• Home
  • »
  • News
  • »
  • sports
  • »
  • Kohli-Rohit: 1 ವರ್ಷದಲ್ಲಿ 200 ರನ್​ ಗಳಿಸದ ಕೊಹ್ಲಿ, ರೋಹಿತ್​! ಇವ್ರಗಿಂತ 2 ಪಟ್ಟು ಮುಂದಿದ್ದಾರೆ ಗಿಲ್​​-ಅಯ್ಯರ್​!

Kohli-Rohit: 1 ವರ್ಷದಲ್ಲಿ 200 ರನ್​ ಗಳಿಸದ ಕೊಹ್ಲಿ, ರೋಹಿತ್​! ಇವ್ರಗಿಂತ 2 ಪಟ್ಟು ಮುಂದಿದ್ದಾರೆ ಗಿಲ್​​-ಅಯ್ಯರ್​!

ರೋಹಿತ್-ವಿರಾಟ್

ರೋಹಿತ್-ವಿರಾಟ್

IND vs BAN 2nd ODI: ಟೀಮ್ ಇಂಡಿಯಾ ಪ್ರಸ್ತುತ ಬಾಂಗ್ಲಾದೇಶ ಪ್ರವಾಸದಲ್ಲಿದೆ. ಆದರೆ ಮೊದಲ ಏಕದಿನ ಪಂದ್ಯದಲ್ಲಿ ಭಾರತ ದಿಗ್ಗಜ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ.

  • Share this:

ರೋಹಿತ್ ಶರ್ಮಾ ಈ ವರ್ಷ ಬ್ಯಾಟಿಂಗ್‌ನಲ್ಲಿ ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಟಿ20 ವಿಶ್ವಕಪ್‌ನಲ್ಲೂ ಭಾರತದ ನಾಯಕ ಲಯದಲ್ಲಿ ಇರಲಿಲ್ಲ. ಸದ್ಯ ಟೀಂ ಇಂಡಿಯಾ ಬಾಂಗ್ಲಾದೇಶ (IND vs BAN) ಪ್ರವಾಸದಲ್ಲಿದೆ. ಮೊದಲ ODI ನಲ್ಲಿ ಭಾರತ ತಂಡ ಬಾಂಗ್ಲಾ ವಿರುದ್ಧ ಒಂದು ವಿಕೆಟ್‌ನಿಂದ ಸೋಲಿಸಲ್ಪಟ್ಟರು. ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಇಬ್ಬರೂ ವಿಫಲರಾಗಿದ್ದರು. 2022ರ ವರ್ಷದಲ್ಲಿ ಕೊಹ್ಲಿ ಮತ್ತು ರೋಹಿತ್ ಶರ್ಮಾ ODIಗಳಲ್ಲಿ ಹೆಚ್ಚಿನ ರನ್ ಗಳಿಸಿಲ್ಲ. ಇದೀಗ ಈ ಇಬ್ಬರು ಆಟಗಾರರಿಗೆ ವರ್ಷ ಕೇವಲ 2 ODIಗಳು ಮಾತ್ರ ಉಳಿದಿವೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯ ನಾಳೆ ಮೀರ್‌ಪುರದಲ್ಲಿ ನಡೆಯಲಿದೆ. ಭಾರತ ಸರಣಿ ಗೆಲ್ಲಲು ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಿದೆ.


ಏಕದಿನ ಕ್ರಿಕೆಟ್​ನಲ್ಲಿ ಮಿಂಚದ ರೋಹಿತ್-ಕೊಹ್ಲಿ:


ರೋಹಿತ್ ಶರ್ಮಾ ಅವರು 2022ರಲ್ಲಿ 7 ODIಗಳಲ್ಲಿ 33ರ ಸರಾಸರಿಯಲ್ಲಿ 198 ರನ್ ಗಳಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಗಳಿಸಿದ್ದಾರೆ. ಅಜೇಯ 76 ರನ್ ಅವರ ದೊಡ್ಡ ಸ್ಕೋರ್ ಆಗಿದೆ. ಸ್ಟ್ರೈಕ್ ರೇಟ್ 104 ಆಗಿತ್ತು. ಮತ್ತೊಂದೆಡೆ ವಿರಾಟ್ ಕೊಹ್ಲಿ ಇಲ್ಲಿಯವರೆಗೆ 9 ಏಕದಿನ ಪಂದ್ಯಗಳಲ್ಲಿ 21ರ ಸರಾಸರಿಯಲ್ಲಿ 184 ರನ್ ಗಳಿಸಿದ್ದಾರೆ. 2 ಅರ್ಧಶತಕ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 74 ಆಗಿದೆ. ಆದರೆ, ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡಿ ಗರಿಷ್ಠ 296 ರನ್ ಗಳಿಸಿದ್ದರು. ಇದಲ್ಲದೇ ಭಾರತದ ಮಾಜಿ ನಾಯಕ ಟಿ20 ಏಷ್ಯಾಕಪ್ ನಲ್ಲೂ ಶತಕ ಸಿಡಿಸಿದ್ದರು.


ಧವನ್ 700 ರನ್‌ಗಳ ಸಮೀಪ:


ಶಿಖರ್ ಧವನ್ 2022 ರಲ್ಲಿ ಭಾರತದ ಪರ ODIಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು ಇದುವರೆಗೆ 20 ಪಂದ್ಯಗಳಲ್ಲಿ 38ರ ಸರಾಸರಿಯಲ್ಲಿ 677 ರನ್ ಗಳಿಸಿದ್ದಾರೆ. 6 ಅರ್ಧಶತಕ ಗಳಿಸಿದ್ದಾರೆ. 97 ರನ್ ಗರಿಷ್ಠ ಸ್ಕೋರ್ ಆಗಿದೆ. ಸ್ಟ್ರೈಕ್ ರೇಟ್ 74 ಆಗಿದೆ. ಮತ್ತೊಂದೆಡೆ, ಶ್ರೇಯಸ್ ಅಯ್ಯರ್ 15 ಪಂದ್ಯಗಳಲ್ಲಿ 58 ಸರಾಸರಿಯಲ್ಲಿ 639 ರನ್ ಗಳಿಸಿದ್ದಾರೆ ಮತ್ತು ಅವರು ಹೆಚ್ಚು ರನ್ ಗಳಿಸಿದ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಒಂದು ಶತಕ ಮತ್ತು 5 ಅರ್ಧಶತಕಗಳನ್ನು ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 94 ಆಗಿದೆ.


ಇದನ್ನೂ ಓದಿ: Women Cricketer: ಸುಖ ಸಂಸಾರಕ್ಕೆ ಸಖಿಯರೇ ಸಾಕಂತೆ! ಗೆಳತಿಯರ ಜೊತೆ ಸಪ್ತಪದಿ ತುಳಿದ ಮಹಿಳಾ ಕ್ರೀಡಾಪಟುಗಳು ಇವರು!


ಭಾರತದ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಕೂಡ 2022ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 12 ಪಂದ್ಯಗಳಲ್ಲಿ 71ರ ಸರಾಸರಿಯಲ್ಲಿ 638 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು 4 ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ವರ್ಷ ಯಾವುದೇ ಭಾರತೀಯ ಏಕದಿನ ಪಂದ್ಯಗಳಲ್ಲಿ 600 ರನ್ ತಲುಪಲು ಸಾಧ್ಯವಾಗಿಲ್ಲ.


ನಾಳೆ ಭಾರತ-ಬಾಂಗ್ಲಾ ಪಂದ್ಯ:


ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶಕ್ಕೆ (IND vs BAN) ನಡುವಿನ 3 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯವು ನಾಳೆ ಢಾಕಾದಲ್ಲಿ ನಡೆಯಲಿದೆ. 2023ರ ODI ವಿಶ್ವಕಪ್‌ಗಾಗಿ (ODI World Cup) ಬಾಂಗ್ಲಾದೇಶ ವಿರುದ್ಧದ ಸರಣಿಯು ಹೆಚ್ಚಿನ ಮಹತ್ವದ್ದಾಗಿದೆ. ಇನ್ನು, 2023ರ ವಿಶ್ವಕಪ್‌ಗೆ (ODI Wrld Cup) ಆತಿಥ್ಯ ವಹಿಸಲಿರುವ ಭಾರತವು ಈಗಾಗಲೇ ODI ವಿಶ್ವಕಪ್ ಸೂಪರ್ ಲೀಗ್‌ಗೆ ಅರ್ಹತೆ ಪಡೆದಿದೆ. ಈಗಾಗಲೇ ಸರಣಿಯಲ್ಲಿ ಭಾರತ ತಂಡ ಮೊದಲ ಪಂದ್ಯ ಸೋತಿದ್ದು, ಬಾಂಗ್ಲಾದೇಶ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಹೀಗಾಗಿ ನಾಳಿನ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು