮ್ ಗೆ ಹೋದ ರಿಷಭ್ ಪಂತ್ ಅವರನ್ನು ಅಂತಹ ಕಳಪೆ ಶಾಟ್ ಆಡಿದ್ದೇಕೆ? ಅಂತ ನಾಯಕ ರೋಹಿತ್ ಶರ್ಮಾ ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲಾ.. ಡ್ರೆಸ್ಸಿಂಗ್ ರೂಮ್ ನಲ್ಲಿ ನಡೆದಿದ್ದು ನಮಗೆ ಹೇಗೆ ಗೊತ್ತಾಯ್ತು ಅಂತ ನಿಮಗೆ ಕುತೂಹಲ ಇರಬೇಕಲ್ಲ? ರೋಹಿತ್ ಶರ್ಮಾ ಕಳಪೆ ಶಾಟ್ ಆಡಿ ಔಟ್ ಆಗಿ ಬಂದು ಡ್ರೆಸ್ಸಿಂಗ್ ರೂಮ್ ನಲ್ಲಿ ಕುಳಿತ ರಿಷಭ್ ಪಂತ್ ಅವರಿಂದ ವಿವರಣೆ ಕೇಳುತ್ತಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡಿ ಸಿಕ್ಕಾಪಟ್ಟೆ ವೈರಲ್ ಆಗಿದೆ.


ಈ ಘಟನೆಯು ಏಷ್ಯಾ ಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್ ಫೋರ್ ರೌಂಡ್ ನ ಆರಂಭಿಕ ಪಂದ್ಯದಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಪಂತ್ ಅವರು 12 ಎಸೆತಗಳಲ್ಲಿ 14 ರನ್ ಗಳನ್ನು ಮಾತ್ರವೇ ಗಳಿಸುವಲ್ಲಿ ಯಶಸ್ವಿಯಾದರು, ನಂತರ ತಮ್ಮ ವಿಕೆಟ್ ಅನ್ನು ರಿವರ್ಸ್ ಸ್ವೀಪ್ ಮಾಡಲು ಹೋಗಿ ಒಪ್ಪಿಸಿದರು. ಅವರು ಡ್ರೆಸ್ಸಿಂಗ್ ರೂಮ್ ಗೆ ಹಿಂದಿರುಗಿದ ತಕ್ಷಣ, ನಾಯಕ ರೋಹಿತ್ ಶರ್ಮಾ ಅವರು ಪಂತ್ ಅವರನ್ನು ತಮ್ಮ ಕಳಪೆ ಶಾಟ್ ಆಯ್ಕೆಗೆ ಕಾರಣವನ್ನು ಕೇಳುತ್ತಿರುವುದು ಈ ವಿಡಿಯೋದಲ್ಲಿ ನಾವು ನೋಡಬಹುದು.


ಇದನ್ನೂ ಓದಿ: Virat Kohli: RCB ಕಪ್​ ಗೆಲ್ಲದಿರಲು ಕೊಹ್ಲಿಯೇ ಕಾರಣ, ಶಾಕಿಂಗ್​ ಹೇಳಿಕೆ ನೀಡಿದ ಪಾಕ್​ ಮಾಜಿ ಆಟಗಾರ


ವಿಡಿಯೋದಲ್ಲಿ ಏನಿತ್ತು?
ಈ ವಿಡಿಯೋದಲ್ಲಿ, ಪಂತ್ ಅವರು ಶಾಟ್ ಅನ್ನು ಏಕೆ ಆಡಿದರು ಎಂದು ತಮ್ಮ ನಾಯಕನಿಗೆ ವಿವರಿಸುತ್ತಿರುವುದನ್ನು ಸಹ ನಾವು ನೋಡಬಹುದು. ಪಂತ್ ಅವರು ಆಟ ಆಡುವ ಹನ್ನೊಂದು ಆಟಗಾರರಲ್ಲಿ ದಿನೇಶ್ ಕಾರ್ತಿಕ್ ಅವರಿಂದ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ ಮತ್ತು ಇವರಿಗೆ ಸಿಕ್ಕ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ ಎಂಬುದನ್ನು ಯುವ ಆಟಗಾರ ಅರಿತುಕೊಳ್ಳಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.


ಭಾನುವಾರ ಇಲ್ಲಿ ನಡೆದ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಮೊದಲು ಬ್ಯಾಟ್ ಮಾಡಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿದ್ದು, ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿ ಕೊಟ್ಟಿದ್ದಾರೆ.


ಅತ್ಯುತ್ತಮ ಪ್ರದರ್ಶನ ತೋರಿಸಿದ ಆಟಗಾರರು 
ನಾಯಕ ರೋಹಿತ್ ಶರ್ಮಾ (28) ಮತ್ತು ಕೆ.ಎಲ್.ರಾಹುಲ್ (28) ಪವರ್ ಪ್ಲೇ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರೆ, ನಂತರ ಕ್ರೀಸ್ ಗೆ ಇಳಿದಂತಹ ವಿರಾಟ್ ಕೊಹ್ಲಿ ಅವರು (60) ಇತ್ತೀಚಿನ ದಿನಗಳಲ್ಲಿ ತಮ್ಮ ಅತ್ಯಂತ ಶ್ರೇಷ್ಠ ಹೊಡೆತಗಳಲ್ಲಿ  ಆಡುವ ಮೂಲಕ ಭಾರತವನ್ನು ಗೌರವಾನ್ವಿತ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕೆ ಕೊಂಡೊಯ್ಯುವ ಮೂಲಕ ತಮ್ಮ ಹಳೆಯತನದ ನೋಟವನ್ನು ನೀಡಿದರು.


ಇದನ್ನೂ ಓದಿ:  Virat Kohli: ನನ್ನ ಅತೀ ಕಷ್ಟದ ಕಾಲದಲ್ಲಿ ಫೋನ್ ಮಾಡಿದ್ದು ಧೋನಿ ಮಾತ್ರ, ಇನ್ಯಾರೂ ಅಲ್ಲ!

top videos


    ಭಾರತದ ಅಗ್ರ ಕ್ರಮಾಂಕದಿಂದ ಪ್ರತಿಯೊಬ್ಬರೂ ಅವರ ಮನಸ್ಥಿತಿಯಲ್ಲಿನ ಬದಲಾವಣೆ ಬಯಸುತ್ತಿದ್ದರು ಮತ್ತು ಇದಕ್ಕೆ ರೋಹಿತ್ ಅವರ 175, ರಾಹುಲ್ ಅವರ 140 ಮತ್ತು ಕೊಹ್ಲಿ ಅವರ 136 ಸ್ಟ್ರೈಕ್ ರೇಟ್ ಇದಕ್ಕೆ ಸಾಕ್ಷಿಯಾಗಿದೆ. ಕೊನೆಗೆ ಭಾರತ ತಂಡವನ್ನು ಪಾಕಿಸ್ತಾನ ತಂಡವು ಸೋಲಿಸುವಲ್ಲಿ ಯಶಸ್ವಿಯಾಯಿತು.

    First published: